ಜೈಪುರ:ಆಸ್ಪತ್ರೆಯಲ್ಲಿ ವೀಲ್​ ಚೇರ್​ ಸಿಗದ ಕಾರಣ ವ್ಯಕ್ತಿಯೋರ್ವ ತನ್ನ ಮಗನನ್ನು ಸ್ಕೂಟರ್​ನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನಡೆದಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಘಟನೆಯೂ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆಯಾ ಎಂಬುದರ ಕುರಿತು ದೊರೆತ್ತಿಲ್ಲ.
ವೈರಲ್​ ಆಗಿರುವ ವಿಡಿಯೋದಲ್ಲಿ ಕಾಲು ಮುರಿದುಕೊಂಡಿರುವ ಮಗನನ್ನು ಆತನ ತಂದೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಲು ಆಸ್ಪತ್ರೆಯವರ ಬಳಿ ವೀಲ್​​ ಚೇರ್​ ಕೇಳಿದ್ದಾರೆ. ಇದಕ್ಕೆ ಸಿಬ್ಬಂದಿ ವೀಲ್​ ಚೇರ್​ ಇಲ್ಲ ಎಂದು ಹೇಳಲಾಗದೆ ಸಬೂಬು ಹೇಳಿ ತಪ್ಪಿಸಿಕೊಂಡಿದ್ಧಾರೆ.
ಇದನ್ನೂ ಓದಿ:VIDEO| ಮಗನ ವಿರುದ್ಧ ಎಫ್​ಐಆರ್​ ದಾಖಲಿಸಲು ಪೊಲೀಸರ ಮೇಲೆ 500 ರೂ. ನೋಟುಗಳನ್ನು ಎಸೆದ ತಾಯಿ
ತುಂಬಾ ಹೊತ್ತು ಕಳೆದರೂ ವೀಲ್​ ಚೇರ್​ ದರೆಯದೆ ಇರುವ ಕಾರಣ ಸಿಟ್ಟಿಗೆದ್ದ ವ್ಯಕ್ತಿ ಆಸ್ಪತ್ರೆಯೊಳಗೆ ತನ್ನ ಸ್ಕೂಟರ್​​ನೊಂದಿಗೆ ಆಸ್ಪತ್ರೆ ಒಳಗೆ ನುಗ್ಗಿದ್ದು ತನ್ನ ಮಗನನ್ನು ಕೂರಿಸಿಕೊಂಡು ಲಿಫ್ಟ್​ ಮೂಲಕ ಮೂರನೇ ಮಹಡಿಗೆ ತೆರಳಿ ಚಿಕಿತ್ಸೆ ಕೊಡಿಸಿದ್ದಾರೆ.
ವಿಡಿಯೋ ವೈರಲ್​ ಆದ ಬೆನ್ನಲ್ಲೇ ಘಟನೆಯ ಕುರಿತು ಆಸ್ಪತ್ರೆ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ವೀಲ್​ ಚೇರ್​ಗಳ ಅಭಾವ ಇದ್ದ ಕಾರಣ ಹೀಗಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿ ಒಬ್ಬರು ಆಸ್ಪತ್ರೆಯಲ್ಲಿ ಸೌಕರ್ಯಗಲ ಕೊರತೆ ಇದ್ದರೆ ದೇವರು ಬಂದು ಕಾಪಾಡಲು ಸಾಧ್ಯವಿಲ್ಲ. ಆ ವ್ಯಕ್ತಿ ಮಾಡಿದ ಕೆಲಸ ಸರಿ ಇದ್ದು ವೀಲ್​ ಚೇರ್​ ಅಭಾವ ಇದ್ದ ಕಾರಣ ಅವರು ಹೀಗೆ ಮಾಡಬೇಕಾಯಿತು ಎಂದು ವ್ಯಕ್ತಿಯ ನಡೆಯನ್ನು ಪ್ರಶಂಶಿಸಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × 1 =
Remember me
