ನವದೆಹಲಿ:ಸಂಸತ್​ನ ಪ್ರಸ್ತುತ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿಯನ್ನು ಸರ್ಕಾರ ರದ್ದು ಮಾಡಿದೆ. ಪ್ರಮುಖ ವಿಷಯಗಳ ಕುರಿತು ರ್ಚಚಿಸುವ ಶೂನ್ಯವೇಳೆ ಕಲಾಪವನ್ನು 30 ನಿಮಿಷಕ್ಕೆ ಇಳಿಸಿದೆ. ಸಂಸದರಿಗೆ ಖಾಸಗಿ ಮಸೂದೆ ಮಂಡಿಸಲು ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ನಿರ್ಧಾರವನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ.
ಪ್ರಶ್ನೋತ್ತರ ಅವಧಿ ಇದ್ದರೆ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರಿಗೆ ತಮ್ಮ ಸಚಿವಾಲಯದ ಅಧಿಕಾರಿಗಳ ನೆರವು ಬೇಕಾಗುತ್ತದೆ. ಇದರಿಂದ ಅಧಿವೇಶನದಲ್ಲಿ ಹೆಚ್ಚಿನ ಜನರು ಇರಬೇಕಾಗುತ್ತದೆ. ಕರೊನಾ ಹಿನ್ನೆಲೆಯಲ್ಲಿ ಇದು ಸುರಕ್ಷಿತವಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಇದನ್ನು ವಿರೋಧಿಸಿ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳು ಪಾಳಿ ಪ್ರಕಾರ ನಡೆಯಲಿವೆ. ದೈಹಿಕ ಅಂತರದ ನಿಯಮಾನುಸಾರವೇ ಸಂಸದರಿಗೆ ಆಸನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಅಧಿಕಾರಿಗಳು, ಸಹಾಯಕರು ಮತ್ತು ಮಾಧ್ಯಮ ಪ್ರತಿನಿಧಿಗಳ ಸಂಖ್ಯೆಯನ್ನೂ ಮಿತಗೊಳಿಸಲಾಗಿದೆ.
ಬಿಡುವಿಲ್ಲದ ಕಲಾಪ
ಲೋಕಸಭೆಯ ಮೊದಲ ದಿನದ (ಸೆ.14) ಕಲಾಪ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು 2ನೇ ದಿನದಿಂದ ಅಧಿವೇಶನ ಅಂತ್ಯವಾಗುವ ಅಕ್ಟೋಬರ್ 1ರವರೆಗೆ ಮಧ್ಯಾಹ್ನ 3ರಿಂದ 7ರವರೆಗೆ ಕಲಾಪ ನಡೆಯಲಿದೆ. ರಾಜ್ಯಸಭೆಯ ಕಲಾಪವು ಮೊದಲ ದಿನ ಮಧ್ಯಾಹ್ನ 3ರಿಂದ 7ರವರೆಗೆ ಮತ್ತು ಎರಡನೇ ದಿನದಿಂದ ಅ.1ರವರೆಗೆ ಬೆಳಗ್ಗೆ 9ರಿಂದ 1 ಗಂಟೆವರೆಗೆ ನಡೆಯಲಿದೆ. ವಾರಾಂತ್ಯ ದಿನದಲ್ಲೂ ಅಧಿವೇಶನ ನಡೆಯಲಿದ್ದು ರಜೆ ಇರುವುದಿಲ್ಲ.
ಪ್ರಶ್ನೆಗಳಿಗೆ ಲಿಖಿತ ಉತ್ತರ
ಸಂಸದರು ಲಿಖಿತವಾಗಿ ಸಲ್ಲಿಸಿದ ಪ್ರಶ್ನೆಗಳಿಗೆ ಲಿಖಿತರೂಪದ ಉತ್ತರ ದೊರೆಯಲಿದೆ. ಆದರೆ, ಈ ಉತ್ತರವನ್ನು ಸಂಬಂಧಿಸಿದ ಸಚಿವರು ಸದನಲ್ಲಿ ಓದಿ ವಿವರ ನೀಡುವುದಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
