ನವದೆಹಲಿ:ಪಾನಿ ಪುರಿ, ಗೋಲ್​​ಗಪ್ಪಾ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ರಸ್ತೆ ಬದಿಯಲ್ಲಿ ನಿಂತು ತಿನ್ನುವ ಮಜವೇ ಬೇರೆಯಾಗಿದೆ. ನೀವು ಎಂದಾದರೂ ನಾನ್​​ವೆಜ್ ಪಾನಿಪೂರಿ (ಗೋಲ್​​ಗಪ್ಪಾ) ತಿಂದಿದ್ದೀರಾ? ಬಂಗಾಳದಲ್ಲಿ ಒಂದು ಅಂಗಡಿಯಿದೆ, ಅಲ್ಲಿ ಅನೇಕ ವಿಧದ ನಾನ್​​ವೆಜ್ ಪಾನಿಪೂರಿ ಲಭ್ಯವಿದೆ.

ಇಂದಿನ ದಿನಗಳಲ್ಲಿ ಆಹಾರದ ಮೇಲೆ ಹೊಸ ಹೊಸ ಪ್ರಯೋಗ ನಡೆಯುತ್ತವೆ. ಕೆಲವು ಇಷ್ಟವಾದ್ರೆ ಕೆಲವು ಕೇಳೋದೇ ಕಷ್ಟ. ಈಗ ಅಂತಹದ್ದೇ ಒಂದು ಫೋಟೋ ವೈರಲ್ ಆಗಿದೆ. ಬಂಗಾಳದಲ್ಲಿ ನಾನ್​​ವೆಜ್ ಪಾನಿಪೂರಿ ಮಾರಾಟವಾಗುತ್ತಿದೆ. ಬಂಗಾಳದಲ್ಲಿ ಒಂದು ಅಂಗಡಿಯಿದೆ, ಅನೇಕ ವಿಧದ ನಾನ್​​ವೆಜ್ ಪಾನಿಪೂರಿ ಲಭ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಅಂಗಡಿ ಮೆನು ಚರ್ಚೆಗೆ ಕಾರಣವಾಗಿದೆ.

Have Bengalis and Bengal gone too far?pic.twitter.com/ZdyIxf0ahu
— Rituparna Chatterjee (@MasalaBai)June 11, 2023
ಮೆನುವಿನಲ್ಲಿ ಏನಿದೆ?: ಮಟನ್ ಪುಚ್ಕಾ, ಚಿಕನ್ ಪುಚ್ಕಾ, ಚಾಕೊಲೇಟ್ ಪುಚ್ಕಾ, ಪ್ರಾನ್ಸ್ ಪುಚ್ಕಾ ಮತ್ತು ಫಿಶ್ ಪುಚ್ಕಾ ಅಂತಾ ಬೋರ್ಡ್ ನಲ್ಲಿ ಹಾಕಲಾಗಿದೆ. ನಾನ್​​ವೆಜ್ ಪಾನಿಪೂರಿಗೆ ಸೋಶಿಯಲ್​​​​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಾನ್​​ವೆಜ್ ಪಾನಿಪೂರಿ ಮೆನುವಿನ ಫೋಟೋ ನೋಡಿದ ನೆಟ್ಟಿಗರು, ಇಂತಹ ಆಲೋಚನೆಗಳು ಎಲ್ಲಿಂದ ಬರುತ್ತವೆ? ಗೋಲ್​​ಗಪ್ಪಾ ಕೂಡ ನಾನ್​​ವೆಜ್ ಆಗಬಹುದೆಂದು ನಾವು ಊಹಿಸಿರಲಿಲ್ಲ. ನಾನು ಒಮ್ಮೆ ತಿಂದಿದ್ದೇನೆ. ಮನೆಯಲ್ಲಿ ಅದನ್ನು ಟ್ರೈ ಮಾಡಿದ್ದೇನೆ. ಈರುಳ್ಳಿ, ಬಟಾಣಿ, ಆಲೂಗಡ್ಡೆ, ಸಿಹಿ ಹುಳಿ ನೀರು ಇರುವ ಗೋಲ್​​ಗಪ್ಪಾಗೆ ಕೋಳಿ, ಮಟನ್, ಮೀನಿನೊಂದಿಗೆ ಉಣಬಡಿಸಿದರೆ ನಂಬಲು ಆಗುತ್ತಿಲ್ಲ ಎಂದು ಕಾಮೆಂಟ್​​ ಮಾಡಿದ್ದಾರೆ.
ಒಡಿಶಾ ರೈಲು ಅಪಘಾತದ ಸಂತ್ರಸ್ತರಿಗೆ 10 ಕೋಟಿ ರೂ. ದೇಣಿಗೆ ನೀಡುತ್ತೇನೆ; ಜೈಲಿನಿಂದಲೇ ಪತ್ರ ಬರೆದ ಸುಕೇಶ್‌ ಚಂದ್ರಶೇಖರ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − twelve =
Remember me
