ಬೆಂಗಳೂರು/ನವದೆಹಲಿ:ಕೋವಿಡ್​ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಅನ್​ಲಾಕ್​ 2ರ ಮಾರ್ಗಸೂಚಿ ಪ್ರಕಾರ ಜುಲೈ 31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಬೇಕು. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ.
ಈಗಾಗಲೇ ಜೂನ್ 29ರಂದು ಪ್ರಕಟಿಸಿದ ಅನ್​ಲಾಕ್​ 2.0 ರ ಮಾರ್ಗಸೂಚಿಯಲ್ಲಿ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಸೆಂಟರ್​ಗಳು ಜುಲೈ 31ರ ತನಕ ಮುಚ್ಚಿರಬೇಕು ಎಂದು ಸೂಚಿಸಲಾಗಿದೆ. ಅದೇ ರೀತಿ, ಮಾರ್ಗಸೂಚಿಯ ಪಾರ್ಟ್​ 1(1) ರ ಪ್ರಕಾರ ಆನ್​ಲೈನ್​/ಡಿಸ್ಟೆನ್ಸ್ ಲರ್ನಿಂಗ್​ಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಪೂರಕವಾಗಿ, ಅಗತ್ಯ ಬೋಧಕ ಸಿಬ್ಬಂದಿ/ಬೋಧಕೇತರ ಸಿಬ್ಬಂದಿ ಅಥವಾ ರಿಸರ್ಚ್​ ಸ್ಕಾಲರ್​ಗಳನ್ನು ಶಾಲೆ/ಕಾಲೇಜು/ಶಿಕ್ಷಣ ಸಂಸ್ಥೆಗಳಿಗೆ ಕರೆಯಿಸಿಕೊಳ್ಳಬಾರದು ಎಂಬ ಅಂಶ ಮಾನವ ಸಂಪನ್ಮೂಲ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿದೆ.
ಇದನ್ನೂ ಓದಿ:ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ
ಕೇಂದ್ರದ ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅನಿತಾ ಕರ್ವಾಲ್​ ಸಹಿ ಹಾಕಿದ ಆದೇಶದಲ್ಲಿ, ಅನ್​ಲಾಕ್​ 2.0ರ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದನ್ನು ಖಾತರಿಪಡಿಸುವ ಕೆಲಸ ಆಯಾ ರಾಜ್ಯಗಳ ಚೀಫ್ ಸೆಕ್ರಟರಿಗಳದ್ದು ಎಂದು ಸೂಚಿಸಲಾಗಿದೆ. ಎಲ್ಲ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್​ಗಳಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ರವಾನೆಯಾಗಬೇಕು ಎಂದು ಆದೇಶ ತಿಳಿಸಿದೆ.

ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆಗೆ ಕೇಂದ್ರ ಒಪ್ಪಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
