ಹೈದರಾಬಾದ್​:ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ಕಾರಣಗಳಿಗೆ ಮದುವೆಗಳು ಮುರಿಯುತ್ತಿರುವುದು ವರದಿಯಾಗುತ್ತಿದೆ. ಇದೀಗ ಆ ಸಾಲಿಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದ್ದು, ಮಟನ್​ ಬೋನ್​ ಮ್ಯಾರೋ ಐಟಂ ಮಾಡಿಸಲಿಲ್ಲ ಅಂತ ವರನ ಕಡೆಯವರು ಮದುವೆ ಮುರಿದುಕೊಂಡಿರುವ ಪ್ರಸಂಗ ತೆಲಂಗಾಣದಲ್ಲಿ ನಡೆದಿದೆ.
ನಿಜಾಮಾಬಾದ್‌ ಮೂಲದ ವಧು ಮತ್ತು ಜಗತಿಯಾಲ್‌ ಮೂಲದ ವರನ ನಡುವೆ ಕಳೆದ ನವೆಂಬರ್‌ನಲ್ಲಿ ವಧುವಿನ ನಿವಾಸದಲ್ಲಿ ನಿಶ್ಚಿತಾರ್ಥ ನೇರವೇರಿತ್ತು. ಈ ವೇಳೆ ಊಟದ ಮೆನು ವಿಚಾರದಲ್ಲಿ ಎರಡೂ ಕುಟುಂಬಗಳ ನಡುವೆ ಉಂಟಾದ ಮನಸ್ತಾಪಕ್ಕೆ ನಿಶ್ಚಿತಾರ್ಥದಂದೇ ಮದುವೆ ಮುರಿದುಬಿದ್ದಿದೆ.
ವಧುವಿನ ಮನೆಯವರು ತಮ್ಮ ಕುಟುಂಬದ ಸದಸ್ಯರು ಮತ್ತು ವರನ ಸಂಬಂಧಿಕರು ಸೇರಿದಂತೆ ಅತಿಥಿಗಳಿಗೆ ಮಾಂಸಾಹಾರಿ ಮೆನುವನ್ನು ನಿರ್ಧರಿಸಿದ್ದರು. ಆದರೆ, ನಾವು ಹೇಳಿದಂತೆ ಮಟನ್ ಬೋನ್​ ಮ್ಯಾರೋವನ್ನು ಬಡಿಸಲಿಲ್ಲ ಅಂತ ಆಕ್ರೋಶಗೊಂಡ ವರನ ಕಡೆಯವರು ಜಗಳ ಮಾಡಿ ಮದುವೆಯನ್ನೇ ರದ್ದು ಮಾಡಿದ್ದಾರೆ. ನಾವು ಊಟದ ಮೆನುವಿನಲ್ಲಿ ಮಟನ್​ ಬೋನ್​ ಮ್ಯಾರೋ ಸೇರಿಸಲಿಲ್ಲ ಎಂದು ಸ್ಪಷ್ಟನೆ ನೀಡಲು ಪ್ರಯತ್ನಿಸಿದರೂ ವರನ ಕಡೆಯವರು ಒಪ್ಪದೆ ಅಲ್ಲಿಂದ ಹೊರ ನಡೆದರು.
ಈ ವಿವಾದ ಕೊನೆಗೆ ಪೊಲೀಸ್​ ಠಾಣೆಯ ಮೆಟ್ಟಿಲು ಸಹ ಏರಿತು. ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ವರನ ಕಡೆಯವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ವಧುವಿನ ಕುಟುಂಬವು ಮಟನ್​ ಬೋನ್​ ಮ್ಯಾರೋ ಬಡಿಸದೆ ಅವಮಾನಿಸಿದ್ದಾರೆ ಎಂದರು. ಅಲ್ಲದೆ, ಊಟದ ಮೆನುವಿನಲ್ಲಿ ಮಟನ್​ ಮೂಳೆ ಸೇರಿಸದಿರುವ ಬಗ್ಗೆ ವಧುವಿನ ಕಡೆಯವರು ನಮಗೆ ಮೊದಲೇ ತಿಳಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿ, ಮದುವೆ ಮಾಡಿಕೊಳ್ಳಲು ಒಪ್ಪಲೇ ಇಲ್ಲ. ಅಂತಿಮವಾಗಿ ಎರಡೂ ಕುಟುಂಬದವರು ಮದುವೆಯನ್ನು ಮುರಿದುಕೊಂಡರು.(ಏಜೆನ್ಸೀಸ್​)
ವಿವಾದ ವಿಕಾಸದ ದಾರಿ; ಸಭ್ಯತೆಯ ಚೌಕಟ್ಟು ಮೀರಿದ ಟೀಕೆಗಳು

ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ, ಒತ್ತಡಕ್ಕೆ ಹೇಳಿ ಗುಡ್​ಬೈ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + twenty =
Remember me
