ಎಪ್ಪತ್ನಾಲ್ಕನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತ ಸರ್ಕಾರ ಪ್ರಕಟಿಸಿದ ಪದ್ಮ ಪ್ರಶಸ್ತಿಗಳಲ್ಲಿ ದೇಶದ ವಿವಿಧ ಭಾಗಗಳ&ನಾನಾ ಕ್ಷೇತ್ರಗಳ 26 ಎಲೆಮರೆ ಸಾಧಕರಿರುವುದು ವಿಶೇಷ. ಇವರೆಲ್ಲ ತಮ್ಮ ವೃತ್ತಿ ಮತ್ತು ಪ್ರವೃತ್ತಿಯನ್ನು ಪ್ರಚಾರದ ಅಪೇೆಯಿಲ್ಲದೆ ನಡೆಸುತ್ತಾ ಸಮಾಜಕ್ಕೆ ಕೊಡುಗೆ ನೀಡಿದ ವಿಶಿಷ್ಟ ವ್ಯಕ್ತಿಗಳಾಗಿದ್ದಾರೆ. ಆ ಪೈಕಿ ಕೆಲವು ಸಾಧಕರ ಪನೋಟವಿದು.
ಓಆರ್​ಎಸ್​ ಸಂಶೋಧಕದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ಮರಣೋತ್ತರವಾಗಿ ಭಾಜನರಾದ ದಿಲೀಪ್​ ಮಹಾಲನಬಿಸ್​ (87) ಬಂಗಾಳ ಮೂಲದವರು. ಓಆರ್​ಎಸ್​ ಎಂದೇ ಜನಪ್ರಿಯವಾಗಿರುವ ಓರಲ್​ ರೀಹೈಡ್ರೇಶನ್​ ಸಲ್ಯುಷನ್​ ಬಗ್ಗೆ ಅಭಿಯಾನವನ್ನೇ ನಡೆಸಿ ಜಗತ್ತಿನಾದ್ಯಂತ ಸುಮಾರು ಐದು ಕೋಟಿ ಜೀವಗಳನ್ನು ರಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಅಮೆರಿಕದಲ್ಲಿ ವೈದ್ಯರಾಗಿದ್ದ ದಿಲೀಪ್​, 1971ರ ಬಾಂಗ್ಲಾದೇಶ ಯುದ್ಧದ ನಿರಾಶ್ರಿತ ಶಿಬಿರಗಳಲ್ಲಿ ಸೇವೆ ಸಲ್ಲಿಸಲು ಅಲ್ಲಿಂದ ಭಾರತಕ್ಕೆ ಮರಳಿದ್ದರು. ಕೋಲ್ಕತಾದಲ್ಲಿರುವ ಜಾನ್ಸ್​ ಹಾಪ್ಕಿನ್ಸ್​ ಯುನಿವರ್ಸಿಟಿ ಇಂಟರ್​ನ್ಯಾಷನಲ್​ ಸೆಂಟರ್​ ಫಾರ್​ ಮೆಡಿಕಲ್​ ರೀಸರ್ಚ್​ ಆ್ಯಂಡ್​ ಟ್ರೇನಿಂಗ್​ನಲ್ಲಿ ಸಂಶೋಧಕರಾಗಿದ್ದ ಮಹಾಲನಬಿಸ್​, 1966ರಲ್ಲಿ ಓಆರ್​ಎಸ್​ ಚಿಕಿತ್ಸೆ ಬಗ್ಗೆ ಸಂಶೋಧನೆ ಆರಂಭಿಸಿದ್ದರು.
