ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೇ ನಡೆಯುತ್ತಿರುವ ಒಡಿಶಾದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಸರಣಿ ರ್ಯಾಲಿಗಳನ್ನು ನಡೆಸಿ, ಕಾಂಗ್ರೆಸ್ ಮತ್ತು ಬಿಜು ಜನತಾದಳ ಪಕ್ಷಗಳ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಕಂಧಮಾಲ್, ಬೋಲಂಗಿರ್ ಹಾಗೂ ಬರ್​ಗಢ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ ಮೋದಿ, ಒಡಿಶಾದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಫೂಲ್ಬನಿ (ಒಡಿಶಾ):‘ಪಾಕಿಸ್ತಾನಕ್ಕೆ ಭಾರತ ಮರ್ಯಾದೆ ನೀಡಬೇಕು. ಏಕೆಂದರೆ, ಆ ರಾಷ್ಟ್ರದ ಬಳಿ ಅಣುಬಾಂಬ್​ಗಳಿವೆ’ ಎಂಬ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, ಸ್ವತಃ ತಾನು ಹೆದರಿರುವ ಕಾಂಗ್ರೆಸ್ ಈಗ ಮತ್ತೆಮತ್ತೆ ತನ್ನದೇ ದೇಶದ ಜನರನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಪ್ರಸಕ್ತ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದನ್ನು ಕಾಂಗ್ರೆಸ್ಸಿಗರು ನೋಡಬೇಕು. ತನ್ನದೇ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನ ಈಗ ಬಾಂಬುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಆದರೆ, ಅದನ್ನು ಯಾರೂ ಖರೀದಿಸುತ್ತಿಲ್ಲ. ಏಕೆಂದರೆ, ಅದರ ಗುಣಮಟ್ಟ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಕಾಂಗ್ರೆಸ್ ನಾಯಕರಿಗೆ ಮಾತ್ರ ಅಲ್ಲಿನ ಬಾಂಬ್​ಗಳ ಗುಣಮಟ್ಟದ ಬಗ್ಗೆ ನಂಬಿಕೆ ಇದ್ದಂತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದ ದುರ್ಬಲ ನೀತಿಗಳಿಂದಲೇ ಜಮ್ಮು-ಕಾಶ್ಮೀರದ ಜನರು 60 ವರ್ಷಗಳ ಕಾಲ ಭಯದಲ್ಲೇ ಜೀವನ ಸಾಗಿಸಬೇಕಾಯಿತು. ದೇಶವು ಎಷ್ಟೊಂದು ಭಯೋತ್ಪಾದಕ ದಾಳಿಗಳನ್ನು ಎದುರಿಸಬೇಕಾಯಿತು ಎಂಬುದನ್ನು ಜನರು ಮರೆತಿಲ್ಲ. ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸುವುದನ್ನು ಬಿಟ್ಟು ಇವರು ಭಯೋತ್ಪಾದಕರೊಂದಿಗೇ ಸಭೆ ನಡೆಸುತ್ತಿದ್ದರು. 26/11ರ ಭೀಕರ ದಾಳಿಯ ಬಳಿಕವೂ ಇವರು ಭಯೋತ್ಪಾದನೆ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುವ ಧೈರ್ಯವನ್ನು ಪ್ರದರ್ಶಿಸಲಿಲ್ಲ. ಏಕೆಂದರೆ, ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಂಡರೆ ಅವರ ವೋಟ್​ಬ್ಯಾಂಕ್ ನಿರಾಶವಾಗಬಹುದು ಎಂಬ ಆತಂಕ ಕಾಂಗ್ರೆಸ್-ಇಂಡಿ ಒಕ್ಕೂಟಕ್ಕೆ ಕಾಡುತ್ತಿತ್ತು ಎಂದರು.
ಶಿರಬಾಗಿ ನಮಸ್ಕರಿಸಿದರು:ಕಂಧಮಾಲ್ ಲೋಕಸಭಾ ಕ್ಷೇತ್ರದ ಫೂಲ್ಬನಿಯ ರ್ಯಾಲಿಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪದ್ಮಶ್ರೀ ಪುರಸ್ಕೃತೆ ಕವಿಯಿತ್ರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಪೂರ್ಣಮಾಸಿ ಜಾನಿ ಅವರ ಪಾದ ರ್ಸ³ಸಿ, ಬಳಿಕ ಶಿರಬಾಗಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಮೋದಿ ಪೂರ್ಣಮಾಸಿ ಅವರನ್ನು ನಮಸ್ಕರಿಸುತ್ತಿದ್ದಂತೆ ಸಭಿಕರು ಕರತಾಡನದ ಮೂಲಕ ಹರ್ಷ ವ್ಯಕ್ತಪಡಿಸಿದರು.
