ಲಖನೌ:ಮುಂಬೈನಲ್ಲಿ ಐಸ್ ಕ್ರೀಮ್ ಕೋನ್ ನಲ್ಲಿ ತುಂಡರಿಸಿದ ಬೆರಳು ಪತ್ತೆಯಾದ ಬೆನ್ನಲ್ಲೇ ಇದೀಗ ಐಸ್ ಕ್ರೀಂ ಕಂಟೈನರ್ ನಲ್ಲಿ ಶತಪದಿ ಪತ್ತೆಯಾಗಿರುವ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ.
ಇದನ್ನು ಓದಿ:ಜಲಕ್ಷಾಮ ಕುರಿತಂತೆ ಪೊಲೀಸರಿಗೆ ಪತ್ರ ಬರೆದ ಸಚಿವೆ; ಪತ್ರದಲ್ಲೇನಿದೆ?
ಸೆಕ್ಟರ್ -12ರಲ್ಲಿ ವಾಸಿಸುವ ದೀಪಾ ಎಂಬುವವರು ಆನ್‌ಲೈನ್ ಡೆಲಿವರಿ ಅಪ್ಲಿಕೇಶನ್ ಬ್ಲಿಂಕಿಟ್‌ನಿಂದ ಐಸ್‌ಕ್ರೀಂ ಅನ್ನು ಆರ್ಡರ್ ಮಾಡಿದ್ದರು. ಐಸ್​ಕ್ರೀಂ ಕಂಟೈನರ್​ ತೆರೆದಾಗ ಐಸ್​ಕ್ರೀಂ ಒಳಗೆ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಸತ್ತ ಜರಿ ಹುಳು ಪತ್ತೆಯಾಗಿದೆ. ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಐಸ್​​ಕ್ರೀಂನಲ್ಲಿ ಪತ್ತೆಯಾದ ಜರಿ ಹುಳುವಿನ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಕುಟುಂಬಸ್ಥರು ಅಮುಲ್‌ನಂತಹ ಹೆಸರಾಂತ ಬ್ರಾಂಡ್‌ನ ಉತ್ಪನ್ನದಲ್ಲಿ ಇಂತಹ ನಿರ್ಲಕ್ಷ್ಯ ಹೇಗೆ ಸಂಭವಿಸುತ್ತದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವೀಡಿಯೊ ವೈರಲ್ ಆದ ನಂತರ ಬ್ಲಿಂಕಿಟ್ ಕ್ಷಮೆಯಾಚಿಸಿ ದೀಪಾ ಅವರ ಹಣವನ್ನು ಹಿಂದಿರುಗಿಸಿದೆ. ಈ ಬಗ್ಗೆ ವಿಷಯವನ್ನು ಪರಿಶೀಲಿಸುವುದಾಗಿ ಸಂಸ್ಥೆಯು ಭರವಸೆ ನೀಡಿದೆ ಎನ್ನಲಾಗಿದೆ.
ಆಹಾರ ಇಲಾಖೆಯ ತಂಡವು ದೀಪಾ ಅವರ ವೀಡಿಯೊವನ್ನು ಗಮನಿಸಿ ಅದರ ತನಿಖೆಯ ಭಾಗವಾಗಿ ವಿಚಾರಣೆಗಾಗಿ ಅವರ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡಿದೆ. ನಂತರ ಆಹಾರ ಇಲಾಖೆ ಅಧಿಕಾರಿಗಳು ಸೆಕ್ಟರ್-22ರ ಬ್ಲಿಂಕಿಟ್ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಐಸ್​​ಕ್ರೀಂಗಳನ್ನು ಇಟ್ಟಿರುವ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಬ್ಲಿಂಕಿಟ್ ಮಳಿಗೆಯಲ್ಲಿ ಸಾಕಷ್ಟು ದೂಳು ಕಂಡು ಬಂದಿದ್ದು, ನೈರ್ಮಲ್ಯದ ಬಗ್ಗೆ ಆತಂಕ ಮೂಡಿಸಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​​)
ಸಾಮಾಜಿಕ ಜಾಲತಾಣದಿಂದ ವಿಚಾರಣೆ ವಿಡಿಯೋವನ್ನು ತೆಗೆದುಹಾಕಿ; ಸಿಎಂ ಕೇಜ್ರಿವಾಲ್​ ಪತ್ನಿಗೆ ದೆಹಲಿ ಹೈಕೋರ್ಟ್​​ ಸೂಚನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 8 =
Remember me
