ನವದೆಹಲಿ:ಭಾರತೀಯ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವ ಸರ್ಕಾರದ ಉದ್ದೇಶ ಇನ್ನೂ ಈಡೇರುತ್ತಿಲ್ಲ. ತೈಲ ಆಮದು ಮಾಡಿಕೊಳ್ಳುವಾಗ ರೂಪಾಯಿ ಕರೆನ್ಸಿಯಲ್ಲಿ ಹಣ ಪಾವತಿಸುವುದಕ್ಕೆ ತೈಲ ಪೂರೈಕೆದಾರರು ಒಪ್ಪುತ್ತಿಲ್ಲ. ಸಂಸದೀಯ ಸ್ಥಾಯಿ ಸಮಿತಿ ಮುಂದೆ ಕೇಂದ್ರ ತೈಲ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಮಾಧುರಿ ದೀಕ್ಷಿತ್? ಯಾವ ಪಕ್ಷದಿಂದ ಗೊತ್ತಾ?ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿ ಮಾಡುವುದಕ್ಕೆ ಅಡೆತಡೆಗಳು ಎದುರಾಗುತ್ತಿವೆ. ಕಚ್ಚಾ ತೈಲ ಆಮದು ಮಾಡಿಕೊಳ್ಳಲು ರೂಪಾಯಿ ಕರೆನ್ಸಿಯಲ್ಲಿ ಪಾವತಿಸುವ ಭಾರತದ ಮನವಿಗೆ ಯಾರೂ ಸ್ಪಂದಿಸುತ್ತಿಲ್ಲ. ರುಪಾಯಿ ಕರೆನ್ಸಿಯಲ್ಲಿ ಹಣ ಸ್ವೀಕರಿಸಲು ಯಾರೂ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ.ಕಚ್ಚಾ ತೈಲದ ಬಹುತೇಕ ಎಲ್ಲಾ ವಹಿವಾಟಿನಲ್ಲಿ ಡಾಲರ್ ಕರೆನ್ಸಿಯನ್ನು ಬಳಕೆ ಮಾಡಲಾಗುತ್ತದೆ. ಅದು ಮೊದಲಿನಿಂದಲೂ ಇದೇ ರೀತಿ ನಡೆದು ಬಂದಿದೆ. ಡಾಲರ್ ಕೇವಲ ತೈಲ ವಹಿವಾಟಿಗೆ ಮಾತ್ರವಲ್ಲ, ಹೆಚ್ಚಿನ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನಡೆಯುವ ಹಣ ವಹಿವಾಟಿಗೆ ಬಳಕೆ ಆಗುತ್ತದೆ. ಹೀಗಾಗಿ ವ್ಯಾಪಾರಿಗಳು ಹಣ ಪಾವತಿಗೆ ಡಾಲರ್ ಕರೆನ್ಸಿಯನ್ನೇ ಇಚ್ಛಿಸುತ್ತಾರೆ.
ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಮತ್ತು ರೂಪಾಯಿ ಕರೆನ್ಸಿ ಬಲಪಡಿಸಲು ಆರ್​ಬಿಐ 2022ರ ಜುಲೈನಲ್ಲಿ ರೂಪಾಯಿಯನ್ನು ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡುವ ಪ್ರಯತ್ನ ಮೊದಲಿಟ್ಟಿತು. ತನ್ನ ಆಮದು ಮತ್ತು ರಫ್ತುಗಳಿಗೆ ರೂಪಾಯಿ ಕರೆನ್ಸಿಯಲ್ಲೇ ಪಾವತಿ ಆಗುವ ಅವಕಾಶ ತೆರೆದಿಟ್ಟಿತು. ಅದಕ್ಕಾಗಿ ರೂಪಾಯಿ ವೋಸ್ಟ್ರೋ ಖಾತೆಯಂತಹ ವ್ಯವಸ್ಥೆ ರೂಪಿಸಿದೆ. ಕೆಲ ವ್ಯಾಪಾರಗಳಲ್ಲಿ ಇದಕ್ಕೆ ಪೂರಕ ಸ್ಪಂದನೆ ಸಿಕ್ಕಿದೆಯಾದರೂ ತೈಲ ವ್ಯವಹಾರದಲ್ಲಿ ಇದೂವರೆಗೆ ಡಾಲರ್​ ಕಡೆಗೇ ಒಲವು ತೋರಲಾಗುತ್ತಿದೆ.
‘2022-23ರಲ್ಲಿ ಭಾರತದ ಸರ್ಕಾರಿ ತೈಲ ಮಾರುಕಟ್ಟೆ ಸಂಸ್ಥೆಗಳು ಮಾಡಿದ ಆಮದಿಗೆ ರೂಪಾಯಿಯಲ್ಲಿ ಹಣ ಪಾವತಿಯಾಗಲಿಲ್ಲ. ಕಚ್ಚಾ ತೈಲ ಪೂರೈಕೆದಾರರು ರೂಪಾಯಿ ಕರೆನ್ಸಿ ಮರುಬಳಕೆ ಸಮಸ್ಯೆಯನ್ನು ಎತ್ತಿ ತೋರಿಸಿದ್ದಾರೆ. ಹಾಗೆಯೇ, ಕರೆನ್ಸಿ ಪರಿವರ್ತನೆಯಲ್ಲಿ ಆಗುವ ಅಧಿಕ ಟ್ರಾನ್ಸಾಕ್ಷನ್ ವೆಚ್ಚದ ಸಮಸ್ಯೆಯನ್ನೂ ಎತ್ತಿತೋರಿಸಿದ್ದಾರೆ ಎಂದು ಸಂಸದೀಯ ಸ್ಥಾಯಿ ಸಮಿತಿ ಸರ್ಕಾರಕ್ಕೆ ತಿಳಿಸಿದೆ.
ರೈಲು ಚಲಿಸುವಾಗಲೇ ಹಳಿ ಮೇಲೆ ಬಿದ್ದ ಮಹಿಳೆ, ಮಕ್ಕಳು..ಮುಂದೇನಾಯ್ತು? ಮೈ ಜುಮ್ಮೆನಿಸುವ ವೀಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
