ರಾಯ್ಪರ್​ :ಛತ್ತೀಸಗಢದ ಆದಿವಾಸಿ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಗೌರೆಲ-ಪೇಂದ್ರ-ಮರವಾಹಿ ಜಿಲ್ಲೆಯ ಅಸಿಸ್ಟೆಂಟ್​ ಕಮಿಷನರ್​ ಕೆ.ಎಸ್​.ಮಾಸ್ರಾಮ್ ಅವರು, ‘ಇಲಾಖೆಯ ಎಲ್ಲಾ ಸಿಬ್ಬಂದಿ ಕೂಡಲೇ ಕರೊನಾ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಮುಂದಿನ ತಿಂಗಳ ಸಂಬಳ ತಡೆಹಿಡಿಯಲಾಗುವುದು’ ಎಂದು ಆದೇಶ ಹೊರಡಿಸಿರುವುದು ಬೆಳಕಿಗೆ ಬಂದಿದೆ.
ಮೇ 21 ರಂದು ಹೊರಡಿಸಿರುವ ಈ ಆದೇಶದಲ್ಲಿ ಜಿಲ್ಲೆಯ ಆದಿವಾಸಿ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಕಛೇರಿಗಳು, ಆಶ್ರಮ್​ಗಳು (ವಸತಿ ಶಾಲೆಗಳು) ಮತ್ತು ಹಾಸ್ಟೆಲ್​ಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಪಡೆದು ತಮ್ಮ ವ್ಯಾಕ್ಸಿನೇಷನ್ ಕಾರ್ಡ್​ಗಳನ್ನು ಕಛೇರಿಗೆ ಸಲ್ಲಿಸಬೇಕು ಎಂದು ಹೇಳಲಾಗಿದೆ. ಲಸಿಕೆ ಪಡೆಯದಿದ್ದಲ್ಲಿ ಮುಂದಿನ ತಿಂಗಳ ಸಂಬಳವನ್ನು ತಡೆಹಿಡಿಯಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ :ಗುಡ್​ ನ್ಯೂಸ್​ : ಲಸಿಕೆ ಪಡೆಯಲು 18 ಮೇಲ್ಪಟ್ಟವರಿಗೆ ವಾಕ್​-ಇನ್ ಸೌಲಭ್ಯ
“ಕರೊನಾ ವಿರುದ್ಧ ಹೋರಾಟದಲ್ಲಿ ಯಶಸ್ವಿಯಾಗಲು ಇಲಾಖೆಯ ಶೇ.100 ರಷ್ಟು ಸಿಬ್ಬಂದಿ ಲಸಿಕೆ ಪಡೆಯಲಿ ಎಂಬ ಉದ್ದೇಶದಿಂದ ಈ ಆದೇಶ ಜಾರಿಗೊಳಿಸಲಾಗಿದೆ. ಈ ಆದೇಶದ ನಂತರ ಶೇ.95 ರಷ್ಟು ಸಿಬ್ಬಂದಿ ಲಸಿಕೆ ಪಡೆದುಕೊಂಡರು” ಎಂದು ಮಾಸ್ರಾಂ ಹೇಳಿದ್ದಾರೆ. “ಈ ರೀತಿಯ ಆದೇಶ ಹೊರಡಿಸಿದ್ದರೂ, ಸಂಬಳವನ್ನು ನಿಜವಾಗಿ ತಡೆಹಿಡಿಯುವ ಯೋಜನೆ ಇಲಾಖೆಗೆ ಇರಲಿಲ್ಲ. ಎಲ್ಲರೂ ಲಸಿಕೆ ಪಡೆಯಬೇಕೆಂಬುದಷ್ಟೇ ನನ್ನ ಉದ್ದೇಶವಾಗಿತ್ತು” ಎಂದಿದ್ದಾರೆ.(ಏಜೆನ್ಸೀಸ್)
‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

ಗ್ಯಾಂಗ್​​ಸ್ಟರ್ ಕಾಲಾ ಜತೇದಿ ಸೋದರನೊಂದಿಗೆ ಸುಶೀಲ್​ ಕುಮಾರ್ !

2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