ಪೋಖ್ರಾನ್ ಸಾಧನೆ ಸ್ಮರಿಸಿದ ಪ್ರಧಾನಿ:26 ವರ್ಷಗಳ ಹಿಂದೆ ಇದೇ ದಿನ (ಮೇ 11) ಪೋಖ್ರಾನ್ ಅಣುಪರೀಕ್ಷೆಯ ಮೂಲಕ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರ ಭಾರತದ ಗೌರವವನ್ನು ಹೆಚ್ಚಿಸಿತು ಎಂದು ಮೋದಿ ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಪೋಖ್ರಾನ್ ಅಣುಪರೀಕ್ಷೆ ಮುಖಾಂತರ ದೇಶಭಕ್ತಿ ಹೊಂದಿರುವ ಸರ್ಕಾರ ದೇಶಹಿತಕ್ಕಾಗಿ, ದೇಶದ ಸುರಕ್ಷೆಗಾಗಿ. ದೇಶದ ಜನರ ಆಕಾಂಕ್ಷೆಗಳಿಗಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಜಗತ್ತು ನೋಡಿತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರ ಪೋಖ್ರಾನ್ ಅಣುಪರೀಕ್ಷೆ ನಡೆಸಿದಾಗ ವಿಶ್ವಾದ್ಯಂತ ನೆಲೆಸಿರುವ ಭಾರತೀಯರು ಹೆಮ್ಮೆಯ ಭಾವವನ್ನು ಅನುಭವಿಸಿದ್ದು ನನಗೆ ಚೆನ್ನಾಗಿ ನೆನಪಿದೆ ಎಂದ ಮೋದಿ, ಸ್ವಾತಂತ್ರ್ಯಪ್ರಾಪ್ತಿಯ ಬಳಿಕ ವಿದೇಶಗಳಲ್ಲಿ ಮೊದಲ ಬಾರಿ ಭಾರತೀಯರನ್ನು ಗೌರವದ ದೃಷ್ಟಿಯಿಂದ ಕಾಣಲಾಯಿತು. ಆ ದಿನ ಭಾರತದ ಸಾಮರ್ಥ್ಯ ಜಗತ್ತಿನ ಮುಂದೆ ಅನಾವರಣಗೊಂಡಿತು ಮತ್ತು ಇನ್ನೊಂದು ಕಡೆ ಕಾಂಗ್ರೆಸ್ ದೇಶದ ಜನರನ್ನು ಮತ್ತೆ ಮತ್ತೆ ಹೆದರಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ ಎಂದರು.
ಫೂಲ್ಬನಿ ರ‍್ಯಾಲಿಯಲ್ಲಿ ಹೇಳಿದ್ದು
. ಒಡಿಶಾದಲ್ಲಿ ಈ ಬಾರಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಲಿದೆ. ಒಡಿಶಾದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿರುವ ಈ ನೆಲದ ಮಗ ಅಥವಾ ಮಗಳನ್ನು ಬಿಜೆಪಿ ಸರ್ಕಾರ ಮುಖ್ಯಮಂತ್ರಿಯನ್ನಾಗಿ ಮಾಡಲಿದೆ. ಜೂನ್ 10ರಂದು ಭುವನೇಶ್ವರದಲ್ಲಿ ನಡೆಯಲಿರುವ ಬಿಜೆಪಿ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದ ಆಮಂತ್ರಣ ನೀಡಲು ನಾನಿಲ್ಲಿ ಬಂದಿದ್ದೇನೆ.
. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿಮಾರ್ಣದ ಮೂಲಕ ದೇಶದ ಜನರ 500 ವರ್ಷಗಳ ಕಾಯುವಿಕೆಯನ್ನು ಬಿಜೆಪಿ ಕೊನೆಗೊಳಿಸಿದೆ.
. ಒಡಿಶಾ ಜನರ ಸಾಮರ್ಥ್ಯವನ್ನು ಅರಿಯಲು ರಾಜ್ಯ ಸರ್ಕಾರ ವಿಫಲವಾಗಿದೆ. ಒಡಿಶಾದ ವಿಕಾಸದ ದೃಷ್ಟಿಯಲ್ಲಿ ಇದು ಮಹತ್ವದ ಚುನಾವಣೆಯಾಗಿದ್ದು, ಎನ್​ಡಿಎ ಅಧಿಕಾರಕ್ಕೆ ಬಂದರೆ ಒಡಿಶಾದ ಅಭಿವೃದ್ಧಿ ಹೊಸ ಎತ್ತರಕ್ಕೆ ತಲುಪಲಿದೆ.
