ಗುವಾಹಟಿ: ಇಡೀ ಪ್ರಪಂಚದಲ್ಲೇ ಕರೊನಾವೈರಸ್ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಇದನ್ನು ತಡೆಗಟ್ಟಲು ಪ್ರಮುಖವಾಗಿ ಬಳಸುತ್ತಿರುವ ಅಸ್ತ್ರ ಮಾಸ್ಕ್. ಎಲ್ಲ ಕಡೆ ಸರ್ಕಾರಗಳು ಜನರಿಗೆ ದಯವಿಟ್ಟು ಮಾಸ್ಕ್ ಹಾಕಿ ಅಂತಾ ಹೇಳುವುದಲ್ಲದೇ, ಮಾಸ್ಕ್ ಹಾಕದಿದ್ದರೇ ದಂಡ, ಜೈಲುವಾಸದ ಶಿಕ್ಷೆ ನೀಡುತ್ತಿವೆ.
ಆದರೆ, ಅಸ್ಸಾಂನಲ್ಲಿ ಮಾತ್ರ ಸ್ವತಃ ಆರೋಗ್ಯ ಸಚಿವರೇ ಜನರಿಗೆ ಮಾಸ್ಕ್ ಹಾಕಬೇಡಿ ಎಂದು ವಿವಾದಕ್ಕೊಳಗಾಗಿದ್ದಾರೆ. ಅಸ್ಸಾಂ ಆರೋಗ್ಯ ಸಚಿವ ಹಿಮಾಂಶು ಬಿಸ್ವಾ ಶರ್ಮಾ ಅವರೇ ಈ ವಿವಾದಾತ್ಮಕ ಹೇಳಿಕೆ ನೀಡಿದವರು.
ಭಾನುವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಅಸ್ಸಾಂನಲ್ಲಿ ಜನ ಮಾಸ್ಕ್​ ಧರಿಸುವುದು ಅವಶ್ಯಕತೆ ಇಲ್ಲ. ಏಕೆಂದರೆ ಅಸ್ಸಾಂನಲ್ಲಿ ಕರೊನಾವೈರಸ್ ಹಾವಳಿ ಇಲ್ಲ ಎಂದು ಹೇಳಿದ್ದಾರೆ. ಶರ್ಮಾ ಅವರ ಈ ಹೇಳಿಕೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ.
ದೇಶದಲ್ಲಿ ಕೋವಿಡ್ ಎರಡನೇ ಅಲೆ ಪಸರಿಸುತ್ತಿರುವುದರಿಂದ ಸರ್ಕಾರಗಳು ಚಿಂತಾಕ್ರಾಂತವಾಗಿವೆ. ಅಲ್ಲಲ್ಲಿ ಲಾಕ್​ಡೌನ್​ಗಳು ಜಾರಿಯಾಗುತ್ತಿವೆ. ವೈರಸ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳುತ್ತಿವೆ. ಇಂತಹ ಸಮಯದಲ್ಲೇ ಅಸ್ಸಾಂ ಆರೋಗ್ಯ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಸ್ಸಾಂನಲ್ಲಿ ಇದುವರೆಗೆ 2.19 ಲಕ್ಷ ಜನಕ್ಕೆ ಸೋಂಕು ತಗುಲಿತ್ತು. ಇಂದು ಹೊಸದಾಗಿ 68 ಜನಕ್ಕೆ ಕೋವಿಡ್ ಸೋಂಕು ತಗುಲಿದೆ. 1,107 ಜನ ಅಸ್ಸಾಂನಲ್ಲಿ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.
ರವಿಕೆ ಖರೀದಿಗೆ ಹೋಗಿದ್ದ ವಿಧಾನ ಪರಿಷತ್ ಸದಸ್ಯೆ ಪರ್ಸ್ ಕಳವು!

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
