ನವದೆಹಲಿ:ತಮಗಾಗದವರನ್ನು ಸುಳಿವೇ ಸಿಗದ ಹಾಗೆ ಸಾಯಿಸಿಬಿಡಲು ನಾನಾ ತಂತ್ರಗಳನ್ನು ಮಾಡುವವರಿದ್ದಾರೆ. ಅಂಥದ್ದೊಂದು ವಿಚಿತ್ರ ಪ್ರಯತ್ನ ಮಾಡಲು ಹೋಗಿ ಸೇಲ್ಸ್​ಮ್ಯಾನ್​ ಒಬ್ಬ ಕೊಲೆಯತ್ನ ಪ್ರಕರಣವನ್ನು ಎದುರಿಸುತ್ತಿದ್ದಾನೆ. ಈ ನಡುವೆ ಆತ ಸಾಯಿಸಲು ಬಳಸಿದ ತಂತ್ರದಿಂದಲೇ ಹಲವರ ಗಮನ ಸೆಳೆಯಲಾರಂಭಿಸಿದ್ದಾನೆ. ಏಕೆಂದರೆ ಕೊಲೆ ಮಾಡಲು ಇದುವರೆಗೆ ಯಾರೂ ಬಳಸದ ತಂತ್ರವೊಂದನ್ನು ಆತ ಪ್ರಯೋಗಿಸಿದ್ದಾನೆ.
ಹೌದು.. ಕರೊನಾದಿಂದ ಕಂಗಾಲಾಗಿರುವ ಜನರೆಲ್ಲ ಬೇಗ ಈ ಕರೊನಾದಿಂದ ಬಚಾವಾದರೆ ಸಾಕು, ಕರೊನಾದಿಂದ ಜೀವ ಕಳೆದುಕೊಳ್ಳದಿದ್ದರೆ ಸಾಕು ಎಂದುಕೊಳ್ಳುತ್ತಿದ್ದರೆ, ಈತ ಅದೇ ಕರೊನಾವನ್ನೇ ಬಳಸಿಕೊಂಡು ತನ್ನ ಬಾಸ್​​ನನ್ನು ಮುಗಿಸಿಬಿಡಲು ಯತ್ನಿಸಿದ್ದಾನೆ. ರಮ್​ಜಾನ್​ ಸಿಮೆನ್ ಎಂಬ ಈ ಸೇಲ್ಸ್​ಮ್ಯಾನ್​ ಕೊಲೆಯತ್ನದ ಜತೆಗೆ ಕಳ್ಳತನ ಆರೋಪವನ್ನೂ ಎದುರಿಸುತ್ತಿದ್ದಾನೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಟರ್ಕಿಯಲ್ಲಿನ ಈ ಕಾರ್​ ಸೇಲ್ಸ್​ಮ್ಯಾನ್ ತನ್ನನ್ನು ಸಾಯಿಸಲು ತಂತ್ರ ಮಾಡಿದ್ದಾಗಿ ಕಾರ್​ ಡೀಲರ್​ಷಿಪ್​ ಓನರ್ ಇಬ್ರಾಹಿಂ ಉನ್​ವರ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪಾರ್ಟಿಯೊಂದರಲ್ಲಿ ತನ್ನ ಬಾಸ್​ ಇಬ್ರಾಹಿಂ ಕುಡಿಯಬೇಕಿದ್ದ ಮದ್ಯದ ಗ್ಲಾಸ್​ಗೆ ರಮ್​​ಜಾನ್​ ಕರೊನಾ ಸೋಂಕಿತನ ಎಂಜಲು (ಸಲೈವಾ) ಬೆರೆಸಿದ್ದಾನೆ. ಅಲ್ಲದೆ 22 ಲಕ್ಷ ರೂ. ಕದ್ದಿದ್ದಾನೆ.
ನನ್ನ ಕೆಲಸಗಾರ, ಸೇಲ್ಸ್​ಮ್ಯಾನ್​ ರಮ್​ಜಾನ್​ 5 ಸಾವಿರ ರೂಪಾಯಿ ಕೊಟ್ಟು ಕರೊನಾ ಸೋಂಕಿತನ ಎಂಜಲನ್ನು ಸಂಗ್ರಹಿಸಿದ್ದು, ಅದನ್ನು ನನ್ನ ಡ್ರಿಂಕ್ಸ್​ನಲ್ಲಿ ಬೆರೆಸಿದ್ದ. ಇನ್ನೊಬ್ಬ ಉದ್ಯೋಗಿಯಿಂದ ಈ ವಿಷಯ ಗೊತ್ತಾಗಿ ನಾನು ಅದನ್ನು ಕುಡಿಯಲಿಲ್ಲ. ಈ ಥರ ಸಾಯಿಸುವ ಪ್ರಯತ್ನವನ್ನು ನಾನು ಇದೇ ಮೊದಲ ಸಲ ಕಂಡಿದ್ದು, ದೇವರು ದೊಡ್ಡವ, ವಿಷಯ ತಿಳಿದು ಬಚಾವಾದೆ ಎಂದು ಇಬ್ರಾಹಿಂ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…
ಕಾರ್​ ಸೇಲ್​ ಆಗಿರುವ ಹಣವನ್ನು ಆತನಿಗೆ ನೀಡಿದ್ದೆ. ಅದನ್ನು ಆಫೀಸ್​ಗೆ ತಲುಪಿಸಲು ಹೇಳಿದ್ದೆ. ಆತನನ್ನು ಸಂಪೂರ್ಣ ನಂಬಿದ್ದೆ. ಆದರೆ ಆಮೇಲೆ ಕರೆ ಮಾಡಿದರೆ ಆತ ಸ್ವೀಕರಿಸಲಿಲ್ಲ. ಮಾರನೇ ದಿನ ಹಣ ತೀರಾ ಅಗತ್ಯವಿತ್ತು ಅಂತ ಆ 21 ಲಕ್ಷ ರೂ. ಬಳಸಿಕೊಂಡಿದ್ದಾಗಿ ಹೇಳಿದ್ದ. ಈ ವಿಷಯ ಹೊರಗೆ ಗೊತ್ತಾಯಿತು ಎಂದು ನನ್ನ ಬಗ್ಗೆ ಹಗೆ ಸಾಧಿಸುತ್ತಿದ್ದ ಆತ ಈ ಕೆಲಸ ಮಾಡಿದ್ದಾನೆ. ಮಾತ್ರವಲ್ಲ, ಈ ಸಲ ವೈರಸ್​ ಮೂಲಕ ಸಾಯಿಸಲು ಆಗಿಲ್ಲ. ಆದರೆ ಮುಂದಿನ ಸಲ ಶೂಟ್ ಮಾಡಿ ಸಾಯಿಸುವುದಾಗಿ ಹೇಳಿದ್ದಾನೆ ಎಂದು ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸೇಲ್ಸ್​ಮ್ಯಾನ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್)
‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