ಬಡವರ ವೈದ್ಯವೈದ್ಯರು, ಅದರಲ್ಲೂ ಖಾಸಗಿ ವೈದ್ಯರೆಂದರೆ ಜನರ ಸುಲಿಗೆ ಮಾಡುವವರು ಎಂಬ ಭಾವನೆ ದಟ್ಟವಾಗಿರುವ ಪ್ರಸ್ತುತ ಕಾಲಟ್ಟದಲ್ಲಿ ಬಡಜನರಿಗೆ ಕೇವಲ 20 ರೂಪಾಯಿಗೆ ಚಿಕಿತ್ಸೆ ನೀಡುವ ವೈದ್ಯರಾಗಿ ಜನಾನುರಾಗಿಯಾಗಿರುವ ಮಧ್ಯ ಪ್ರದೇಶದ ಡಾ. ಮುನೀಶ್ವರ ಚಂದ್ರ ದಾವರ್​ (ಎಂ.ಸಿ. ದಾವರ್​) ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಬಲ್ಪುರ ಜಿಲ್ಲೆಯವರಾದ 77 ವರ್ಷದ ದಾವರ್​, ಈಗಿನ ಪಾಕಿಸ್ತಾನದ ಪಂಜಾಬ್​ನಲ್ಲಿ 1946 ಜನವರಿ 16ರಂದು ಜನಿಸಿದ್ದರು. ವಿಭಜನೆಯ ನಂತರ ಕುಟುಂಬದೊಂದಿಗೆ ಭಾರತಕ್ಕೆ ಸ್ಥಳಾಂತರಗೊಂಡಿದ್ದು 1967ರಲ್ಲಿ ಜಬಲ್ಪುರದಲ್ಲಿ ಎಂಬಿಬಿಎಸ್​ ಪೂರೈಸಿದ್ದರು. 1971ರ ಭಾರತ&ಪಾಕಿಸ್ತಾನ ಯುದ್ಧದ ವೇಳೆ ಭಾರತೀಯ ಸೇನೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ್ದರು. 1972ರಲ್ಲಿ ಜಬಲ್ಪುರದಲ್ಲಿ ಅತಿ ಕಡಿಮೆ ಶುಲ್ಕ ಪಡೆದು ಆರೋಗ್ಯ ಸೇವೆ ಆರಂಭಿಸಿದ್ದರು. ಮೊದಮೊದಲು ಕೇವಲ ಎರಡು ರೂಪಾಯಿ ಪಡೆಯುತ್ತಿದ್ದ ದಾವರ್​, ಈಗ 20 ರೂಪಾಯಿ ಶುಲ್ಕ ವಿಧಿಸುತ್ತಾರೆ. “ಸಾಂಕೇತಿಕ ಶುಲ್ಕ ಪಡೆಯುವ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯುತ್ತದಾದರೂ ಆ ವಿಚಾರದಲ್ಲಿ ಯಾರದ್ದೇ ಆಕ್ಷೇಪವಿಲ್ಲ’ ಎನ್ನುತ್ತಾರೆ ದಾವರ್​. ಸಮರ್ಪಿತ ಹಾಗೂ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ತಡವಾಗಿಯಾದರೂ ಮಾನ್ಯತೆ ಸಿಗುತ್ತದೆ ಎನ್ನುವುದಕ್ಕೆ ದಾವರ್​ ಒಂದು ಉದಾಹರಣೆ.
ಸಂಸತಿ ರಕ್ಷಕಬುಡಕಟ್ಟು ಜನರ ದೇಶೀಯ ಸಂಸತಿ ರಕ್ಷಣೆಗೆ ಶ್ರಮಿಸಿದ ಹಲವರು ಈ ಬಾರಿ ಪದ್ಮ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅಂಥವರಲ್ಲಿ ನಾಗಾ ಸಾಮಾಜಿಕ ಕಾರ್ಯಕರ್ತ ರಾಮ್​ಕುವಾಂಗ್ಬೆ ನ್ಯುಮಿ ಒಬ್ಬರು. ಅವರು ಶಿಬಿರಗಳು ಮತ್ತು ಕಾರ್ಯಕ್ರಮಗಳ ಮೂಲಕ ಹೆರಾಕಾ ಸಂಸತಿಯನ್ನು ರಸಿ ಉತ್ತೇಜಿಸಿದ್ದಾರೆ. ಅವರು 10 ಶಾಲೆಗಳನ್ನು ಸ್ಥಾಪಿಸಿದ್ದು ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಹೆರಾಕಾ ಧರ್ಮದ “ತಿಂವಾಂಗ್​ ಹಿಂಗ್ಡೆ’ಯನ್ನು ಲಿಪ್ಯಂತರ (ಟ್ರಾನ್ಸ್​ಸ್ಕ್ರಿಪ್ಟ್​) ಮಾಡಿದ್ದಾರೆ.

