ನವದೆಹಲಿ: ಕಳೆದೆರಡು ತಿಂಗಳಿನಿಂದ ಲಾಕ್​ಡಾನ್​ ಕಾರಣದಿಂದಾಗಿ ದೇಶಾದ್ಯಂತ ಆರ್ಥಿಕ ಚಟುವಟಿಕೆಗಳೆಲ್ಲವೂ ಬಂದ್​ ಆಗಿವೆ. ಹೀಗಾಗಿ ಸರ್ಕಾರಕ್ಕೆ ಆದಾಯವೇ ಇಲ್ಲದಂತಾಗಿದೆ. ಸಂಕಷ್ಟ ಎಷ್ಟರಮಟ್ಟಿಗೆ ಬಂದೆರಗಿದೆ ಎಂದರೆ, ಸರ್ಕಾರಿ ನೌಕರರ ಸಂಬಳ ಪಾವತಿಗೂ ಬಳಿ ದುಡ್ಡಿಲ್ಲದಂತಾಗಿದೆ.
ದೇಶದ ಹಲವು ರಾಜ್ಯಗಳಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಕೇರಳ ಸರ್ಕಾರ ನೌಕರರ ಒಂದು ತಿಂಗಳ ಸಂಬಳ ಕಡಿತ ಮಾಡಿಯೇ ಸಿದ್ಧ ಎಂದು ಅದಕ್ಕಾಗಿ ವಿಶೇಷ ಕಾಯ್ದೆಯನ್ನೇ ರೂಪಿಸಿದೆ. ಇದೀಗ, ನೌಕರರ ಸಂಬಳ ಪಾವತಿಗೆ ಹಣ ನೀಡುವಂತೆ ಕೋರಿ ದೆಹಲಿ ಕೇಂದ್ರ ಸರ್ಕಾರದ ಮೊರೆ ಹೋಗಿದೆ.
ಕೇಂದ್ರದಿಂದ ತುರ್ತು ಪರಿಹಾರವಾಗಿ 5,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ದೆಹಲಿ ಸರ್ಕಾರ ಮನವಿ ಮಾಡಿದೆ ಎಂದು ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಹೇಳಿದ್ದಾರೆ. ಸಿಸೋಡಿಯಾ ದೆಹಲಿಯ ಹಣಕಾಸು ಸಚಿವರೂ ಆಗಿದ್ದಾರೆ.
ಇದನ್ನೂ ಓದಿ;ಕಾಲ್ನಡಿಗೆ, ಬಸ್​, ರೈಲು ಹಿಡಿದು ಊರಿಗೆ ಬಂದಾಯ್ತು…., ಮುಂದೇನು?
ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಪತ್ರ ಬರೆದಿದ್ದು, ನೆರವು ನೀಡುವಂತೆ ಕೋರಿದ್ದಾರೆ. ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿರುವ ವಿಕೋಪ ಪರಿಹಾರ ನಿಧಿಯನ್ನು ದೆಹಲಿಗೆ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಆದಾಯ ಹಾಗೂ ಕನಿಷ್ಠ ವೆಚ್ಚವನ್ನು ಪರಾಮರ್ಶೆ ಮಾಡಲಾಗಿದೆ. ಅದರಂತೆ, ಸಂಬಳ ಪಾವತಿ ಹಾಗೂ ಕಚೇರಿ ವೆಚ್ಚಕ್ಕಾಗಿ ಪ್ರತಿ ತಿಂಗಳು ಕನಿಷ್ಠ 3,500 ಕೋಟಿ ರೂ.ಗಳ ಅಗತ್ಯವಿದೆ. ಕಳೆದ ಎರಡು ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ ಕೇವಲ ತಲಾ 500 ಕೋಟಿ ರೂ. ಆಗಿದೆ. ಸದ್ಯ ಸರ್ಕಾರದ ಬಳಿ 1,735 ಕೋಟಿ ರೂ. ಮಾತ್ರ ಇದೆ ಎಂದು ಸಿಸೋಡಿಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ;ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳಲ್ಲಿ 80 ವಲಸೆ ಕಾರ್ಮಿಕರ ಸಾವು
ಎರಡು ತಿಂಗಳ ಸಂಬಳ ಪಾವತಿಗಾಗಿ ಸರ್ಕಾರಕ್ಕೆ 7,000 ಕೋಟಿ ರೂ. ಅಗತ್ಯವಾಗಿದೆ. ಇಲ್ಲದಿದ್ದರೆ, ಸಂಬಳ ಪಾವತಿ ಸಾಧ್ಯವಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ. ದೆಹಲಿಯಲ್ಲಿ 19,000 ಜನರಿಗೆ ಕರರೊನಾ ಸೋಂಕು ಕಾಣಿಸಿಕೊಂಡಿದ್ದು, 416 ಜನರು ಮೃತಪಟ್ಟಿದ್ದಾರೆ.
ಕರೊನಾದಿಂದ ಸತ್ತವರ ಹೆಣವಿಡಲು ಜಾಗವಿಲ್ಲ, ಚಿತಾಗಾರದಲ್ಲಿ ಸುಡಲೂ ಆಗುತ್ತಿಲ್ಲ, ದೆಹಲಿಯಲ್ಲಿ ಬಿಗಡಾಯಿಸಿದೆ ಸ್ಥಿತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − thirteen =
Remember me
