ಚೆನ್ನೈ:ಮನಸೆಲ್ಲಾ ನೀನೆ ಸಿನಿಮಾ ಖ್ಯಾತಿಯ ನಟಿ ಗಾಯತ್ರಿ ರಘುರಾಮ್ ಅವರು ತಮಿಳುನಾಡು ಬಿಜೆಪಿ ಪಕ್ಷಕ್ಕೆ ಗುಡ್​ ಬೈ ಹೇಳಿದ್ದಾರೆ. ಕಳೆದ ವರ್ಷವಷ್ಟೇ ಬಿಜೆಪಿಯಿಂದ ಗಾಯತ್ರಿ ಅಮಾನತ್ತಾಗಿದ್ದರು. ಇದೀಗ ಪಕ್ಷದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬ ಕಾರಣ ನೀಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಗಾಯತ್ರಿ ಅವರು ರಾಜ್ಯದ ಬಿಜೆಪಿ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆಯಾಗಿದ್ದರು. ಸರಣಿ ಟ್ವೀಟ್​ ಮಾಡಿರುವ ಗಾಯತ್ರಿ ತಮಿಳುನಾಡು ಬಿಜೆಪಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ.
ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಗೌರವ ಸಿಗದೇ ಇರುವುದಕ್ಕೆ ನಾನು ತಮಿಳುನಾಡು ಬಿಜೆಪಿಗೆ ರಾಜೀನಾಮೆ ನೀಡುವ ನಿರ್ಧಾರವನ್ನು ಭಾರವಾದ ಹೃದಯದಿಂದ ತೆಗೆದುಕೊಂಡಿದ್ದೇನೆ. ಅಣ್ಣಾಮಲೈ ನೇತೃತ್ವದಲ್ಲಿ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಯಾರೂ ಕೂಡ ನಿಜವಾದ ಕಾರ್ಯಕರ್ತರ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಿಜವಾದ ಕಾರ್ಯಕರ್ತರನ್ನು ಪಕ್ಷದಿಂದ ಓಡಿಸುವುದೇ ಅಣ್ಣಾಮಲೈ ಅವರ ಏಕೈಕ ಗುರಿಯಾಗಿದೆ. ಬಿಜೆಪಿಗೆ ಶುಭ ಹಾರೈಸುತ್ತೇನೆ ಎಂದು ಗಾಯತ್ರಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮೋದೀಜಿ ನೀವು ತುಂಬಾ ವಿಶೇಷ,. ನೀವು ರಾಷ್ಟ್ರಪಿತರು, ನೀವು ಯಾವಾಗಲೂ ನನ್ನ ವಿಶ್ವಗುರು ಮತ್ತು ಮಹಾನ್ ನಾಯಕ ಎಂದು ಪ್ರಶಂಸಿಸಿರುವ ಗಾಯತ್ರಿ, ಅಮಿತ್ ಶಾ ಜೀ ನೀವು ಎಂದೆಂದಿಗೂ ನನ್ನ ಚಾಣಕ್ಯ ಗುರುಗಳಾಗಿ ಉಳಿಯುತ್ತೀರಿ ಎಂದಿದ್ದಾರೆ.
ಇಂದು ನಾನು ಈ ಆತುರದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಮತ್ತು ಅದರ ಕ್ರೆಡಿಟ್ ಅಣ್ಣಾಮಲೈ ಅವರಿಗೆ ಸಲ್ಲುತ್ತದೆ. ಮುಂದೆ ನಾನು ಅಣ್ಣಾಮಲೈ ಬಗ್ಗೆ ಕಡಿಮೆ ಕಾಳಜಿ ವಹಿಸಲು ಬಯಸುತ್ತೇನೆ. ಅವರೊಬ್ಬ ಸುಳ್ಳುಗಾರ ಮತ್ತು ಅಧರ್ಮದ ನಾಯಕ ಎಂದು ಗಾಯತ್ರಿ ಜರಿದಿದ್ದಾರೆ.
