ಶ್ರೀನಗರ:ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದ ಆರ್ಟಿಕಲ್​ 370 ಅನ್ನು ವಾಪಾಸು ಜಾರಿಗೊಳಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್​ ಶಾನವಾಜ್​ ಹುಸೇನ್​ ಹೇಳಿದ್ದಾರೆ.
ಇದನ್ನೂ ಓದಿ:ಎರಡನೇ ಮಗುವಿಗೆ ಜನ್ಮ ನೀಡುವ ತಾಯಿಗೆ ಸರ್ಕಾರದಿಂದ 6 ಸಾವಿರ ರೂಪಾಯಿ
370ನೇ ಪರಿಚ್ಛೇದ ರದ್ದತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ. ಹಾಗಿದ್ದರೂ ಕೆಲವರು ಸುಪ್ರೀಂ ಕೋರ್ಟ್​ಗೆ ಹೋಗಿದ್ದಾರೆ. ನಿಯಮ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್​ ಸ್ಪಷ್ಟನೆ ಕೊಟ್ಟಿದೆ. ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದಾಗಿದೆ. ಅದನ್ನು ವಾಪಾಸು ಕೊಡುವ ಮಾತೇ ಇಲ್ಲ. ಯಾವ ಶಕ್ತಿಯಿಂದಲೂ ಅದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಈ ವರ್ಷದ ಅತಿ ಕೆಟ್ಟ ಪಾಸ್​ವರ್ಡ್​ಗಳಿವು; ನೀವೂ ಇದೇ ಪಾಸ್​ವರ್ಡ್​ ಇಟ್ಟಿದ್ದರೆ ಬೇಗ ಬದಲಾಯಿಸಿಕೊಳ್ಳಿ
ಇಲ್ಲಿನ ಕೆಲ ರಾಜಕಾರಣಿಗಳು ಸ್ವಜನ ಪಕ್ಷಪಾತಿಗಳಾಗಿದ್ದು, ತಮ್ಮ ಕುಟುಂಬ ಸದಸ್ಯರ ಉದ್ಧಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರು ಮಾತ್ರ ಬಡವರಾಗಿಯೇ ಉಳಿದಿದ್ದಾರೆ. ಮೋದಿಯವರ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಮಂತ್ರ ಪಾಲಿಸುತ್ತಾರೆ. ಇಲ್ಲಿನ ಜನ ಅದರ ಮೇಲೆ ನಂಬಿಕೆ ಇರಿಸಲಾರಂಭಿಸಿದ್ದಾರೆ ಎಂದು ಸೈಯದ್​ ಅವರು ಹೇಳಿದ್ದಾರೆ. ಮುಂಬರುವ ಜಿಲ್ಲಾ ಅಭಿವೃದ್ಧಿ ಪರಿಷತ್​ (ಡಿಡಿಸಿ) ಚುನಾವಣೆಗೆ ಚಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾತನ್ನು ಹೇಳಿದ್ದಾರೆ. (ಏಜೆನ್ಸೀಸ್​)
ಕಸಿನ್​ಗಳ ಮದುವೆ ಕಾನೂನು ಬಾಹಿರ; ಹರಿಯಾಣ, ಪಂಜಾಬ್​ ಹೈ ಕೋರ್ಟ್​ ಆದೇಶ

ದೆಹಲಿಯಿಂದ ಗೋವಾಕ್ಕೆ ಹಾರಿದ ಸೋನಿಯಾ, ರಾಹುಲ್​; ಕಾರಣವೇನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + ten =
Remember me
