ಒಡಿಶಾ:ಒಡಿಶಾದ ಪುರಿಯಲ್ಲಿರುವ 12 ನೇ ಶತಮಾನದ ಜಗನ್ನಾಥ ದೇವಾಲಯ ಆಢಳಿತ ಮಂಡಳಿ 2024 ಜನವರಿ 1 ರಿಂದ ಭಕ್ತರಿಗೆ ಹೊಸ ಡ್ರೆಸ್ ಕೋಡ್​​​ನ್ನು ಜಾರಿಗೊಳಿಸಲಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಪುರಿ ಜಗನ್ನಾಥ ದೇವಾಲಯಕ್ಕೆ ಭಕ್ತರು ಇನ್ಮುಂದೆ ಹರಿದ ಜೀನ್ಸ್​, ಸ್ಕರ್ಟ್​ ತೊಟ್ಟು ಬರುವಂತಿಲ್ಲ ಎಂದು ದೇವಸ್ಥಾನದ ಆಡಳಿತ ತಿಳಿಸಿದೆ.
ಈ ಡ್ರೆಸ್​​ ಧರಿಸಿದರೆ ದೇವಸ್ಥಾನಕ್ಕೆ ಪ್ರವೇಶವಿಲ್ಲ:ಹಾಫ್ ಪ್ಯಾಂಟ್, ಶಾರ್ಟ್ಸ್, ಹರಿದ ಜೀನ್ಸ್, ಸ್ಕರ್ಟ್ ಮತ್ತು ಸ್ಲೀವ್‌ಲೆಸ್ ಡ್ರೆಸ್‌ಗಳನ್ನು ಧರಿಸಿದವರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡಲಾಗುವುದಿಲ್ಲ. ದೇವಸ್ಥಾನದಲ್ಲಿ ಕೆಲವರು ಅಸಭ್ಯ ವಸ್ತ್ರಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವಸ್ಥಾನ ಆಢಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ಮಾತನಾಡಿ, ದೇವಾಲಯವು ಜನವರಿ 1 ರಿಂದ ಭಕ್ತರಿಗೆ ಡ್ರೆಸ್ ಕೋಡ್ ಜಾರಿಗೊಳಿಸಲಿದೆ. ದೇವಸ್ಥಾನದಲ್ಲಿ ಕೆಲವರು ಅಸಭ್ಯ ವಸ್ತ್ರಗಳಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ದೇವಸ್ಥಾನದ ಘನತೆ ಮತ್ತು ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ದುರದೃಷ್ಟವಶಾತ್, ಕೆಲವರು ಇತರರ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲ:ದೇವಸ್ಥಾನದಲ್ಲಿ ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕಿಕೊಂಡು ಸಮುದ್ರ ತೀರದಲ್ಲೋ, ಉದ್ಯಾನವನದಲ್ಲೋ ಅಡ್ಡಾಡುತ್ತಿರುವುದು ಕಂಡು ಬಂದಿದ್ದು, ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲ. ಯಾವ ರೀತಿಯ ಉಡುಪುಗಳನ್ನು ಅನುಮತಿಸಬೇಕು ಎಂಬುದನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ರಂಜನ್ ಕುಮಾರ್ ದಾಸ್​​ ಹೇಳಿದ್ದಾರೆ.
ದೇವಾಲಯ ಪ್ರವೇಶಕ್ಕೆ ಹೊಸ ರೂಲ್ಸ್​​:2024 ಜನವರಿ 1ರಿಂದ ದೇವಾಲಯದೊಳಗೆ ಡ್ರೆಸ್ ಕೋಡ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ದೇವಾಲಯದ ‘ಸಿಂಗ ದ್ವಾರ’ದಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿ ಮತ್ತು ದೇವಾಲಯದೊಳಗಿನ ಪ್ರತೀಹಾರಿ ಸೇವಕರಿಗೆ ಕೋಡ್ ಅನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ.
ಆಭರಣ ಪ್ರಿಯರೇ ಚಿನ್ನದ ಬೆಲೆಯ ಇಂದಿನ ಅಪ್ಡೇಟ್ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
