ಕೇರಳ:ಸ್ವಿಗ್ಗಿ, ಜೊಮ್ಯಾಟೋ ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಆಹಾರವನ್ನು ಆರ್ಡರ್ ಮಾಡಲು ಅವಕಾಶ ನೀಡುವ ಬದಲು ಮೈದಾನದಲ್ಲಿ ಆಟವಾಡಲು ಮತ್ತು ತಾಯಂದಿರು ಮನೆಯಲ್ಲಿ ಅಡುಗೆ ಮಾಡುವಂತೆ ಮನವೊಲಿಸಲು ನ್ಯಾಯಮೂರ್ತಿ ಪಿವಿ ಕುನ್ಹಿಕೃಷ್ಣನ್ ಸಲಹೆ ನೀಡಿದ್ದಾರೆ.
ಅಶ್ಲೀಲತೆಯ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಕೇರಳ ಹೈಕೋರ್ಟ್ ಮಂಗಳವಾರ, ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಊಟವನ್ನು ನೀಡಬೇಕೆಂದು ಒತ್ತಿಹೇಳಿದೆ. ಸ್ವಿಗ್ಗಿ ಮತ್ತು ಜೊಮ್ಯಾಟೋ ಮೂಲಕ ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಆರ್ಡರ್ ಮಾಡುವುದನ್ನು ತಡೆಯುವಂತೆ ಪೋಷಕರಿಗೆ ನ್ಯಾಯಾಲಯ ಸಲಹೆ ನೀಡಿದೆ ಎಂದು ಖಾಸಗಿವಾಹಿನಿಯೊಂದು ವರದಿಮಾಡಿದೆ.
ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ್ದಕ್ಕಾಗಿ ರಸ್ತೆಬದಿಯಿಂದ ಪೊಲೀಸರು ಬಂಧಿಸಿದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಹೈಕೋರ್ಟ್ ವಿಚಾರಣೆ ನಡೆಸಿಸುವಾಗ ಇತರರೊಂದಿಗೆ ಹಂಚಿಕೊಳ್ಳದೆ, ಖಾಸಗಿಯಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಭಾರತ ದಂಡ ಸಂಹಿತೆಯ ಸೆಕ್ಷನ್ 292 ರ ಅಡಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿತು.
“ಮಕ್ಕಳನ್ನು ಹೊರಾಂಗಣಗಳಲ್ಲಿ ಆಟವಾಡುವಂತೆ ಮನವೊಲಿಸುವಂತೆ ಪೋಷಕರಿಗೆ ಸಲಹೆ ನೀಡಿರುವ ಹೈಕೋರ್ಟ್ ನ್ಯಾಯಮೂರ್ತಿ ಪಿವಿ ಕುನ್ಹಿಕೃಷ್ಣನ್, ಸ್ವಿಗ್ಗಿ ಮತ್ತು ಜೊಮ್ಯಾಟೋಗಳಂತಹ ಮೊಬೈಲ್ ಆಪ್‌ಗಳಿಂದ ಆಹಾರ ತರಿಸಲು ಮಕ್ಕಳಿಗೆ ಅವಕಾಶ ನೀಡುವ ಬದಲು ಅವರ ಅಮ್ಮಂದಿರೇ ತಯಾರಿಸಿದ ಸ್ವಾದಿಷ್ಟ ಅಡುಗೆಗಳನ್ನು ನೀಡಬೇಕು. ಬಳಿಕ ಮಕ್ಕಳನ್ನು ಆಟದ ಮೈದಾನಗಳಲ್ಲಿ ಆಡಲು ಬಿಡಿ. ಅವರು ಅಮ್ಮನ ಅಡುಗೆಯ ಪರಿಮಳವನ್ನು ಮೆಲುಕು ಹಾಕುತ್ತಾ ಮನೆಗೆ ಮರಳಿ ಬರುವಂತೆ ಇರಲಿ” ಎಂದು ಕೇರಳ ಹೈಕೋರ್ಟ್ ಹೇಳಿದೆ.
ಅಪ್ರಾಪ್ತ ಮಕ್ಕಳಿಗೆ ಸರಿಯಾಗಿ ವಿಚಾರಿಸದೆ ಮೊಬೈಲ್ ಫೋನ್‌ಗಳನ್ನು ನೀಡುವುದರಿಂದ ಒಡ್ಡುವ ಅಪಾಯಗಳ ಬಗ್ಗೆ ನ್ಯಾಯಾಧೀಶರು ಪೋಷಕರಿಗೆ ಎಚ್ಚರಿಕೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
