ಮುಂಬೈ:ಭಾರತೀಯ ಇಕ್ವಿಟಿ ಮಾರುಕಟ್ಟೆಗಳು ಜನವರಿ 22 ರಂದು (ಸೋಮವಾರ) ರಜೆ ಇರುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​ ಮತ್ತು ಬಾಂಬೆ ಸ್ಟಾಕ್ ಎಕ್ಸ್​​ಚೇಂಜ್​ ಎರಡೂ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿವೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಸಮಾರಂಭದ ಸಂದರ್ಭದಲ್ಲಿ ಜನವರಿ 22 ಸೋಮವಾರದಂದು ಈಕ್ವಿಟಿ ಮತ್ತು ಇಕ್ವಿಟಿ ಉತ್ಪನ್ನಗಳ ಮಾರುಕಟ್ಟೆಗಳು ಮುಚ್ಚಲ್ಪಡಲಿವೆ.
ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್, 1881 ರ ಸೆಕ್ಷನ್ 25 ರ ಅಡಿಯಲ್ಲಿ ಘೋಷಿಸಲಾದ ಸಾರ್ವಜನಿಕ ರಜೆಯ ಕಾರಣ ಜನವರಿ 22 ರಂದು ಸೋಮವಾರ ಟ್ರೇಡ್​ ರಜೆಯನ್ನು ಘೋಷಿಸಲಾಗಿದೆ ಎಂದು ಎನ್‌ಎಸ್‌ಇ ಪ್ರಕಟಣೆಯಲ್ಲಿ ತಿಳಿಸಿದೆ.
ಸೋಮವಾರದಿಂದ ಸಂಜೆ 5 ಗಂಟೆಯಿಂದ ಸರಕುಗಳ (commodities) ವಹಿವಾಟು ನಡೆಯಲಿದೆ ಎಂದು ಎನ್‌ಎಸ್‌ಇ ಹೇಳಿದೆ.
ವೆಬ್​ಸೈಟ್​ ಪರಿಶೀಲನೆಗಾಗಿ ಶನಿವಾರ (ಜ.20) ಅಲ್ಪ ಅವಧಿಗೆ ಷೇರು ವಹಿವಾಟು ನಡೆಸುವುದಾಗಿ ಈ ಮೊದಲು ತಿಳಿಸಿದ್ದು ಬಿಎಸ್​ಇ ಮತ್ತು ಎನ್​ಎಸ್​ಇ ನಂತರ ಈ ಅವಧಿಯಲ್ಲಿ ಬದಲಾವಣೆ ಮಾಡಿದವು. ಶನಿವಾರದಂದು ಪೂರ್ಣ ಅವಧಿಗೆ ವಹಿವಾಟು ನಡೆಸಿದವು.

ರಾಮ ಮಂದಿರ ತೀರ್ಪು ಕುರಿತು ನಿಖರ ಭವಿಷ್ಯ ಹೇಳಿದ್ದ ಜ್ಯೋತಿಷಿ: ಅಯೋಧ್ಯೆ, ಭಾರತ ಕುರಿತು ನುಡಿದಿರುವುದು ಅದ್ಭುತ…

ಗ್ರೇ ಮಾರ್ಕೇಟ್​ನಲ್ಲಿ ಬಿರುಗಾಳಿ ಎಬ್ಬಿಸಿದ ಐಪಿಒ: ಹಂಚಿಕೆಯಾಗುವ ಮೊದಲೇ ಶೇ. 37ರಷ್ಟು ಹೆಚ್ಚಳವಾದ ಷೇರು!!

ಶನಿವಾರದ ವಿಶೇಷ ವಹಿವಾಟಿನಲ್ಲಿ ಕುಣಿದ ಕರಡಿ: ಷೇರು ಸೂಚ್ಯಂಕ ಕುಸಿತಕ್ಕೆ ಕಾರಣಗಳೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + ten =
Remember me
