ನವದೆಹಲಿ :ಕಳೆದ ಮೂರು ವರ್ಷಗಳಂತೆ ಈ ಬಾರಿಯೂ ಏಪ್ರಿಲ್​ನಲ್ಲಿ ಎಲೆಕ್ಟೊರಲ್ ಬಾಂಡ್​ಗಳ ಖರೀದಿಗೆ ಅವಕಾಶ ಲಭಿಸಲಿದೆ. ಏಕೆಂದರೆ ದೇಶದ ಕೆಲವೆಡೆ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬಾಂಡ್‌ಗಳ ಮಾರಾಟವನ್ನು ತಡೆಹಿಡಿಯಲು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.
ರಾಜಕೀಯ ಪಕ್ಷಗಳು ಹಣ ಸಂಗ್ರಹಿಸಲು ಅನುಕೂಲವಾಗುವಂತೆ ನರೇಂದ್ರ ಮೋದಿ ಸರ್ಕಾರವು ಜನವರಿ 2018 ರಲ್ಲಿ ಎಲೆಕ್ಟೊರಲ್ ಬಾಂಡ್​ ಸ್ಕೀಮ್​ಅನ್ನು ಜಾರಿಗೊಳಿಸಿತ್ತು. ವ್ಯಕ್ತಿಗಳು ಅಥವಾ ಕಂಪೆನಿಗಳು ಈ ಮೂಲಕ 1000 ರೂಪಾಯಿಂದ ಹಿಡಿದ 1 ಕೋಟಿ ರೂಪಾಯಿವರೆಗೆ ಎಸ್​ಬಿಐನಿಂದ ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದಾಗಿದೆ.
ಇದನ್ನೂ ಓದಿ:ಎರಡು ಮಕ್ಕಳ ತಂದೆಯನ್ನು ಮದುವೆಯಾದಳು, ತನ್ನದೇ ಮಗು ಹುಟ್ಟಿದಾಗ ಮೆಟರ್ನಿಟಿ ಲೀವ್ ಕೇಳಿದಳು… ಹೈಕೋರ್ಟ್ ಏನು ಹೇಳಿತು ನೋಡಿ…
ಈ ಯೋಜನೆಯ ವಿರುದ್ಧ ಸಿಪಿಐ-ಎಂ ಪಕ್ಷದೊಂದಿಗೆ ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ಕಾಮನ್ ಕಾಸ್ ಎಂಬ ಸರಕಾರೇತರ ಸಂಸ್ಥೆಗಳು ಪಿಐಎಲ್ ಸಲ್ಲಿಸಿವೆ. ಸುಪ್ರೀಂ ಕೋರ್ಟ್ ಮುಂದೆ ಈ ಬಾಂಡ್​ಗಳ ಕಾನೂನುಬದ್ಧತೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ.ಇದೀಗ ನಾಲ್ಕು ರಾಜ್ಯಗಳಲ್ಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಈ ವರ್ಷ ಏಪ್ರಿಲ್​ನಲ್ಲಿ ಎಲೆಕ್ಟೊರಲ್ ಬಾಂಡ್​ಗಳನ್ನು ಹೊಸದಾಗಿ ಮಾರಾಟ ಮಾಡದಂತೆ ತಡೆಯಾಜ್ಞೆ ನೀಡಬೇಕೆಂದು ಎಡಿಆರ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠವು ಬಾಂಡ್​ಗಳ ಮಾರಾಟಕ್ಕೆ ಸಾಕಷ್ಟು ಸುರಕ್ಷತಾ ಕ್ರಮಗಳು ಚಾಲ್ತಿಯಲ್ಲಿವೆ ಎಂದು ಅಭಿಪ್ರಾಯಪಟ್ಟಿದೆ. ಅರ್ಜಿಯನ್ನು ತಿರಸ್ಕರಿಸಿರುವ ಕೋರ್ಟ್, “ಈ ಬಾಂಡ್​ಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. 2018, 2019 ಮತ್ತು 2020ರಲ್ಲಿ ಇವನ್ನು ಬಿಡುಗಡೆ ಮಾಡಲಾಗಿದೆ. ಈಗ ಅವುಗಳನ್ನು ಇಷ್ಯೂ ಮಾಡುವುದರ ವಿರುದ್ಧ ತಡೆಯಾಜ್ಞೆ ನೀಡಲು ಯಾವುದೇ ಸಮರ್ಥನೆ ಕಂಡುಬರುವುದಿಲ್ಲ” ಎಂದು ಹೇಳಿದೆ.(ಏಜೆನ್ಸೀಸ್)
ಹಬ್ಬಗಳಿಗೆ ಬಿತ್ತು ಕರೊನಾ ಚಾಟಿ ಏಟು; ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ನಿಷೇಧ
‘ಫರಹಾನ್ ಹ್ಯಾಸ್ ಟು ಫಾಲೋ ರಾಂಚೋ’ ಎಂದು ಕರೊನಾ ಸುದ್ದಿ ಕೊಟ್ಟ ನಟ !
VIDEO | “ಬಂಗ್ಲಾ ಚಾಯಿ ಬಿಜೆಪಿ ಸರ್ಕಾರ್” : ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
