ನವದೆಹಲಿ:ರಾಷ್ಟ್ರ ರಾಜಧಾನಿಯಿಂದ ಮಂಗಳವಾರ (ಮೇ 12) ವಿಶೇಷ ರೈಲುಗಳು (ರಾಜಧಾನಿ) ಸಂಚಾರ ಆರಂಭಿಸಲಿವೆ. ಇವುಗಳಲ್ಲಿ ಪ್ರಯಾಣಿಸಲು ಆನ್​ಲೈನ್​ನಲ್ಲಿಯೇ ಟಿಕೆಟ್​ ಕಾದಿರಿಸಬೇಕಾಗುತ್ತದೆ. ಇ-ಟಿಕೆಟ್​ ಇದ್ದರಷ್ಟೇ ರೈಲು ನಿಲ್ದಾಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಇನ್ನೊಂದು ಮಹತ್ವದ ಸೂಚನೆ ಎಂದರೆ, ಈ ರೈಲುಗಳಲ್ಲಿ ಹೊದಿಕೆ ಹಾಗೂ ಊಟದ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರು ತಾವೇ ಹೊಂದಿಸಿಕೊಳ್ಳಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ;2.6 ಲಕ್ಷ ವಿದ್ಯಾರ್ಥಿಗಳಿಂದ 7,255 ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ನಡೀತಿರೋದೇನು?
ಆದರೆ, ಪ್ಯಾಕ್​ ಮಾಡಿದ ತಿಂಡಿ ತಿನಿಸುಗಳನ್ನು ರೈಲು ಸಿಬ್ಬಂದಿ ಮಾರಾಟ ಮಾಡಲಿದ್ದಾರೆ. ಅಗತ್ಯವಿದ್ದ ಪ್ರಯಾಣಿಕರು ಇವನ್ನು ಖರೀದಿಸಬಹುದು. ರಾಜಧಾನಿ ಎಕ್ಸ್​ಪ್ರೆಸ್​ ರೈಲುಗಳ ಸಂಚರಿಸುವ ಮಾರ್ಗ, ವೇಗದಲ್ಲಿಯೇ ಇವುಗಳು ಸಂಚರಿಸಲಿವೆ. ಟಿಕೆಟ್​ ದರ ಕೂಡ ರಾಜಧಾನಿ ಎಕ್ಸ್​ಪ್ರೆಸ್​ ರೈಲಿನಷ್ಟೇ ಇರಲಿದೆ.
ಬೆಂಗಳೂರು, ಚೆನ್ನೈ, ಸಿಕಂದರಾಬಾದ್​, ತಿರುವನಂತಪುರ ಸೇರಿ ದೇಶದ 15 ಪ್ರಮುಖ ರಾಜ್ಯಗಳ ರಾಜಧಾನಿಗೆ ದೆಹಲಿಯಿಂದ ರೈಲುಗಳು ಹೊರಡಲಿವೆ.
ಇದನ್ನೂ ಓದಿ;ಒಂದು ಟ್ವಿಟ್​ನಿಂದಾಗಿ ಆತ ಕಳೆದುಕೊಂಡ ಮೊತ್ತ 22 ಸಾವಿರ ಕೋಟಿ…ರೂ !
ಈ ರೈಲುಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿ ಹೊರಡಲಿವೆ. ಹೀಗಾಗಿ ವೇಟಿಂಗ್​ ಲಿಸ್ಟ್​ ಇರುವುದಿಲ್ಲ. ಪ್ರಯಾಣಿಕರಿಗೆ ಹೊದಿಕೆ, ದಿಂಬು ನೀಡಲಾಗುವುದಿಲ್ಲ. ಜತೆಗೆ, ಶೌಚಗೃಹಗಳನ್ನು ಪ್ರಯಾಣದ ವೇಳೆ ಶುಚಿಗೊಳಿಸಲಾಗುವುದಿಲ್ಲ. ಏಕೆಂದರೆ ಈ ಎಲ್ಲ ಕೆಲಸಗಳಿಗೆ ಗುತ್ತಿಗೆ ಸಿಬ್ಬಂದಿ ಲಭ್ಯವಾಗುತ್ತಿಲ್ಲ ಎಂದು ಇಲಾಖೆ ತಿಳಿಸಿದೆ.
ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಜತೆಗೆ, ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪ್ರಯಾಣಿಕರು ಕನಿಷ್ಠ 90 ನಿಮಿಷ ಮುಂಚಿತವಾಗಿ ಬರಬೇಕೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕರೊನಾದೊಂದಿಗೆ ಬದುಕಲು ಕಲಿಯಿರಿ, ಇನ್ನೆರಡು ವರ್ಷ ಲಸಿಕೆ ಅನುಮಾನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 6 =
Remember me
