ನೋಯ್ಡಾ:ಉತ್ತರ ಪ್ರದೇಶದ ನೋಯ್ಡಾ ಮೂಲದ ಜೋಡಿಯೊಂದು ಸಾರ್ವಜನಿಕವಾಗಿ ಸಲುಗೆಯಿಂದ ವರ್ತಿಸಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ನೋಯ್ಡಾ ಪೊಲೀಸರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?ಪಾರ್ಕ್​ ಒಂದರಲ್ಲಿ ಕೈ ಆಕೃತಿಯ ಮೇಲೆ ಕುಳಿತು ಯುವತಿ ವಾಟರ್​ ಬಾಟಲ್​ನಿಂದ ನೀರು ಕುಡಿಯುತ್ತಿರುತ್ತಾಳೆ. ಈ ವೇಳೆ ಅಲ್ಲಿಗೆ ಬರುವ ಯುವಕನೊಬ್ಬ ಯುವತಿ ಮುಂದೆ ಮಂಡಿಯೂರಿ, ಕೈ ಬೆರಳುಗಳನ್ನು ಹಿಡಿದು ರಿಂಗ್​ ತೊಡಿಸುತ್ತಾನೆ. ಇದಾದ ಬಳಿಕ ಯುವತಿ ತನ್ನ ಬಾಯಿಯಲ್ಲಿದ್ದ ನೀರನ್ನು ಯುವಕ ಬಾಯಿಗೆ ಉಗಿಯುತ್ತಾಳೆ. ಬಳಿಕ ಯುವಕನು ಸಹ ವಾಪಸ್​ ಯುವತಿಯ ಬಾಯಿಗೆ ಉಗಿಯುತ್ತಾನೆ. ಆ ನೀರನ್ನು ಯುವತಿ ಕುಡಿಯುತ್ತಾಳೆ. ಬಳಿಕ ಇಬ್ಬರು ಗಹಗಹಿಸಿ ನಗುತ್ತಾರೆ.
दिल्ली मेट्रो के बाद अब नोएडा सेक्टर-78 के वेदवन पार्क में भी ऐसे अभद्र लोग पहुंचने लगे है जो लाइक कमेंट के लिए ऐसी बेहूदा रील बना रहे है।सार्वजनिक स्थलों पर इस तरह की रील बनाने पर रोक लगनी चाहिए।pic.twitter.com/jjOLnFwOKd
— Greater Noida West (@GreaterNoidaW)November 1, 2023

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತ್ವರಿತವಾಗಿ ವೈರಲ್​ ಆಗುತ್ತಿದ್ದಂತೆ ನೋಯ್ಡಾದ ಉಪ ಪೊಲೀಸ್ ಆಯುಕ್ತರ ಗಮನಕ್ಕೂ ಬಂದಿದ್ದು, ಘಟನೆ ನಡೆದ ಪ್ರದೇಶದಲ್ಲಿ ಗಸ್ತು ಮತ್ತು ತಪಾಸಣೆ ಹೆಚ್ಚಿಸಲು ಸ್ಟೇಷನ್ ಇನ್‌ಚಾರ್ಜ್ ಸೆಕ್ಟರ್-113 ನೋಯ್ಡಾಗೆ ನಿರ್ದೇಶಿಸುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇದಿಷ್ಟೇ ಅಲ್ಲದೆ, ಸೈಬರ್ ಸೆಲ್‌ ನೆರವಿನೊಂದಿಗೆ ವಿಡಿಯೋದಲ್ಲಿರುವ ಜೋಡಿಯನ್ನು ಮತ್ತು ದೃಶ್ಯ ಸೆರೆಹಿಡಿದ ವ್ಯಕ್ತಿಯನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ.
ಸಾರ್ವಜನಿಕ ಪ್ರದೇಶದಲ್ಲಿ ಯುವ ಜೋಡಿ ಅನುಚಿತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. ಸಾರ್ವಜನಿಕ ವ್ಯವಸ್ಥೆಯೊಳಗೆ ಜೋಡಿ ವರ್ತನೆ ಸ್ವೀಕಾರ್ಹವಲ್ಲ, ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅನೇಕರು ಒತ್ತಾಯ ಮಾಡಿದ್ದರು. ಅದೇ ರೀತಿ ಪೊಲೀಸರು ಈ ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ನವಜೋಡಿ ಬಿಸಿ ಮುಟ್ಟಿಸುವ ಸಾಧ್ಯತೆ ದಟ್ಟವಾಗಿದೆ.
ಸ್ವಾರಸ್ಯಕರ ಸಂಗತಿ ಏನೆಂದರೆ, ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ದೆಹಲಿ ಮೆಟ್ರೋದಲ್ಲಿಯೂ ಇದೇ ರೀತಿಯ ಘಟನೆ ನಡೆದಿತ್ತು. ಜೋಡಿಯೊಂದು ಪರಸ್ಪರ ಬಾಯಿಂದ ತಂಪು ಪಾನೀಯವನ್ನು ವಿನಿಮಯ ಮಾಡುತ್ತಿರುವುದನ್ನು ಚಿತ್ರೀಕರಿಸಲಾಗಿತ್ತು ಮತ್ತು ವಿಡಿಯೋ ಸಹ ವೈರಲ್​ ಆಗಿತ್ತು.(ಏಜೆನ್ಸೀಸ್​)
New day, New Delhi metro scenepic.twitter.com/yVhPV6mzcb
— if (@pioneerbhatt)October 10, 2023

ಇದು ರಾಜಕೀಯ ಪ್ರೇರಿತ… ಇಡಿ ಮುಂದೆ ಇಂದು ಹಾಜರಾಗುವುದಿಲ್ಲ ಅರವಿಂದ್​ ಕೇಜ್ರಿವಾಲ್​

ದರ್ಗಾದಲ್ಲಿ ಪೂಜೆ ಸಲ್ಲಿಸಿ ವಾಪಸಾಗುತ್ತಿದ್ದಾಗ ಭೀಕರ ಅಪಘಾತ; ಬಾಲಕ ಸೇರಿದಂತೆ 6 ಜನರ ಸಾವು

ನಿಯಮಿತವಾಗಿ ಹಸಿ ಬೆಳ್ಳುಳ್ಳಿ ಸೇವನೆ ಮಾಡಿ ನಿಮ್ಮ ದೇಹದಲ್ಲಾಗುವ ಚಮತ್ಕಾರ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 8 =
Remember me
