ಲಕ್ನೋ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ “ಡೀಪ್‌ಫೇಕ್” ವಿಡಿಯೋವನ್ನು ಪೋಸ್ಟ್ ಮಾಡಿ ಶೇರ್ ಮಾಡಿದ ಆರೋಪದ ಮೇಲೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (STF) ತಂಡ ಓರ್ವ ವ್ಯಕ್ತಿಯನ್ನು ವಶಕ್ಕೆ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ:ಲೋಕ ಸಮರ: ಕೈಸರ್‌ಗಂಜ್‌ ಕ್ಷೇತ್ರದಿಂದ ಬ್ರಿಜ್ ಭೂಷಣ್‌ರನ್ನು ಕೈಬಿಟ್ಟು, ಮಗನನ್ನು ಕಣಕ್ಕಿಳಿಸಿದ ಬಿಜೆಪಿ!
ದಾರಿತಪ್ಪಿಸುವ ಸಂಗತಿಗಳನ್ನು ಹರಡಲು, ದೇಶ ವಿರೋಧಿ ಅಂಶಗಳನ್ನು ಬಲಪಡಿಸಲು ವಿಡಿಯೋವನ್ನು ಬಳಸಲಾಗಿದೆ. “ಮೇ 1 ರಂದು, ಉತ್ತರ ಪ್ರದೇಶ ಮುಖ್ಯಮಂತ್ರಿಯ ಡೀಪ್‌ಫೇಕ್ ವಿಡಿಯೋನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದು ವೈರಲ್ ಆಗಿದೆ ಎಂದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಯುಪಿ ಎಸ್‌ಟಿಎಫ್) ಅಮಿತಾಬ್ ಯಶ್ ಹೇಳಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ಡೀಪ್‌ಫೇಕ್ ವಿಡಿಯೋವನ್ನು ಶೇರ್ ಮಾಡಿದ ಆರೋಪದ ಮೇಲೆ ನೋಯ್ಡಾ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿ ಶ್ಯಾಮ್ ಕಿಶೋರ್ ಗುಪ್ತಾ ನೋಯ್ಡಾ ನಿವಾಸಿ (ಫೈಲ್) ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 468 (ವಂಚನೆಗಾಗಿ ಫೋರ್ಜರಿ), 505(2) (ಸಾರ್ವಜನಿಕ ಕಿಡಿಗೇಡಿತನದ ಹೇಳಿಕೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಯ್ಡಾ ಸೈಬರ್ ಕ್ರೈಮ್ ಪೊಲೀಸ್​ ಠಾಣೆಯಲ್ಲಿ ಐಫ್​ಐಆರ್​ ದಾಖಲಿಸಿಕೊಳ್ಳಲಾಗಿದೆ. ಎಸ್‌ಟಿಎಫ್ ಈ ಸಂಬಂಧ ತನಿಖೆ ಆರಂಭಿಸಿತ್ತು.
ಆರೋಪಿ ಶ್ಯಾಮ್ ಕಿಶೋರ್ ಗುಪ್ತಾನನ್ನು ವಿಶೇಷ ಕಾರ್ಯಪಡೆ ಬಂಧಿಸಿದೆ. ನೋಯ್ಡಾದ ಸ್ಥಳೀಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸರ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಎಡಿಜಿಪಿ ಯಶ್ ತಿಳಿಸಿದ್ದಾರೆ.
7 ವರ್ಷದ ಬಾಲಕನನ್ನು ಕಚ್ಚಿದ್ದಕ್ಕೆ ಸಾಕು ನಾಯಿಯನ್ನೇ ಕೊಂದು ತಿಂದ ಭೂಪ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 12 =
Remember me
