ಕೊಚ್ಚಿ:ಕೆಲವು ದಿನಗಳ ಹಿಂದೆ ಬೆಂಗಳೂರಿನ ಒಂದು ಪ್ರದೇಶದಲ್ಲಿ ಬಾಡಿಗೆದಾರರಿಗೆ ಅಪಾರ್ಟ್​ಮೆಂಟ್​ ಮಾಲೀಕರು ವಿಚಿತ್ರ ಷರತ್ತುಗಳನ್ನು ವಿಧಿಸಿದ್ದ ಸಂಗತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದೀಗ ಅಂಥದ್ದೇ ಇನ್ನೊಂದು ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅದೇನೆಂದರೆ, ಮನೆ ಮಾಲೀಕರ ಸಂಘವೊಂದು ಬಾಡಿಗೆದಾರರಿಗೆ ಕೆಲವು ನಿಯಮಗಳನ್ನು ವಿಧಿಸಿದ್ದು, ಮದುವೆ ಆಗಿರದವರು ಮನೆ ಖಾಲಿ ಮಾಡಬೇಕು ಎಂಬ ಎಚ್ಚರಿಕೆಯನ್ನು ನೀಡಿದೆ. ಕೇರಳದ ಹೀರಾ ಟ್ವಿನ್ಸ್ ಓನರ್ಸ್ ಅಸೋಸಿಯೇಷನ್​ ಇಂಥ ನಿಯಮಗಳ ಪಟ್ಟಿಯನ್ನೇ ಬಿಡುಗಡೆ ಮಾಡಿದೆ.
ತಿರುವನಂತಪುರದ ಅಪಾರ್ಟ್​ಮೆಂಟ್​​ವೊಂದರಲ್ಲಿ ಈ ರೀತಿ ನೋಟಿಸ್ ಜಾರಿ ಮಾಡಿರುವ ಕುರಿತು, ಬಾಡಿಗೆದಾರರು ಇದನ್ನು ನೈತಿಕ ಪೊಲೀಸ್​ಗಿರಿ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ. ಮಾತ್ರವಲ್ಲ, ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಮನೆ ಮಾಲೀಕರ ಸಂಘದ ಈ ನೋಟಿಸ್ ಟ್ವೀಟ್ ಮಾಡಿ ಕೇರಳ ಮುಖ್ಯಮಂತ್ರಿ, ಸಂಸದರು ಮತ್ತು ಕೇರಳ ಪೊಲೀಸರ ಹ್ಯಾಂಡಲ್​ಗಳಿಗೆ ಮೆನ್ಷನ್ ಮಾಡಿ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ:ಹಿಂದೂ ಹುಡುಗಿ ಜತೆ ತಿರುಗುತ್ತಿದ್ದ ಮುಸ್ಲಿಂ ಹುಡುಗನಿಗೆ ಥಳಿತ; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ
ಫ್ಲ್ಯಾಟ್​ನಲ್ಲಿ ಬರೀ ಪುರುಷರು ಅಥವಾ ಮಹಿಳೆಯರಷ್ಟೇ ನೆಲೆಸಿರುವವರಿಗೆ ಈ ಸೂಚನೆಗಳು ಅನ್ವಯ ಎಂದು ಈ ಸಂಘ ಕೆಲವು ನಿಯಮಗಳನ್ನು ಪಟ್ಟಿ ಮಾಡಿದೆ, ಅವು ಈ ಕೆಳಗಿನಂತಿವೆ.
– ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲಿ ರಕ್ತಸಂಬಂಧಿಕರು ಬಿಟ್ಟು ವಿರುದ್ಧ ಲಿಂಗದವರು ಮನೆಗೆ ಬರುವಂತಿಲ್ಲ. ಬಾಡಿಗೆದಾರರು ಹೊರಗಿನಿಂದ ಬಂದವರನ್ನು ಬೇಸ್​ಮೆಂಟ್​ನಲ್ಲಿರುವ ಕಚೇರಿಯ ರಿಜಿಸ್ಟರ್ಡ್​ನಲ್ಲಿ ಎಂಟ್ರಿ ಮಾಡಿಸಿ ಅಲ್ಲಿ ಭೇಟಿ ಮಾಡಬಹುದು.– ಎಲ್ಲ ಬಾಡಿಗೆದಾರರು ಅವರ ಆಧಾರ್​ ಮಾಹಿತಿ ನೀಡಿರಬೇಕು ಮತ್ತು ಪಾಲಕರು ಇಲ್ಲವೇ ಪೋಷಕರ ಮೊಬೈಲ್​ಫೋನ್​ ನಂಬರ್ ಕೊಟ್ಟಿರಬೇಕು.– ಈ ಕಟ್ಟಡ ಕುಟುಂಬಸ್ಥರಿಗೆ ಮಾತ್ರ ಸೀಮಿತವಾದ್ದರಿಂದ ಕುಟುಂಬಸಹಿತ ಇರದವರು ಅಂದರೆ ಅವಿವಾಹಿತರು ಎರಡು ತಿಂಗಳ ಒಳಗೆ ಫ್ಲ್ಯಾಟ್​ ತೆರವುಗೊಳಿಸಬೇಕು.– ವಾಚ್​ಮ್ಯಾನ್​ ಜತೆ ಅನವಶ್ಯಕ ತಕರಾರು-ಜಗಳ ಮಾಡಿದರೆ ಪೊಲೀಸರಿಗೆ ಮಾತ್ರವಲ್ಲದೆ ಬಾಡಿಗೆದಾರರ ಮನೆಯವರಿಗೂ ಮಾಹಿತಿ ನೀಡಲಾಗುವುದು.
Jobless Malayali Uncles have issued a threatening note to bachelor tenants of an elite flat in Thiruvananthapuram. Their 'crime' being meeting people of opposite sex. When will moral policing end in Kerala?@ShashiTharoor@pinarayivijayan@TheKeralaPolice@AARahimdyfipic.twitter.com/LnRK8lUzHb— pratheesh (@pratheesh)January 3, 2023
Jobless Malayali Uncles have issued a threatening note to bachelor tenants of an elite flat in Thiruvananthapuram. Their 'crime' being meeting people of opposite sex. When will moral policing end in Kerala?@ShashiTharoor@pinarayivijayan@TheKeralaPolice@AARahimdyfipic.twitter.com/LnRK8lUzHb
ಮನೆ ಬಾಗಿಲಲ್ಲಿ ಕಸ, ಬೆಡ್​ರೂಮ್​ನಲ್ಲಿದ್ದ ಚಿನ್ನಾಭರಣ ನಾಪತ್ತೆ; ಎಚ್ಚರಿಕೆ ಸಾರ್ವಜನಿಕರೇ.. ಈ ಬಗ್ಗೆ ಇರಲಿ ಗಮನ
ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