. ಒಡಿಶಾದ ಪುತ್ರಿ, ರಾಷ್ಟ್ರಪತಿ ದ್ರೌಪದಿ ಮುಮು ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ದೇಶದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಆದರೆ, ಕಾಂಗ್ರೆಸ್​ನ ಒಬ್ಬ ನಾಯಕರು, ರಾಮಮಂದಿರವನ್ನು ಗಂಗಾಜಲದಿಂದ ಶುದ್ಧೀಕರಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಆದಿವಾಸಿಗಳ ಮಗಳು, ಸಾಮಾನ್ಯ ಹೆಣ್ಣುಮಗಳು ಇಂದು ಸೇನೆಯ ಮೂರೂ ಪಡೆಗಳಿಗೆ ಮುಖ್ಯಸ್ಥೆ. ಈ ಸಾಧನೆ, ಗೌರವ ಕಾಂಗ್ರೆಸ್​ಗೆ ಸಹಿಸಲಾಗುತ್ತಿಲ್ಲ. ಇಂಥವರಿಗೆ ಭಾರತೀಯ ರಾಜಕೀಯದಲ್ಲಿ ಇರುವ ಹಕ್ಕು ಇದೆಯೇ?
ನಾಳೆಯಿಂದ ನಾಲ್ಕು ಹಂತದಲ್ಲಿ ಮತದಾನ:ಒಡಿಶಾದಲ್ಲಿ ಮೇ 13ರಿಂದ ಜೂನ್ 1ರವರೆಗೆ ನಾಲ್ಕು ಹಂತಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯಲಿವೆ. ಜೂನ್ 4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. 2019ರ ವಿಧಾನಸಭೆ ಚುನಾವಣೆಯಲ್ಲಿ 146 ಕ್ಷೇತ್ರಗಳ ಪೈಕಿ ಬಿಜು ಜನತಾದಳ 112 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದ ಆಧಾರದ ಮೇಲೆ ಸರ್ಕಾರ ರಚಿಸಿತು. ಬಿಜೆಪಿ 23 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು. 2019ರ ಲೋಕಸಭಾ ಚುನಾವಣೆಯಲ್ಲಿ 21 ಸ್ಥಾನಗಳ ಪೈಕಿ ಬಿಜೆಡಿ 12, ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ದಾಖಲಿಸಲು ಯಶಸ್ವಿಯಾಯಿತು.
6 ವರ್ಷಗಳಿಂದ ಕೀಲಿಗಳು ನಾಪತ್ತೆ! :ಒಡಿಶಾದ ಪ್ರಸಿದ್ಧ ಜಗನ್ನಾಥಪುರಿ ಶ್ರೀರತ್ನಭಂಡಾರದ ಕೀಲಿಗಳು ಕಳೆದ 6 ವರ್ಷಗಳಿಂದ ಕಾಣೆಯಾಗಿರುವುದನ್ನು ಪ್ರಶ್ನಿಸಿದ ಮೋದಿ, ಡುಪ್ಲಿಕೇಟ್ ಕೀಲಿಗಳು ದೊರೆತಿವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಆಯೋಗದ ವರದಿ ರಾಜ್ಯ ಸರ್ಕಾರದ ಕೈ ಸೇರಿದ್ದರೂ, ಅದನ್ನು ಬಹಿರಂಗಗೊಳಿಸಲಾಗಿಲ್ಲ. ಕಳೆದ 40 ವರ್ಷಗಳಿಂದ ಈ ರತ್ನಭಂಡಾರವನ್ನು ತೆಗೆದಿಲ್ಲ. ಅಮೂಲ್ಯವಾದಂಥ ಚಿನ್ನ, ಬೆಳ್ಳಿ, ವಜ್ರವೈಢೂರ್ಯಗಳನ್ನು ಹೊಂದಿರುವ ಈ ರತ್ನಭಂಡಾರದ ಕೀಲಿಕೈಗಳೇ ಆರು ವರ್ಷದಿಂದ ನಾಪತ್ತೆಯಾಗಿವೆಯಂತೆ. ಈ ಚಾವಿಗಳು ಎಲ್ಲಿ ಇವೆ, ಯಾರ ಬಳಿ ಇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಿಮಗಿಲ್ಲವೆ (ಜನರಿಗೆ)?
ನಾನು ನವೀನ್ ಪಟ್ನಾಯಕ್ ಅವರಿಗೆ ಸವಾಲು ಹಾಕುತ್ತೇನೆ. ಇಷ್ಟು ವರ್ಷಗಳಿಂದ ಒಡಿಶಾ ಸಿಎಂ ಆಗಿರುವ ಅವರು ಚೀಟಿ ನೋಡದೆಯೇ ಒಡಿಶಾದ ಎಲ್ಲ ಜಿಲ್ಲೆಗಳ ಹೆಸರನ್ನು ಹೇಳಲಿ. ಎಲ್ಲ ಜಿಲ್ಲೆಗಳ ಹೆಸರು ಹೇಳಲಾಗದ ಸಿಎಂ ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲರೆ?
| ನರೇಂದ್ರ ಮೋದಿ ಪ್ರಧಾನಿ

ಮಾಜಿ ಸಿಎಂ ಎಸ್.​ಎಂ ಕೃಷ್ಣ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