ಸಿದ್ದಿ ಮಕ್ಕಳಿಗೆ ಶಿಕ್ಷಣಗುಜರಾತ್​ನ ಸಿದ್ದಿ ಬುಡಕಟ್ಟಿನ ಸಾಮಾಜಿಕ ಕಾರ್ಯಕರ್ತೆ, 62 ವರ್ಷದ ಹೀರಾಬಾಯಿ ಲೋಬಿ ಪದ್ಮ ಪ್ರಶಸ್ತಿಗೆ ಭಾಜನರಾದ ಇನ್ನೊಬ್ಬ ಸಾಧಕಿ. ತಾವು ಸ್ಥಾಪಿಸಿದ ಅಂಗನವಾಡಿಗಳ ಮೂಲಕ ಸಿದ್ದಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಸೀರೆಯಲ್ಲಿ ಭಗವದ್ಗೀತೆ2018ರಲ್ಲಿ ಸಿಲ್ಕ್​ ಸೀರೆಯಲ್ಲಿ ಸಂಸತದಲ್ಲಿ ಭಗವದ್ಗೀತೆಯನ್ನು ನೇಯ್ದು ದೇಶದ ಗಮನ ಸೆಳೆದಿದ್ದ ಅಸ್ಸಾಂನ ದಿಬ್ರುಗಢದ 66 ವರ್ಷದ ಹೇಮಪ್ರಭಾ ಚುತಿಯಾ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅನೇಕ ಧಾರ್ಮಿಕ ಗ್ರಂಥಗಳ ಭಾಗಗಳನ್ನು ನೇಯ್ದ ಸಾಧನೆಯನ್ನು ಕೂಡ ಅವರು ಮಾಡಿದ್ದಾರೆ.
ಬುಡಕಟ್ಟು ಜನರ ಮಿತ್ರಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದ ತೀರಾ ಒಳನಾಡು ಪ್ರದೇಶದಲ್ಲಿ ವಾಸಿಸುವ ಜರಾವಾ ಬುಡಕಟ್ಟು ಜನರಲ್ಲಿ ಸ್ಫೋಟಗೊಂಡಿದ್ದ ದಡಾರ ಮುಂತಾದ ವ್ಯಾಧಿಗಳಿಗೆ ಚಿಕಿತ್ಸೆ ನೀಡಲು ಬನ್ನಿ ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತ ನೀಡಿದ ಆಹ್ವಾನವನ್ನು ಥಟ್ಟನೆ ಸ್ವೀಕರಿಸಿ ಅಲ್ಲಿಗೆ ಧಾವಿಸಿ ಸೇವೆಯಲ್ಲಿ ನಿರತರಾದವರು ರತನ್​ ಚಂದ್ರ ಕಾರ್​. 1998ರಲ್ಲಿ ಸರ್ಕಾರದ ಕರೆಗೆ ಓಗೊಟ್ಟು ಆಗ ವೈದ್ಯಕಿಯ ಅಧಿಕಾರಿಯಾಗಿದ್ದ ಕಾರ್​, ಅಲ್ಲಿ ತೆರಳಿ ಬುಡಕಟ್ಟು ಜನರ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡರು. ಕಡಮಟಾಲಾ ಮತ್ತು ಲಖ್ರಲುಂಗ್ಟಾ ಮುಂತಾದ ಗ್ರಾಮಗಳಲ್ಲಿ ಸ್ಥಳಿಯರು ಹಾಗೂ ಬುಡಕಟ್ಟು ಜನರಿಗೆ ಚಿಕಿತ್ಸೆ ನೀಡುತ್ತಾ ಕಾರ್​ ಅವರ ಆತ್ಮೀಯ ಮಿತ್ರನಾಗಿಬಿಟ್ಟರು. ಸದಾ ವಿಷಮಯ ಬಿಲ್ಲು&ಬಾಣಗಳೊಂದಿಗೆ ಸಜ್ಜಾಗಿರುವ ಜರಾವಾ ಬುಡಕಟ್ಟು ಜನರು, ಹೊರಗಿನವರು ತಮ್ಮ ಪ್ರದೇಶಕ್ಕೆ ಬರುವುದನ್ನು ಉಗ್ರವಾಗಿ ಪ್ರತಿರೋಧಿಸುತ್ತಾರೆ. ಅಂಥ ಮುಗ್ಧ ಹಾಗೂ ಅಸ್ಮಿತೆಗಾಗಿ ಹೋರಾಡುವ ಜನರ ನಡುವೆ ದಶಕಗಟ್ಟಲೆ ಕಾಲ ಕೆಲಸ ಮಾಡಿದ ಕಾರ್​ಗೆ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಸರ್ಕಾರದ ಕರೆ ಬಂದಾಗ ಕುಟುಂಬದಲ್ಲಿ ಸ್ವಲ್ಪ ಅಳುಕಿದ್ದರೂ ಪತ್ನಿ ಅಂಜಲಿ ಪತಿಯನ್ನು ಹುರಿದುಂಬಿಸಿ ವಿನಾಶದ ಅಂಚಿನಲ್ಲಿರುವ ಜರಾವಾ ಜನರ ಚಿಕಿತ್ಸೆಗೆ ಹೋಗುವಂತೆ ಪ್ರೀತಿಯಿಂದ ಕಳಿಸಿಕೊಟ್ಟಿದ್ದರು.
