ನೋಯ್ಡಾ: ಇತ್ತೀಚಿನ ದಿನಗಳಲ್ಲಿ ಮಾನವೀಯತೆಗೆ ಬೆಲೆಯೇ ಇಲ್ಲ ಎಂಬಂತಾಗಿದೆ. ಸಾಲ ಮರುಪಾವತಿ ಮಾಡದ್ದಕ್ಕೆ ಬೆಳ್ಳುಳ್ಳಿ ವ್ಯಾಪಾರಿಯೊಬ್ಬರನ್ನ ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದಂತಹ ಅಮಾನವೀಯ ಘಟನೆ ನೋಯ್ಡಾದಲ್ಲಿ ನಡೆದಿದೆ.
ಹೀಗೆ ವ್ಯಕ್ತಿಯೋರ್ವನನ್ನ ವಿವಸ್ತ್ರಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಉತ್ತರಪ್ರದೇಶ ಪೊಲೀಸರು, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಮಾಧ್ಯಮಗಳಿಗೆ ಪೊಲೀಸರು ನೀಡಿರುವಂತಹ ಮಾಹಿತಿಯ ಪ್ರಕಾರ, ಉತ್ತರಪ್ರದೇಶದ ಮೈನ್​ಪುರಿ ಜಿಲ್ಲೆಯವನಾದ ವ್ಯಕ್ತಿ ನೋಯ್ಡಾ ಸೆಕ್ಟರ್ 88ರಲ್ಲಿರುವ ಹಣ್ಣು ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಗಾಡಿ ಇಟ್ಟುಕೊಂಡಿದ್ದ. ಕಳೆದ ತಿಂಗಳು ಕಮಿಷನ್​​ ಏಜೆಂಟ್​​ನಿಂದ 5,600 ರೂ. ಸಾಲವನ್ನೂ ಪಡೆದಿದ್ದ.
ಸೋಮವಾರದಂದು ಏಜೆಂಟ್​​ಗೆ 2,500 ರೂ ಅನ್ನು ಕೊಟ್ಟು ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ತೀರಿಸುವುದಾಗಿ ಬೆಳ್ಳುಳ್ಳಿ ವ್ಯಾಪಾರಿ ಮನವಿ ಮಾಡಿಕೊಂಡಿದ್ದಾನೆ. ಸಾಲ ತೀರಿಸಲಿಲ್ಲವೆಂದು ಸಿಟ್ಟುಗೊಂಡ ಕಮಿಷನ್ ಎಜೆಂಟ್ ತನ್ನ ಅಕೌಂಟೆಂಟ್ ಹಾಗೂ ಮತ್ತಿಬ್ಬರನ್ನ ಕರೆಸಿ ಬೆಳ್ಳುಳ್ಳಿ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾನೆ.
नोएडा की फल मंडी में लहसुन बेचने वाले अनिल को बदमाशों ने नंगा करके सरेआम घुमाया। उसका गुनाह बस इतना था कि उसने एक व्यक्ति से 5 हज़ार रुपये उधार लिए थे, जिसमें 3 हजार वो अभी नहीं लौटा पाया था।सोचिये! 3 हज़ार रुपये के लिए इतनी बड़ी सज़ा…3 हजार रुपये के लिए किसी के स्वाभिमान…pic.twitter.com/mILjkLX3rn
ವ್ಯಾಪಾರಿಯನ್ನು ವಿವಸ್ತ್ರಗೊಳಿಸಿ ಹೊರಗೆ ಎಳೆದುಕೊಂಡು ಬರಲಾಗಿದೆ. ಈ ದೃಶ್ಯ ಇರುವ ವಿಡಿಯೋ ವೈರಲ್ ಆಗಿದೆ.ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಕರಣದ ಮುಖ್ಯ ಆರೋಪಿ ಸುಂದರ್ ಸಿಂಗ್ ಹಾಗೂ ಆತನ ಬಂಟ ಭಗನ್​ದಾಸ್ ಸಿಂಗ್ ಅವರಿಬ್ಬರನ್ನು ಬಂಧಿಸಲಾಗಿದೆ.
ತಪ್ಪಿಸಿಕೊಂಡಿರುವ ಇತರ ಅರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ರಾಜೀವ್ ದೀಕ್ಷಿತ್ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + fourteen =
Remember me
