ಕಳೆದ ಏಳು ದಶಕಗಳಲ್ಲಿ ಜಮ್ಮು&ಕಾಶ್ಮೀರ ಭಯೋತ್ಪಾದನೆ, ಹಿಂಸೆ, ರಕ್ತಪಾತ, ಅಸ್ಥಿರತೆಯನ್ನು ಕಂಡು ರೋಸಿ ಹೋಗಿದೆ. ಆ ರಾಜ್ಯಕ್ಕಿದ್ದ “ವಿಶೇಷ ಸ್ಥಾನಮಾನ’ವೇ ಕಣಿವೆ ಪ್ರದೇಶದ ಸಮಸ್ಯೆಯನ್ನು, ಪ್ರತ್ಯೇಕತೆಯನ್ನು ಹೆಚ್ಚಿಸಿತ್ತು. ಆದರೆ, 370ನೇ ವಿಧಿಯನ್ನು ಹಿಂಪಡೆ ಯುವುದು ಸುಲಭವಾಗಿರಲಿಲ್ಲ. ಹಾಗಾಗಿ, ಈ ಹಿಂದಿನ ಕೇಂದ್ರ ಸರ್ಕಾರಗಳು ಹಳೆಯ ನೀತಿಯನ್ನೇ ಮುಂದುವರಿಸಿಕೊಂಡು ಬಂದವು.
ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ದಿಟ್ಟ ರ್ನಿಣಯ ಕೈಗೊಂಡು ಜಮ್ಮು&ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಹಿಂಪಡೆಯಲಾಯಿತು. ಇದೆಲ್ಲವೂ ಈಗ ಇತಿಹಾಸ. ಆದರೆ, ಇಂಥ ಸೂಕ್ಷ$್ಮ ವಿಷಯಗಳನ್ನು ಇರಿಸಿಕೊಂಡು ಮತ್ತೆ ವಿವಾದ ಸೃಷ್ಟಿಸಲು ಕೆಲ ನಾಯಕರು ಯತ್ನಿಸುತ್ತಿರುವುದು ಖಂಡನೀಯ. ಕಾಂಗ್ರೆಸ್​ ಮುಖಂಡ ದಿಗ್ವಿಜಯ ಸಿಂಗ್​ “ಕಾಂಗ್ರೆಸ್​ ಅಧಿಕಾರಕ್ಕೆ ಮರಳಿದರೆ ಜಮ್ಮು& ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಪರಿಶೀಲನೆ ನಡೆಸಲಾಗುವುದು’ ಎಂದಿದ್ದಾರೆ.
ಇಂಥ ಹೇಳಿಕೆ ಈ ಹೊತ್ತಲ್ಲಿ ಬೇಕಿತ್ತಾ? ಕಣಿವೆ ರಾಜ್ಯವನ್ನು ಅಭಿವೃದ್ಧಿಯ ಮುಂಚೂಣಿಗೆ ತರಲು ಈಗ ಶ್ರಮಿಸಬೇಕಿದೆಯೇ ಹೊರತು ವಿವಾದ, ಅಶಾಂತಿ ಸೃಷ್ಟಿಸುವುದಲ್ಲ ಎಂಬುದನ್ನು ಎಲ್ಲ ನಾಯಕರೂ ಅರ್ಥಮಾಡಿಕೊಳ್ಳಬೇಕು.> ವಿಕಾಸ್​ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