ಮೋದಿ ಕಾರಣದಿಂದಲೇ ನನಗೆ ಪದ್ಮಭೂಷಣ ಲಭಿಸಿದೆ
ಮೈಸೂರು:“ಪ್ರಧಾನಿ ನರೇಂದ್ರ ಮೋದಿ ಕಾರಣದಿಂದಲೇ ನನಗೆ ಪದ್ಮಭೂಷಣ ಪುರಸ್ಕಾರ ದೊರೆತಿದೆ. ಇಲ್ಲದಿದ್ದರೆ ಸಿಗುತ್ತಿರಲಿಲ್ಲ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್​.ಎಲ್​.ಬೈರಪ್ಪ ಹೇಳಿದರು.
ಪದ್ಮಭೂಷಣ ಪುರಸ್ಕಾರ ೂಷಣೆಯಾದ ಹಿನ್ನೆಲೆಯಲ್ಲಿ ಮೈಸೂರಿನ ಕುವೆಂಪುನಗರದ ತಮ್ಮ ಮನೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರಶಸ್ತಿ ನೀಡಿದ್ದಾರೆಂಬ ಕಾರಣಕ್ಕೆ ಸರ್ಕಾರವನ್ನು ಹೊಗಳುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಆದರೆ, ರಾಜಕೀಯದ ಬಗ್ಗೆ ಓದಿಕೊಂಡಿದ್ದು, ದೇಶದಲ್ಲಿ ಮೋದಿ ಸರ್ಕಾರದಂತಹ ಸರ್ಕಾರ ಈವರೆಗೆ ಬಂದಿರಲಿಲ್ಲ. ಸೇವೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಧೈರ್ಯ ಇರುವಂಥವರು ಇದುವರೆಗೆ ಯಾರೂ ಬಂದಿರಲಿಲ್ಲ ಎಂದು ಹೊಗಳಿದರು.
2024 ಹಾಗೂ 2029ರ ಲೋಕಸಭಾ ಚುನಾವಣೆಯಲ್ಲೂ ನರೇಂದ್ರ ಮೋದಿ ಬಹುಮತದಿಂದ ಗೆಲ್ಲಬೇಕು. ಬಳಿಕವೇ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬೇಕು. ಈವರೆಗೂ ಅವರಂತೆಯೇ ಇರುವವರನ್ನು ತಯಾರು ಮಾಡಬೇಕು ಎಂದರು. ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಕ್ಕೆ ತರಬೇಕು. ಎಲ್ಲ ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ಮಾಡಬೇಕು. ಮತಕ್ಕಾಗಿ ಒಂದು ವರ್ಗದ ಓಲೈಕೆ ಸರಿಯಲ್ಲ. ಅಲ್ಪಸಂಖ್ಯಾತರು ಬೇರೆ ಎಂದು ಮಾಡಿದ್ದು ಏಕೆ? ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಸರಿಯಾದ ಬುನಾದಿ ಹಾಕಲಿಲ್ಲ. ಇದರಿಂದ ಹಲವು ಸಮಸ್ಯೆಗಳಾಗಿವೆ ಎಂದು ಹೇಳಿದರು.
ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಅಸಮಾಧಾನ2002ರ ಗುಜರಾತ್​ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಹೊರತಂದಿರುವ ಸಾಕ್ಷ್ಯಚಿತ್ರದ ಬಗ್ಗೆ ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಜಿ20 ಶೃಂಗಸಭೆಗೆ ಉತ್ತಮ ಅರ್ಥಶಾಸರನ್ನು ಆಯ್ಕೆ ಮಾಡಿದ್ದನ್ನು ಸಹಿಸಲಾಗದೇ ಇಂಥದ್ದೆಲ್ಲ ಶುರು ಮಾಡಿದ್ದಾರೆ. ಬಹಳ ಹಳೆಯ ವಿಷಯವನ್ನು ಈಗ ತೆಗೆದಿದ್ದಾರೆ ಎಂದು ಕಿಡಿಕಾರಿದರು. ಈಗ ದೇಶ ಬಹಳ ಅಭಿವೃದ್ಧಿ ಕಂಡಿದೆ. ಅಂತೆಯೇ ಸವಾಲುಗಳೂ ಇವೆ. ವಿದೇಶದಲ್ಲಿ ಸೋತವರು ಗೆದ್ದವರನ್ನು ಅಭಿನಂದಿಸುತ್ತಾರೆ. ಆದರೆ, ನಮ್ಮಲ್ಲಿ ಆ ರೀತಿ ಇಲ್ಲ. ಪ್ರತಿಪಕ್ಷದಲ್ಲಿರುವವರು ಜವಾಬ್ದಾರಿ ಏನೆಂದು ತಿಳಿಯದೇ ಸದಾ ಬೈಗುಳದಲ್ಲಿ ತೊಡಗುತ್ತಿದ್ದಾರೆ. ಅಧ್ಯಯನ ಮಾಡಿ, ಅಂಕಿ&ಅಂಶಗಳನ್ನು ಇಟ್ಟುಕೊಂಡು ಸರ್ಕಾರ ಯಾವ್ಯಾವುದನ್ನು ಮಾಡಿಲ್ಲ ಎಂದು ತಿಳಿಸಬೇಕು. ಆಗ, ಉತ್ತಮ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ ಎಂದರು.