ನನ್ನ ಜೊತೆ 8 ವರ್ಷಗಳ ಕಾಲ ಕೆಲಸ ಮಾಡಿದ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದಗಳು. ಕಾರ್ಯಕರ್ತರೊಂದಿಗೆ ನಾನು ಅಪಾರ ಪ್ರೀತಿ ಮತ್ತು ಗೌರವವನ್ನು ಹಂಚಿಕೊಂಡಿದ್ದೇನೆ. ನಿಜಕ್ಕೂ ಇದೊಂದು ದೊಡ್ಡ ಪ್ರಯಾಣವಾಗಿತ್ತು. ಇತರರನ್ನು ನೋಯಿಸುವುದು ಹಿಂದು ಧರ್ಮವಲ್ಲ. ಅಣ್ಣಾಮಲೈ ನಾಯಕತ್ವದಲ್ಲಿ ಮುಂದುವರಿಯಲು ನನಗೆ ಸಾಧ್ಯವಿಲ್ಲ. ಅವರಿಂದ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಹಿಳೆಯರೇ ಸುರಕ್ಷಿತವಾಗಿರಿ, ಯಾರಾದರೂ ನಿಮ್ಮನ್ನು ರಕ್ಷಿಸುತ್ತಾರೆ ಎಂದು ನಂಬಬೇಡಿ. ಏಕೆಂದರೆ, ಯಾರೂ ಬರುವುದಿಲ್ಲ. ನಿಮ್ಮನ್ನು ಮಾತ್ರ ನೀವು ನಂಬಿರಿ. ನಿಮ್ಮನ್ನು ಗೌರವಿಸದ ಸ್ಥಳದಲ್ಲಿ ಎಂದಿಗೂ ಉಳಿಯಬೇಡಿ ಎಂದು ಗಾಯತ್ರಿ ಕರೆ ನೀಡಿದ್ದಾರೆ.
ಅಣ್ಣಾಮಲೈ ಅವರನ್ನು ಮತ್ತಷ್ಟು ತನಿಖೆ ಮಾಡಲು ಎಲ್ಲ ವಿಡಿಯೋಗಳು ಮತ್ತು ಆಡಿಯೋಗಳನ್ನು ಒಪ್ಪಿಸಲು ನಾನು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಸಿದ್ಧನಿದ್ದೇನೆ. ಅಣ್ಣಾಮಲೈ ಓರ್ವ ಅನಾರೋಗ್ಯದ ವ್ಯಕ್ತಿ ಮತ್ತು ನನಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಎಂದು ಗಾಯತ್ರಿ ದೂರಿದ್ದಾರೆ.(ಏಜೆನ್ಸೀಸ್​)
I have taken the decision with heavy heart to resign from TNBJP for not giving opportunity for an enquiry, equal rights & respect for women. Under Annamalai leadership women are not safe. I feel better to be trolled as an outsider..@narendramodi.@AmitShah@JPNadda@blsanthosh
— Gayathri Raguramm 🇮🇳🚩 (@Gayathri_R_)January 2, 2023

I’m ready to raise a police complaint To surrender all videos and audio’s. And to further investigate Annamalai. Sick person. And on War room which is troubling me..
— Gayathri Raguramm 🇮🇳🚩 (@Gayathri_R_)January 2, 2023

ಏರ್​ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿ, ಖಾಸಗಿ ಅಂಗ ಪ್ರದರ್ಶಿಸಿದ ಪ್ರಯಾಣಿಕ

ಸರಸ್ವತಿ ದೇವಿಯ ಫೋಟೊಗೆ ಕಾಲಿನಿಂದ ಒದ್ದು ಶಿಕ್ಷಕನಿಂದ ಅವಮಾನ; ವಿಡಿಯೋ ವೈರಲ್​

ಬೆಳ್ಳುಳ್ಳಿ ಸೇವನೆಯ ಅಡ್ಡ ಪರಿಣಾಮಗಳೇನು? ಅದನ್ನು ಸೇವಿಸಬೇಕಾದ ಸರಿಯಾದ ಕ್ರಮ ಇಲ್ಲಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 4 =
Remember me
