ಭುವನೇಶ್ವರ:‘ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಅವರ ಸ್ವಾಬ್​ ತೆಗೆದು ಕೋವಿಡ್​-19 ಪರೀಕ್ಷೆ ಕಳುಹಿಸಲಾಗಿದೆ.. ಇನ್ನೂ ಟೆಸ್ಟ್​ ವರದಿ ಬರದ್ದರಿಂದ ಶವ ಹಸ್ತಾಂತರ ಮಾಡಿಲ್ಲ.. ವಾರಸುದಾರರಿಗೆ ಶವ ಹಸ್ತಾಂತರಿಸಲು ಕರೊನಾ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ..’
– ಕರೊನಾ ಹಿನ್ನೆಲೆಯಲ್ಲಿ ಇಂಥ ಹಲವು ಸಂದಿಗ್ಧ ಎದುರಾಗುವುದು ಹೊಸದೇನಲ್ಲ. ಇದೀಗ ಇಂಥ ಸನ್ನಿವೇಶಗಳು ಸೃಷ್ಟಿ ಆಗದಿರಲೆಂದೇ ಸತ್ತ ಮೇಲೆ ಕರೊನಾ ಪರೀಕ್ಷೆ ಮಾಡಿಸುವ ಅಗತ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಅಂದಹಾಗೆ, ಹೀಗೊಂದು ಆದೇಶ ಹೊರಡಿಸಿದ್ದು ಒಡಿಶಾ ಸರ್ಕಾರದ ಆರೋಗ್ಯ ಇಲಾಖೆ. ಆಸ್ಪತ್ರೆಯಲ್ಲಿ ನಾನಾ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಕೋವಿಡ್-19 ಟೆಸ್ಟ್​ನಿಂದಾಗಿ ಶವ ಹಸ್ತಾಂತರ ವಿಳಂಬ ಇತ್ಯಾದಿ ಸಂಕಷ್ಟ ಉಂಟಾಗಿದ್ದು ವರದಿಯಾಗಿದೆ. ಆಸ್ಪತ್ರೆಯಲ್ಲಿ ತಮ್ಮವರನ್ನು ಕಳೆದುಕೊಂಡ ಸಂಬಂಧಿಕರು ಮೊದಲೇ ನೊಂದಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಶವ ಹಸ್ತಾಂತರ ವಿಳಂಬ ಆಗುವುದು ಮತ್ತಿತರ ಕಾರಣಗಳಿಂದ ಇನ್ನಷ್ಟು ನೋವು ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಈ ಆದೇಶ ಮಾಡಿರುವುದಾಗಿ ಹೇಳಿಕೊಂಡಿದೆ. ಜತೆಗೆ ಕೋವಿಡ್​ನಿಂದ ಮೃತಪಟ್ಟವರ ಕುಟುಂಬಕ್ಕೆ 48 ಗಂಟೆಯೊಳಗೆ ಡೆತ್​ ಸರ್ಟಿಫಿಕೇಟ್​ ಕೊಡಬೇಕು ಎಂಬುದಾಗಿಯೂ ತಾಕೀತು ಮಾಡಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − three =
Remember me