ಕೃತಿ ಕಾಲದ ಪರೀಕ್ಷೆಯಲ್ಲಿ ಗೆಲ್ಲಬೇಕುಪದ್ಮಭೂಷಣ ಪುರಸ್ಕಾರ ಸಿಕ್ಕಿದ್ದಕ್ಕಿಂತಲೂ, ನನ್ನ ಪುಸ್ತಕಗಳನ್ನು ಲಾಂತರ ಜನರು ಓದಿ ಸಂತೋಷಪಟ್ಟಿರುವುದು ಹೆಚ್ಚಿನ ಆನಂದ ನೀಡಿದೆ. ನನಗೀಗ 92 ವರ್ಷ. ನಾನು ಸತ್ತ ಮೇಲೂ ನನ್ನ ಪುಸ್ತಕಗಳು ಬದುಕುತ್ತವೆಯೇ ಎನ್ನುವುದು ಮುಖ್ಯವಾಗುತ್ತದೆ. ಅದುವೇ ನಿಜವಾದ ಪ್ರಶಸ್ತಿ. ಕುಮಾರವ್ಯಾಸ 500 ವರ್ಷ ಹಿಂದಿನವನು. ಈಗಲೂ ಆತನ ಕೃತಿಯನ್ನು ಓದುತ್ತಾರೆ. ಆ ಬರವಣಿಗೆಯಲ್ಲಿ ಅಂತಹ ಶಕ್ತಿ ಇದೆ. ನನ್ನ ಸಾಹಿತ್ಯದಲ್ಲೂ ಆ ಶಕ್ತಿ ಇದೆಯೇ ಎನ್ನುವುದನ್ನು ಆಲೋಚಿಸಬೇಕು. ನಾನು ಈವರೆಗೂ ಆಲೋಚಿಸುತ್ತಿರುವುದು ಇದನ್ನೇ ಎಂದರು.
ಕಲೆ ಪ್ರೀತಿಸುವ ಮನೋಭಾವ ಅಗತ್ಯ
ಚಿಕ್ಕಬಳ್ಳಾಪುರ:ಸರ್​.ಎಂ.ವಿಶ್ವೇಶ್ವರಯ್ಯ ಮತ್ತು ಸಿಎನ್​ಆರ್​ ರಾವ್​ ಅವರ ಮೂಲಕ ಎರಡು ಭಾರತರತ್ನ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ, ತಮಟೆ ಮಾಂತ್ರಿಕ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪಅವರಿಂದ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು ಹಿರಿಮೆ ಹೆಚ್ಚಿಸಿದೆ. ಬಯಲುಸೀಮೆ ಜಿಲ್ಲೆಯಲ್ಲಿ ದೇವರ ಜಾತ್ರೆಗಳು, ಶವಯಾತ್ರೆಗಳಿಗೆ ಸೀಮಿತವಾಗಿದ್ದ ತಮಟೆ ವಾದನ ದೇಶ& ವಿದೇಶಗಳ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸುವಷ್ಟರ ಮಟ್ಟಿಗೆ ವಾತಾವರಣ ನಿರ್ಮಿಸುವಲ್ಲಿ ಮುನಿವೆಂಕಟಪ್ಪ ಪಾತ್ರ ಮಹತ್ತರವಾದುದು. ತನ್ನದೇ ಆದ ತಂಡ ಕಟ್ಟಿಕೊಂಡು ಯುವ ಜನರನ್ನು ಸೆಳೆಯುತ್ತಿದ್ದು, ಕಲೆಯನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಅವರೊಂದಿಗಿನ ಸಂಪ್ತ ಮಾತುಕತೆ ಇಲ್ಲಿದೆ.
