ವಾರಣಾಸಿ :ಕರೊನಾ ಲಸಿಕೆಗಳ ಅಭಾವ ಉಂಟಾಗುತ್ತಿದೆ ಎಂಬ ಕೆಲವು ರಾಜ್ಯಗಳ ಅಹವಾಲನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಲಸಿಕೆಯ ವಿಷಯದಲ್ಲಿ ರಾಜಕಾರಣ ಮಾಡಬೇಡಿ ಎನ್ನುತ್ತಾ ತಳ್ಳಿಹಾಕಿದ್ದಾರೆ. ಆದರೆ ಬಿಜೆಪಿ ಸರ್ಕಾರವೇ ಇರುವ ಉತ್ತರ ಪ್ರದೇಶದಲ್ಲೂ ಲಸಿಕೆಯ ಅಭಾವವುಂಟಾಗಿರುವುದು ವರದಿಯಾಗಿದೆ.
ಉ.ಪ್ರ.ದ ವಾರಣಾಸಿಯಲ್ಲಿರುವ 66 ಸರ್ಕಾರಿ ಅನುಮೋದಿತ ಕರೊನಾ ಲಸಿಕಾ ಕೇಂದ್ರಗಳಲ್ಲಿ 25 ರಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಉಳಿದ 41 ಕೇಂದ್ರಗಳಲ್ಲಿ ಲಸಿಕೆ ಸ್ಟಾಕ್ ಇಲ್ಲ ಎಂದು ಫಲಾನುಭವಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಜಿಲ್ಲೆಯ ಆರೋಗ್ಯಾಧಿಕಾರಿಗಳ ಬಳಿ ಲಸಿಕೆ ಯಾವಾಗ ಪೂರೈಸಲ್ಪಡುವುದು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇದನ್ನೂ ಓದಿ:ನಾಳೆಯಿಂದ ನೈಟ್​ ಕರ್ಫ್ಯೂ: ಸರ್ಕಾರದ ಈ ಅಧಿಕೃತ ಆದೇಶದಲ್ಲಿ ಎಲ್ಲ ಸಂದೇಹಗಳಿಗೆ ಪರಿಹಾರ…
ರಾಜ್ಯದ ರಾಜಧಾನಿ ಲಖನೌನಿಂದ ಲಸಿಕೆ ಪೂರೈಕೆಯು ಕಡಿಮೆಯಾಗಿದ್ದು, ವಾರಣಾಸಿಯಲ್ಲಿ ಲಸಿಕೆಗೆ ಹೆಚ್ಚು ಬೇಡಿಕೆ ಇರುವುದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗಿದೆ. ಈ ವಿಚಾರವನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಆರೋಗ್ಯ ಕಾರ್ಯಕರ್ತರು ಹೇಳಿದ್ದಾರೆ.
ಕರೊನಾ ಸೋಂಕು ನಿರಂತರವಾಗಿ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 11 ರಿಂದ 14 ರವರೆಗೆ ‘ಲಸಿಕಾ ಉತ್ಸವ’ ನಡೆಸಿ ಆದಷ್ಟು ಜನರಿಗೆ ಲಸಿಕೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ. ಆದರೆ ಮಹಾರಾಷ್ಟ್ರ, ಛತ್ತೀಸಗಢ, ಒಡಿಸಾ ಮತ್ತು ರಾಜಸ್ತಾನ ಸರ್ಕಾರಗಳು ಲಸಿಕೆಯ ಅಭಾವ ಇದೆ ಎಂದು ಹೇಳಿದ್ದವು. ಇದೀಗ ಉತ್ತರ ಪ್ರದೇಶದಲ್ಲೂ ಈ ಅಭಾವ ಕಂಡು ಬಂದಿರುವುದು ಕಳವಳದ ವಿಷಯವಾಗಿದೆ.(ಏಜೆನ್ಸೀಸ್)
“ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ

ಕುರ್ಚಿಗಳನ್ನು ಆಕ್ರಮಿಸಿಕೊಂಡ ಪುರುಷರು, ನೋಡುತ್ತಾ ನಿಂತ ಅಧ್ಯಕ್ಷೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fifteen =
Remember me
