ಶ್ರೀನಗರ: ಸತತ ಉಗ್ರ ನಿಗ್ರಹ ಕಾರ್ಯಾಚರಣೆಯ ಬಳಿಕ ಜಮ್ಮು-ಕಾಶ್ಮೀರದ ಶ‍್ರೀನಗರ ಜಿಲ್ಲೆಯಲ್ಲಿ ಈಗ ಸ್ಥಳೀಯ ನಿವಾಸಿಗಳಾದ ಯಾವುದೇ ಸಕ್ರಿಯ ಉಗ್ರ ಉಳಿದುಕೊಂಡಿಲ್ಲ ಎಂದು ಜಮ್ಮು-ಕಾಶ್ಮೀರ ಪೊಲೀಸರು ಭಾನುವಾರ ಘೋಷಿಸಿದ್ದಾರೆ. ಶನಿವಾರ ನಡೆದ ಎನ್‍ಕೌಂಟರ್ ಒಂದರಲ್ಲಿ ಎಲ್‍ಇಟಿ (ಲಷ್ಕರ್ ಏ ತೊಯ್ಬಾ)ಯ ಉಗ್ರ ಇಶ್ಫಾಕ್‍ ರಶೀದ್ ಖಾನ್ ಬಲಿಯಾದ ನಂತರದಲ್ಲಿ ಪೊಲೀಸರು ಈ ಘೋಷಣೆ ಮಾಡಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಉಗ್ರ ನಿಗ್ರಹ ಕಾರ್ಯಾಚರಣೆ ನಡೆದಿದ್ದು, ಅನೇಕ ಸರಣಿ ಎನ್‍ಕೌಂಟರ್‍ ನಡೆದಿವೆ. ಈ ವರ್ಷ ಇದುವರೆಗೆ 138 ಉಗ್ರರು ಹತರಾಗಿದ್ದಾರೆ.
ಜಮ್ಮು-ಕಾಶ್ಮೀರದ ಡಿಜಿಪಿ ದಿಲ್‍ಬಾಘ್ ಸಿಂಗ್‍, ಇದುವರೆಗೂ ಅತ್ಯಂತ ಯಶಸ್ವಿ ಕಾರ್ಯಾಚರಣೆ ನಡೆದಿದೆ. ಬಹುತೇಕ ಎಲ್ಲ ಕಾರ್ಯಾಚರಣೆಗಳೂ ಉಗ್ರ ನಿಗ್ರಹ ಕಾರ್ಯವನ್ನು ಯಶಸ್ವಿಯಾಗುವಂತೆ ಮಾಡಿದ್ದು, ಉಗ್ರರನ್ನು ಹೊಡೆದುರುಳಿಸುವುದ ಖುಷಿಯ ವಿಚಾರವೇನಲ್ಲ ನಮಗೆ. ಆದರೆ, ಗನ್ ಹಿಡಿದ ವ್ಯಕ್ತಿಯಿಂದ ಸಮಾಜಕ್ಕೆ ಬೆದರಿಕೆ, ಹಾನಿ ಉಂಟಾಗುವ ಸಾಧ್ಯತೆ ಇರುವ ಕಾರಣ ಈ ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಬೆದರಿಕೆಯನ್ನು ನಾವು ತಳ್ಳಿಹಾಕುವಂತಿಲ್ಲ. ಈಗ ಈ ಪ್ರದೇಶದಲ್ಲಿ ಉಗ್ರ ಸಂಘಟನೆಗಳಿಗೆ ಹೊಸ ನೇಮಕಾತಿ ಪ್ರಕ್ರಿಯೆ ಗಣನೀಯವಾಗಿ ಇಳಿಕೆಯಾಗಿದೆ ಎಂಬುದನ್ನು ತಿಳಿಸುವುದಕ್ಕೆ ಖುಷಿ ಅನಿಸುತ್ತಿದೆ ಎಂದು ಇದಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.
ಇದನ್ನೂ ಓದಿ:ಬಹುತೇಕ ಉಗ್ರ ಸಂಘಟನೆಗಳಿಗೆ ಪಾಕ್‍ ನಂಟು: ವಿಶ್ವಸಂಸ್ಥೆ ವರದಿ
ಕಳೆದ ವರ್ಷ ಆಗಸ್ಟ್ 5ರಂದು ಸಂವಿಧಾನದ ಅನುಚ್ಛೇದದ 370ನೇ ವಿಧಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸವಲುತ್ತು ರದ್ದುಗೊಳಿಸುವ ಮೂಲಕ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ ನಂತರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಚುರುಕುಗೊಂಡಿತ್ತು. ಇದೇ ವೇಳೆ, ಗಡಿಯಾಚೆಯಿಂದ ಉಗ್ರರನ್ನು ಕಾಶ್ಮೀರದೊಳಕ್ಕೆ ಕಳುಹಿಸುವ ಪಾಕಿಸ್ತಾನದ ಪ್ರಯತ್ನವೂ ಶತಾಯಗತಾಯ ನಡೆಯುತ್ತಲೇ ಇದೆ. ಸದ್ಯ ದಕ್ಷಿಣ ಕಾಶ್ಮೀರ ಉಗ್ರ ಚಟುವಟಿಕೆಯ ತಾಣವಾಗಿ ರೂಪುಗೊಳ್ಳುವ ಸಾಧ್ಯತೆ ಇದ್ದು, ಅಲ್ಲಿ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಪಿಒಕೆಯ ಸ್ಕದ್ರು ವಾಯುನೆಲೆಯಲ್ಲಿ ಇಳಿದಿವೆ ಪಾಕ್‍ನ ಜೆ-17 ಫೈಟರ್ ಜೆಟ್‍ಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 3 =
Remember me