* ತಮಟೆ ಕಲೆ ರೂಢಿಸಿಕೊಳ್ಳಲು ಹೇಗೆ ಪೋತ್ಸಾಹ ಸಿಕ್ಕಿತು?& ಒಮ್ಮೆ ದೇವರಮಳ್ಳೂರಿನಲ್ಲಿ ತಮಟೆ ಬಾರಿಸಿದ್ದನ್ನು ನೋಡಿದ ಜಾನಪದ ಅಕಾಡೆಮಿಯ ನಾಗೇಗೌಡರು, ಎಲ್ಲಿಯೇ ಕಾರ್ಯಕ್ರಮ ನಡೆಸಿದರೂ ಆಹ್ವಾನ ನೀಡುತ್ತೇವೆ, ಅಲ್ಲಿಗೆ ಬಂದು ತಮಟೆ ಬಾರಿಸಬೇಕೆಂಬುದಾಗಿ ಹೇಳಿದರು. ಹಾಗೆಯೇ ಒಳ್ಳೆಯ ಅವಕಾಶಗಳನ್ನು ಕೊಡಿಸಿದರು. ಇದರಿಂದ ದೇಶ&ವಿದೇಶಗಳಲ್ಲಿ ನನ್ನ ಕಲೆ ಪ್ರದರ್ಶಿಸಲು ಸಾಧ್ಯವಾಯಿತು.
* ಕಲಾವಿದರಾಗಿ ಎದುರಿಸಿದ ಸವಾಲುಗಳು?.& ಮೊದಲು ತಮಟೆ ಬಾರಿಸುವವರನ್ನು ಕಡೆಗಣಿಸಲಾಗುತ್ತಿತ್ತು. ಆದರೂ, ದೇವರ ಜಾತ್ರೆ, ಶವಯಾತ್ರೆಗಾಗಿ ಕರೆಯುತ್ತಿದ್ದರು. ಈಗ ಬದಲಾಗಿದೆ. ಸಂಗೀತದಂತಹ ಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ತಮಟೆ ಕಲೆ ಪ್ರದರ್ಶಿಸುವಷ್ಟರ ಮಟ್ಟಿಗೆ ಬೆಳವಣಿಗೆಯಾಗಿದೆ.
* ತಮಟೆ ಕಲೆಗೆ ಪೋತ್ಸಾಹ ಇದೆಯೇ?&ಕಲಿಯಲು ಯುವಕರು ಬರುತ್ತಾರೆ. ಕೆಲವರು ಹಣ ಸಿಗುತ್ತದೆ ಎಂಬ ಆಸೆಗೆ ಸೀಮಿತವಾಗುತ್ತಾರೆ. ಕಲೆಯನ್ನು ಪ್ರೀತಿಸುವ, ಬೆಳೆಸುವ ಮನೋಭಾವ ಅಗತ್ಯ. ಇದಕ್ಕೆ ಕಲಾವಿದರಿಗೆ ತರಬೇತಿ, ಪೋತ್ಸಾಹ ಮತ್ತು ನೆರವು ಸಿಗಬೇಕು.
*ಸರ್ಕಾರದಿಂದ ನೆರವಿನ ನಿರೀಕ್ಷೆ ಇದೆಯೇ?& ಇದೆ. ಆದರೆ, ಯಾರನ್ನು ಕೇಳುವುದು? ರಾಜ್ಯೋತ್ಸವ ಪ್ರಶಸ್ತಿ ಸಂದರ್ಭದಲ್ಲಿ ನಿವೇಶನಕ್ಕಾಗಿ ನಿಯಮಾನುಸಾರ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಲಾಯಿತು. ಬೆಂಗಳೂರಿನ ಕೆಂಪೇಗೌಡ ಬಡಾವಣೆಯಲ್ಲಿ ಮಂಜೂರಾಯಿತು. ಇದೇ ವೇಳೆ 5 ಲಕ್ಷ ರೂಪಾಯಿ ಪಾವತಿಸಬೇಕು ಎಂದು ತಿಳಿಸಿದರು. ಅದಕ್ಕೆ ಸುಮ್ಮನಾದೆ. ಒಂದು ನಿವೇಶನ ಕೊಡಲಿ. ಮಾಸಾಶನ ಹೆಚ್ಚಿಸಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
