ಅಹಮದಾಬಾದ್​:ಗುಜರಾತ್​ ವಿಧಾನಸಭಾ ಚುನಾವಣೆಯಲ್ಲಿ ಈಗಾಗಲೇ ಬಿಜೆಪಿ ಮ್ಯಾಜಿಕ್​ ನಂಬರ್​ ದಾಟಿ ಭರ್ಜರಿ ಗೆಲುವನ್ನು ಪಡೆದುಕೊಂಡಿದೆ. ಆದರೆ, ಹಳೆಯ ಪಕ್ಷವಾದ ಕಾಂಗ್ರೆಸ್​ನ ಸಾಧನೆ ಹೀನಾಯವಾಗಿದ್ದು, ಕೇವಲ 15 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು 1 ಕ್ಷೇತ್ರದಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್​ ಕೆಲವೇ ಕೆಲವು ಸೀಟುಗಳನ್ನು ಪಡೆದುಕೊಂಡಿರುವುದರಿಂದ ಇದೀಗ ಗುಜರಾತಿನಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇಲ್ಲದಂತಾಗಿದೆ.
2017ರ ಚುನಾವಣೆಯಲ್ಲಿ ಬಿಜೆಪಿ ಒಟ್ಟು 182 ಸ್ಥಾನಗಳಲ್ಲಿ 99 ಸ್ಥಾನಗಳನ್ನು ಮಾತ್ರ ಗಳಿಸಿತ್ತು. ಆದರೆ, ಈ ಬಾರಿ ದಾಖಲೆ ಬರೆದಿರುವ ಬಿಜೆಪಿ 155 ಸ್ಥಾನಗಳಲ್ಲಿ ಗೆದ್ದಿದ್ದು 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
ಆದರೆ ಇತರ ಪಕ್ಷಗಳ ಸ್ಥಿತಿ ಚಿಂತಾಜನಕವಾಗಿದೆ. ಕಾಂಗ್ರೆಸ್​ ಕೇವಲ 15 ಸ್ಥಾನಗಳಲ್ಲಿ ಗೆದ್ದಿದ್ದು 1 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಇದು ಬಿಜೆಪಿಯ ನಂತರ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಪಕ್ಷದ ಕಥೆ. ಇನ್ನು ‘ಆಪ್​’ 4 ಸ್ಥಾನಗಳಲ್ಲಿ ಗೆದ್ದಿದ್ದು ಒಂದರಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಸ್ಪರ್ಧೆ ಮಾಡಿರುವ ಎಲ್ಲಾ 4 ಸ್ವತಂತ್ರ ಅಭ್ಯರ್ಥಿಗಳೂ ಗೆದ್ದಿದ್ದಾರೆ.
ನಿಯಮದ ಪ್ರಕಾರ ವಿರೋಧ ಪಕ್ಷವಾಗಿ ಗುರುತಿಸಿಕೊಳ್ಳಲು ಒಟ್ಟು ಕ್ಷೇತ್ರಗಳ ಶೇಕಡ 10 ಸ್ಥಾನಗಳನ್ನಾದರೂ ಪಡೆಯಬೇಕು. ಗುಜರಾತಿನಲ್ಲಿ 182 ಸ್ಥಾನಗಳಿದ್ದು ಕಾಂಗ್ರೆಸ್​ ಕೈಯಲ್ಲಿ ಅಗತ್ಯವಿರುವ 19 ಸ್ಥಾನಗಳನ್ನೂ ಪಡೆದುಕೊಳ್ಳಲಾಗಿಲ್ಲ. ಇದರಿಂದಾಗಿ ಇನ್ನು ಮುಂದಿನ 5 ವರ್ಷಗಳ ಕಾಲ ಗುಜರಾತಿನಲ್ಲಿ ಅಧಿಕೃತವಾಗಿ ವಿರೋಧ ಪಕ್ಷವೇ ಇರೋದಿಲ್ಲ,
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
