ನವದೆಹಲಿ; ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರು ಮೂರು ತಿಂಗಳ ಬಳಿಕವೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಇಂದು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಆದೇಶ ಪ್ರಕಟಿಸಿದೆ.
ಅಲ್ಲದೇ ಈಗಾಗಲೇ ಒಂದು ಡೋಸ್ ಲಸಿಕೆ ಪಡೆದುಕೊಂಡು ಕೋವಿಡ್ ತಗುಲಿಸಿಕೊಂಡಿದ್ದರೆ ಅಂತವರೂ ಕೂಡ ಸೋಂಕಿನಿಂದ ಮುಕ್ತರಾದ ಮೇಲೆ ಮೂರು ತಿಂಗಳ ಬಳಿಕವೇ ಎರಡನೇ ಡೋಸ್ ಪಡೆಯಬೇಕು ಎಂದು ಹೊಸ ಆದೇಶದಲ್ಲಿ ಹೇಳಲಾಗಿದೆ.
ಈ ಹಿಂದೆ ಕೇಂದ್ರ ಸರ್ಕಾರ ಕೋವಿಶಿಲ್ಡ್ ಒಂದು ಮತ್ತು ಎರಡನೇ ಡೋಸ್ ನ ಅಂತರವನ್ನು 12 ವಾರಗಳಿಗೆ ಹೆಚ್ಚಿಸಿತ್ತು. ಸೋಂಕು ತಗುಲಿಸಿಕೊಂಡವರಿಗೆ ಸಾಮಾನ್ಯ ನಿಯಮಗಳೇ ಅನ್ವಯವಾಗಿದ್ದವು. ಇದೀಗ ಸೋಂಕು ತಗುಲಿಸಿಕೊಂಡವರು ಡೋಸ್ ಪಡೆಯುವ ವಿಷಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.
ಇನ್ನೊಂದೆಡೆ ದೇಶದಲ್ಲಿ ಕರೊನಾ ಸೋಂಕಿನಲ್ಲಿ ಇಳಿಕೆಯಾಗಿದ್ದರೂ ಸಾವಿನ ಪ್ರಮಾಣ ಹೆಚ್ಚಾಗಿದೆ. ಬುಧವಾರ ಒಂದೇ ದಿನ 4529 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 1300 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ;ಬ್ಲಾಕ್​ ಫಂಗಸ್​​ಅನ್ನು ಸಾಂಕ್ರಾಮಿಕ ಎಂದು ಘೋಷಿಸಿದ ರಾಜಸ್ಥಾನ ಸರ್ಕಾರ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + seventeen =
Remember me
