ಜಲಂಧರ್​:ದೇಶದೆಲ್ಲೆಡೆ ಕೆಂಪು ಹಣ್ಣಿನ ಹವಾ ಜೋರಾಗಿದೆ. ಟೊಮ್ಯಾಟೋ ಬೆಲೆ ಕೇಳಿದ್ರೆ ಸಾಕು ತಲೆ ತಿರುಗಿ ಬೀಳುವಂತಾಗಿದೆ. ಟೊಮ್ಯಾಟೋ ಬೆಳೆದವರು ಮಾತ್ರ ಒಂದೇ ದಿನದಲ್ಲಿ ಲಕ್ಷಾಧಿಪತಿಗಳಾಗುತ್ತಿದ್ದರೆ, ಅದನ್ನು ಖರೀದಿಸುವ ಗ್ರಾಹಕರು ಕಣ್ಣೀರಿಡುವಂತಾಗಿದೆ. ಕಳೆದ ಒಂದು ತಿಂಗಳಿಂದ ಟೊಮ್ಯಾಟೋ ಬೆಲೆ ಏರುಗತಿಯಲ್ಲೇ ಇದ್ದು, ಯಾವಾಗ ಇಳಿಕೆಯಾಗುತ್ತದೆ ಎಂದು ಅನೇಕರು ಎದುರು ನೋಡುತ್ತಿದ್ದಾರೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ರಾಜಭವನದಲ್ಲಿ ಟೊಮ್ಯಾಟೋವನ್ನು ಬಳಸದಂತೆ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಟೊಮ್ಯಾಟೋ ಬೆಲೆ ಕೇಳಿ ರಾಜ್ಯಪಾಲರೇ ಕಂಗಾಲಾಗಿರುವಾಗ ನಮ್ಮ ಸಾಮಾನ್ಯರ ಸ್ಥಿತಿ ಏನು ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ.
ಹೌದು, ಇಂಥದ್ದೊಂದು ಆದೇಶವನ್ನು ಪಂಜಾಬಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಹೊರಡಿಸಿದ್ದಾರೆ. ರಾಜಭವನದ ಅಡುಗೆ ಮನೆಯಲ್ಲಿ ಟೊಮ್ಯಾಟೋ ಬಳಕೆಯನ್ನು ನಿಲ್ಲಿಸಿ ಎಂದಿದ್ದಾರೆ.
ಇದನ್ನೂ ಓದಿ:ಲಂಚವಾಗಿ 2 ರೂಪಾಯಿ ನೋಟು ಪಡೆದ ಐವರು ಪೊಲೀಸರು; 37 ವರ್ಷಗಳ ತನಿಖೆ ನಂತ್ರ ತೀರ್ಪು ಕೊಟ್ಟ ಕೋರ್ಟ್
ಕಳೆದ ಕೆಲವು ವಾರಗಳಲ್ಲಿ ಪಂಜಾಬ್ ಮತ್ತು ಚಂಡೀಗಢದ ಜನರು ಟೊಮ್ಯಾಟೋಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಟೊಮ್ಯಾಟೋ ರಾಜ್ಯದಾದ್ಯಂತ ಅನೇಕ ಮನೆಗಳಲ್ಲಿ ಪ್ರಧಾನವಾದ ಆಹಾರ ವಸ್ತುವಾಗಿದೆ. ಪೂರೈಕೆ ಸರಪಳಿಯ ಅಡೆತಡೆಗಳು ಮತ್ತು ಹವಾಮಾನ ಪರಿಸ್ಥಿತಿಗಳು ಸೇರಿದಂತೆ ವಿವಿಧ ಅಂಶಗಳಿಂದ ಬೆಲೆ ಏರಿಕೆಗೆ ಕಾರಣವಾಗಿದೆ. ಈ ಪರಿಸ್ಥಿತಿಯು ಸಾಮಾನ್ಯ ನಾಗರಿಕರ ಮೇಲೆ ಹೊರೆಯಾಗಿದ್ದು, ಇದನ್ನು ರಾಜ್ಯಪಾಲರು ಗುರುತಿಸಿದ್ದಾರೆ. ಗಗನಕ್ಕೇರಿರುವ ಟೊಮ್ಯಾಟೋ ಬೆಲೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ರಾಜ್ಯಪಾಲರು ಕಳವಳ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ ತಮ್ಮ ಸ್ವಂತ ನಿವಾಸದಲ್ಲಿ ಟೊಮ್ಯಾಟೋ ಸೇವನೆಯನ್ನು ತ್ಯಜಿಸುವ ಮೂಲಕ, ಈ ಸವಾಲಿನ ಸಮಯದಲ್ಲಿ ಮಿತವ್ಯಯ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಗುರಿಯನ್ನು ಹೊಂದಿದ್ದಾರೆ ಎಂದು ರಾಜಭವನ ಹೊರಡಿಸಿರುವ ಪ್ರಕಟಣೆ ತಿಳಿಸಿದೆ.
ಸದ್ಯ ಪಂಜಾಬ್‌ನಲ್ಲಿ ಟೊಮ್ಯಾಟೋ ಕೆಜಿಗೆ 200 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ 300 ರೂಪಾಯಿ ದಾಟಲಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.(ಏಜೆನ್ಸೀಸ್​)
ಸಹೋದರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ನಟಿ

ಸರ್ಕಾರಿ ಶಾಲೆಗಳಲ್ಲಿ 3ನೇ ತರಗತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ; ಅಧಿಕಾರಿಗಳಿಗೆ ಆಂಧ್ರ ಸಿಎಂ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − one =
Remember me
