ನವದೆಹಲಿ:ಡಿಫೆನ್ಸ್ ಕ್ಯಾಂಟೀನ್​ಗಳಲ್ಲಿ ಇನ್ನು ವಿದೇಶಿ ಮದ್ಯವೂ ಸೇರಿ ಆಮದು ಮಾಡಿಕೊಂಡ ಉತ್ಪನ್ನಗಳು ಸಿಗಲಾರವು. ಆಮದು ಮಾಡಿಕೊಂಡ ಫಿನಿಶ್ಡ್​ ಗೂಡ್ಸ್ ಗಳನ್ನು ಡಿಫೆನ್ಸ್ ಕ್ಯಾಂಟೀನ್​ಗಳಲ್ಲಿ ಮಾರಾಟ ಮಾಡುವುದಕ್ಕೆ ನಿಷೇಧ ಹೇರುವ ನಿರ್ಧಾರವನ್ನು ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್​ಮೆಂಟ್ ತೆಗೆದುಕೊಂಡಿದೆ. ಈ ಆದೇಶದ ಕಾರಣ ಕ್ಯಾಂಟೀನ್​ನಲ್ಲಿ ಮದ್ಯ, ಚಪ್ಪಲಿ ಸೇರಿದಂತೆ ಸುಮಾರು 420 ವಸ್ತುಗಳ ಮಾರಾಟ ಸ್ಥಗಿತಗೊಂಡಿವೆ.
ಮದ್ಯಗಳಲ್ಲಿ ಸ್ಕಾಚ್​ಗಳನ್ನು ಸೀಲ್ಡ್​ ಬಾಟೆಲ್​ಗಳ ರೂಪದಲ್ಲಿ ತರಿಸಿಕೊಳ್ಳಲಾಗುತ್ತಿದ್ದು, ಇನ್ನು ಮುಂದೆ ಅದು ಸಿಎಸ್​ಡಿಯಲ್ಲಿ ಲಭ್ಯವಿರುವುದಿಲ್ಲ. ಸಿಎಸ್​ಡಿಗಳಲ್ಲಿ ಇದುವರೆಗೆ 5,500 ಸಾಮಾಗ್ರಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿ 420 ಸಾಮಾಗ್ರಿಗಳು ಬೇರೆ ದೇಶಗಳಿಂದ ಫಿನಿಶಡ್ ರೂಪದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅದರಲ್ಲಿ ಹೆಚ್ಚಿನ ಪಾಲು ಚೀನಾದ ವಸ್ತುವಾಗಿತ್ತು. ಶೌಚಗೃಹ ಬ್ರಷ್​ಗಳು, ಎಲೆಕ್ಟ್ರಿಕ್ ಕೆಟಲ್, ಸ್ಯಾಂಡ್​ವಿಚ್ ಟೋಸ್ಟರ್, ಲ್ಯಾಪ್​ಟಾಪ್, ಹ್ಯಾಂಡ್​ಬ್ಯಾಗ್ ಸೇರಿ ಅನೇಕ ವಸ್ತುಗಳು ಚೀನಾದಿಂದ ಆಮದು ಆಗುತ್ತಿದ್ದು, ಇದೀಗ ಅದು ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ:ವರುಣ್ ಚಕ್ರವರ್ತಿ ಸ್ಪಿನ್ ಬಲೆಯಲ್ಲಿ ಡೆಲ್ಲಿ ವಿಲವಿಲ, ಕೆಕೆಆರ್ ಪ್ಲೇಆಫ್​ ಆಸೆಗೆ ಬಲ
ವಿದೇಶಗಳಲ್ಲಿ ತಯಾರಾಗಿ ಅಲ್ಲೇ ಪ್ಯಾಕ್ ಆಗಿ ಬರುವಂಥ ವಸ್ತುಗಳಿಗಷ್ಟೇ ಈ ನಿಷೇಧ ಲಾಗೂ ಆಗಿರಲಿದೆ. ವಿದೇಶಗಳಿಂದ ಸಾಮಾಗ್ರಿ ತರಿಸಿಕೊಂಡು ಭಾರತದಲ್ಲಿ ಪ್ಯಾಕ್ ಮಾಡಿರುವ ಔಷಧಕ್ಕೆ ನಿಷೇಧ ಅನ್ವಯವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಯೋಜನೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)
ಶ್ರೀಲಂಕಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಐಸಿಐಸಿಐ ಬ್ಯಾಂಕ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + two =
Remember me
