ನವದೆಹಲಿ:ದೇಶದಲ್ಲಿ ಕರೊನಾ ಎರಡನೇ ಅಲೆ ವ್ಯಾಪಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿ ಜನತೆಗೆ ದೈರ್ಯ ತುಂಬಿದ್ದಾರೆ.
ಈ ವೇಳೆ ಮತ್ತೊಮ್ಮೆ ಲಾಕ್​ಡೌನ್ ಮಾಡುವುದಿಲ್ಲ ಎಂದು ಘೋಷಣೆ ಮಾಡಿರುವ ಅವರು, ಲಾಕ್​ಡೌನ್​ ಕೊನೆಯ ಅಸ್ತ್ರವಾಗಿರಲಿ. ಯಾವುದೇ ಕೆಲಸ ಹಾಗೂ ಕಾಮಗಾರಿಗಳು ನಿಲ್ಲುವುದಿಲ್ಲ. ಕೋವಿಡ್ ತಡೆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಮರೆಯದಿರೋಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಕಾರ್ಮಿಕರು ಯಾವುದೇ ಕಾರಣಕ್ಕೂ ವಲಸೆ ಹೋಗಬೇಡಿ. ಕರೊನಾ ಹೊಡೆದೋಡಿಸಲು ಕೈ ಜೋಡಿಸಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಅಲ್ಲದೇ ಲಾಕ್​ಡೌನ್​ ಬೇಡ ಎಂದು ರಾಜ್ಯಗಳಿಗೆ ಅವರು ಮನವಿ ಮಾಡಿದ್ದಾರೆ.
ದೇಶ ಮತ್ತೊಂದು ದೊಡ್ಡ ಸಂಕಷ್ಟಕ್ಕೆ ತೆರೆದುಕೊಂಡಿದೆ. ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ. ದೇಶದಲ್ಲಿ ಅಗತ್ಯ ಲಸಿಕೆ ಸಿದ್ದವಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುವುದು. ಇದುವರೆಗೆ 12 ಕೋಟಿ ಜನಕ್ಕೆ ಲಸಿಕೆ ನೀಡಿದ್ದೇವೆ. ವಿದೇಶಗಳಿಗೂ ಲಸಿಕೆ ನೀಡಿದ್ದೇವೆ. ಲಸಿಕಾ ತಯಾರಿಕಾ ಕಂಪನಿಗಳು ನಮಗೆ ಅಗತ್ಯ ಸಹಕಾರ ನೀಡಿವೆ. ವೈದ್ಯರು ನರ್ಸ್​ಗಳು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅವರಿಗೆಲ್ಲ ನಾವು ಚಿರಋಣಿಯಾಗಿರೋಣ ಎಂದು ಪ್ರಧಾನಿ ಮನವಿ ಮಾಡಿದರು.
ಕರೊನಾ ವಿಷಯದಲ್ಲಿ 2020ಕ್ಕಿಂತಲೂ ಪರಿಸ್ಥಿತಿ ಸುಧಾರಣೆ ಆಗಿದೆ. ಉಚಿತ ಲಸಿಕಾ ಕಾರ್ಯಕ್ರಮ ಮುಂದುವರೆಯಲಿದೆ. ಆಕ್ಸಿಜನ್ ಮೂಲಕ ಆಕ್ಸಿಜನ್ ಸರಬರಾಜನ್ನು ಹೆಚ್ಚಿಸಲಾಗಿದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ನಮ್ಮ ಬಳಿ ಅಗತ್ಯ ಲಸಿಕೆ ಇದೆ ಚಿಂತಿಸದಿರಿ ಎಂದು ಹೇಳಿದ್ದಾರೆ.
ಈ ಸೋಂಕಿತರಿಗೆ ಮನೆಯಲ್ಲೇ ಇರಲು ಅವಕಾಶ! ಹೋಂ ಐಸೋಲೇಷನ್​ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 14 =
Remember me
