ಜೈಪುರ:ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ನೌಕರರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಬಡ್ತಿ ನೀಡದಿರುವ ರಾಜಸ್ಥಾನ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ.
ಇದನ್ನೂ ಓದಿ:‘ಹೋಟೆಲ್​ಗೆ ಕರೆಸಿ ಬಟ್ಟೆ ಬಿಚ್ಚು ಎಂದ್ರು’: ನಿರ್ದೇಶಕ ರಂಜಿತ್ ಮೇಲೆ ಮತ್ತೊಬ್ಬ ನಟಿ ಲೈಂಗಿಕ ಕಿರುಕುಳ ಆರೋಪ ​
ರಾಜಸ್ಥಾನ ಸರ್ಕಾರ ಈಗಾಗಲೇ ಈ ನೀತಿ ಜಾರಿಗೊಳಿಸಿದ್ದು, ಇದು ಎರಡಕ್ಕಿಂತ ಹೆಚ್ಚು ಮಕ್ಕಳಿರುವ ನೌಕರರ ಬಡ್ತಿ ಮೇಲೆ ಪರಿಣಾಮ ಬೀರಿದೆ. ಆದರೆ 2023ರ ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಸರ್ಕಾರ ಅದನ್ನು ಹಿಂಪಡೆದಿತ್ತು. ಇದೀಗ ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಪಂಕಜ್ ಭಂಡಾರಿ ಮತ್ತು ನ್ಯಾಯಮೂರ್ತಿ ವಿನೋದ್ ಕುಮಾರ್ ಭರ್ವಾನಿ ಅವರನ್ನೊಳಗೊಂಡ ಪೀಠವು ಇದೇ ವಿಷಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
2001 ರಲ್ಲಿ ರಾಜಸ್ಥಾನ ಸರ್ಕಾರವು ಸರ್ಕಾರಿ ಉದ್ಯೋಗಗಳು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಬಾರದು ಎಂದು ಕಡ್ಡಾಯಗೊಳಿಸಿತು. ಇದನ್ನು ಪ್ರಶ್ನಿಸಿ ಸೈನಿಕ ರಾಮ್ ಲಾಲ್ ಜಾಟ್ 2017ರಲ್ಲಿ ನಿವೃತ್ತಿ ಹೊಂದಿ 2018ರಲ್ಲಿ ರಾಜಸ್ಥಾನ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ನಿಯಮದಂತೆ ಅವರು ಹುದ್ದೆಗೆ ಅನರ್ಹರಾಗಿದ್ದರು. 2022 ರಲ್ಲಿ, ಅವರು ಇದೇ ವಿಷಯದ ಕುರಿತು ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಪರಿಹಾರ ಸಿಗದ ಕಾರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಜೂನ್ 1, 2002 ರ ನಂತರ ಅವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಉದ್ಯೋಗದಿಂದ ಅನರ್ಹಗೊಳಿಸುವ ನಿಯಮಗಳ ಅಡಿಯಲ್ಲಿ ಅವರನ್ನು ಪೊಲೀಸ್ ಉದ್ಯೋಗದಿಂದ ಅನರ್ಹಗೊಳಿಸಲಾಯಿತು.
ಪಿಸಿಸಿ ಮುಖ್ಯಸ್ಥರ ನೇಮಕ?: ಬಂಗಾಳಕ್ಕೆ ದೀಪದಾಸ್, ಕೇರಳಾಗೆ ವೇಣುಗೋಪಾಲ್ ಹೆಸರು ಅಂತಿಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − nine =
Remember me
