ನೊಯ್ಡಾ:ದುಡಿಯಲು ಮನಸ್ಸು ಬೇಕು. ಹೆಚ್ಚಾಗಿ ಛಲ ಬೇಕು. ದೃಢ ಸಂಕಲ್ಪ ಇದ್ದಾಗ ಎಂತಹ ಕೆಲಸವನ್ನಾದರೂ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ. ಈ ಮಾತಿಗೆ ಸಾಕ್ಷಿ, ನೊಯ್ಡಾದಲ್ಲಿ ತನ್ನ ಒಂದು ವರ್ಷದ ಮಗುವಿನೊಂದಿಗೆ ಆಟೋ ರಿಕ್ಷಾ ಓಡಿಸಿ, ಸಂಪಾದನೆ ಮಾಡುತ್ತಿರುವ ಚಂಚಲಾ ಶರ್ಮ.
ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಕಷ್ಟ ಕೆಲಸವನ್ನಾದರೂ ಮಾಡಿ ಮುಗಿಸುತ್ತಾರೆ. ಇಂದು ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ. ಛಲದಿಂದ ಕೆಲಸ ಮಾಡಿ ಸಾಧನೆ ಮಾಡುತ್ತಾರೆ. ಇದೀಗ ಚಂಚಲಾ ಶರ್ಮ ತನ್ನ ಒಂದು ವರ್ಷದ ಮಗುವನ್ನು ಹೊತ್ತುಕೊಂಡು ಆಟೋ ಓಡಿಸುತ್ತಿದ್ದಾರೆ. ತನ್ನ ಮಗುವಿನೊಂದಿಗೆ ಆಟೋ ಚಾಲನೆ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಂಚಲಾ ಶರ್ಮಳಾ ಛಲಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ನೊಯ್ಡಾದಲ್ಲಿ ಚಂಚಲಾ ಶರ್ಮ ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದಾರೆ. ಇವರು ಚಾಲನಾ ವೃತ್ತಿ ಆರಿಸಿಕೊಳ್ಳುವುದರ ಹಿಂದೆ ಛಲದ ಕಥೆಯಿದೆ. ಚಂಚಲಾ ಶರ್ಮ ಅವರಿಗೆ 2019ರಲ್ಲಿ ಮದುವೆಯಾಗಿತ್ತು. ಆದರೆ ಮನೆಯಲ್ಲಿ ಗಂಡನಿಂದ ನಿತ್ಯ ಕಿರುಕುಳ. ಇದರಿಂದ ಬೇಸತ್ತು ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದಾರೆ. ಇದೀಗ ಗಂಡ ಇವರ ಜತೆಯಲ್ಲಿಲ್ಲ. ಒಂದು ವರ್ಷದ ಮಗು ಮಾತ್ರ ಇದೆ. ಸಂಪಾದನೆಗೆ ದಾರಿಯಿಲ್ಲ. ಗಂಡ ಬಿಟ್ಟು ಹೋದ ನಂತರ ಆದಾಯ ಮೂಲಕ್ಕಾಗಿ ರಿಕ್ಷಾ ಚಾಲನೆಯ ದಾರಿ ಕಂಡುಕೊಂಡಿದ್ದಾರೆ.
“ರಿಕ್ಷಾ ಚಾಲನೆ ಮಾಡಲು ಮುಂದಾದಾಗ ಹಲವು ರಿಕ್ಷಾ ಚಾಲಕರು ವಿರೋಧ ವ್ಯಕ್ತಪಡಿಸಿದರು. ಆದರೆ ಸಂಚಾರ ಪೊಲೀಸರು ಮತ್ತು ಎಐಬಿ ಹೊರಠಾಣೆ ಸಿಬ್ಬಂದಿ ಚಾಲನಾ ವೃತ್ತಿ ಮಾಡಲು ಅವಕಾಶ ನೀಡಿ ಪ್ರೋತ್ಸಾಹಿಸಿದರು. ಇದೀಗ ಸೆಕ್ಟರ್ 62 ರಸ್ತೆಯ ಲೇಬರ್ ಚೌಕ್‌ನಿಂದ ಸಾಯಿ ಮಂದಿರ, ಕಾಲಾ ಪತ್ತರ್ ಮತ್ತು ಪೆಹ್ಲಾ ಪುಸ್ತಾ ನಡುವೆ ರಿಕ್ಷಾ ಚಾಲನೆ ಮಾಡುತ್ತಿದ್ದೇನೆ. ಮನೆಯಲ್ಲಿ ಯಾರೂ ಇಲ್ಲ. ಹೀಗಾಗಿ ಮಗುವನ್ನೂ ಕರೆದುಕೊಂಡು ಬರುತ್ತಿದ್ದೇನೆ” ಎಂದು ಚಂಚಲಾ ಶರ್ಮ ಹೇಳಿಕೊಂಡಿದ್ದಾರೆ.
ಗಂಡ ಬಿಟ್ಟು ಹೋದ ನಂತರ ಗೌರವಯುತವಾಗಿಯೇ ಸಂಪಾದನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದೇನೆ. ಹಣಕ್ಕಾಗಿ ಗಂಡನನ್ನು ಕೇಳಬಾರದು ಎಂದು ನಿರ್ಧರಿಸಿದೆ. ಹೀಗಾಗಿ ಆಟೋ ಚಾಲನಾ ವೃತ್ತಿ ಮಾಡುವುದರತ್ತ ದೃಢ ಸಂಕಲ್ಪವಿಟ್ಟೆ. ಸದ್ಯ ದಿನಕ್ಕೆ 300-400 ರೂ. ಸಂಪಾದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 17 =
Remember me
