ನವದೆಹಲಿ:ಸಬ್ಸಿಡಿ ರಹಿತ ಎಲ್​ಪಿಜಿ ಬೆಲೆಯಲ್ಲಿ ಇಂದು ಏರಿಕೆ ಕಂಡುಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ಮೆಟ್ರೋ ನಗರಗಳಾದ ಚೆನ್ನೈ, ಕೋಲ್ಕತ್ತ ಮತ್ತು ಮುಂಬೈ ನಗರಗಳಲ್ಲಿ ಪ್ರತಿ ಸಿಲಿಂಡರ್​ ಮೇಲೆ 150 ರೂಪಾಯಿಯುಷ್ಟು ಹೆಚ್ಚಳ ಮಾಡಿರುವುದಾಗಿ ಇಂಡಿಯನ್​ ಆಯಿಲ್​ ಸಂಸ್ಥೆ ತಿಳಿಸಿದೆ.
ದೆಹಲಿಯಲ್ಲಿ ನಿನ್ನೆವರೆಗೆ 714 ರೂಪಾಯಿಯಿದ್ದ ಸಬ್ಸಿಡಿ ರಹಿತ ಸಿಲಿಂಡರ್​ ಒಂದರ ಬೆಲೆಯು ಇಂದು 858.5 ರೂಪಾಯಿಗೆ ಏರಿದೆ. ಮುಂಬೈನಲ್ಲಿ 684.5 ರೂಪಾಯಿ ಇದ್ದ ಸಿಲಿಂಡರ್​ ಬೆಲೆಯು ಇಂದು 829 ರೂಪಾಯಿ ಆಗಿದೆ. ಕೊಲ್ಕತ್ತದಲ್ಲಿ 747 ರೂಪಾಯಿಯಿದ್ದ ಬೆಲೆಯು 896ರೂಪಾಯಿ ಆಗಿದೆ. ಚೆನ್ನೈನಲ್ಲಿ 734 ರೂಪಾಯಿಯಿಂದ 881 ರೂಪಾಯಿಗೆ ಏರಿಸಲಾಗಿದೆ.
ಕಳೆದ ಆಗಸ್ಟ್​ ತಿಂಗಳಿನಿಂದ ಇಂದಿನವರೆಗೆ ಗಮನಿಸಿದರೆ ದೆಹಲಿಯಲ್ಲಿ ಒಂದು ಸಿಲಿಂಡರ್​ (14.2ಕೆ.ಜಿ) ಬೆಲೆಯಲ್ಲಿ 284 ರೂಪಾಯಿ ಹೆಚ್ಚಳವಾಗಿದ್ದು, ಮುಂಬೈನಲ್ಲಿ 283 ರೂಪಾಯಿ ಹೆಚ್ಚಳವಾಗಿರುವುದನ್ನು ಗಮನಿಸಬಹುದಾಗಿದೆ.
ಈ ತಿಂಗಳಿನಿಂದ 19 ಕೆ.ಜಿಯ ಸಬ್ಸಿಡಿ ರಹಿತ ಸಿಲಿಂಡರ್​ಗಳ ಬೆಲೆಯು ದೆಹಲಿಯಲ್ಲಿ 1,540.5 ರೂಪಾಯಿ ಮತ್ತು ಮುಂಬೈನಲ್ಲಿ 1,241 ರೂಪಾಯಿ ಆಗಿರಲಿದೆ ಎಂದು ಇಂಡಿಯನ್​ ಆಯಿಲ್​ ಸಂಸ್ಥೆಯು ತಿಳಿಸಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 16 =
Remember me
