ನವದೆಹಲಿ:ಲಡಾಖ್​ನ ಪೂರ್ವಭಾಗದಲ್ಲಿ ಗಾಲ್ವಾನ್​ ಕಣಿವೆಯಲ್ಲಿ ಚೀನಾ ಯೋಧರೊಂದಿಗಿನ ಸೋಮವಾರದ ಘರ್ಷಣೆಯ ಬಳಿಕ ಭಾರತದ ಯಾವೊಬ್ಬ ಯೋಧರೂ ಕಾಣೆಯಾಗಿಲ್ಲ ಎಂದು ಭಾರತೀಯ ಸೇನಾಪಡೆ ಸ್ಪಷ್ಟಪಡಿಸಿದೆ.
ಸೋಮವಾರದ ಘರ್ಷಣೆಯಲ್ಲಿ ಕರ್ನಲ್​ ಸೇರಿ 20 ಯೋಧರು ಹುತಾತ್ಮರಾಗಿದ್ದಾರೆ. 76ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಆದರೆ, ಯಾರೊಬ್ಬರೂ ಕಾಣೆಯಾಗಿಲ್ಲ. ಚೀನಾದ ಕರ್ನಲ್​ ಸೇರಿ 43 ಯೋಧರು ಹತರಾಗಿದ್ದಾರೆ ಎಂದು ಹೇಳಿದೆ.
ಬುಧವಾರದಂದು ಅಮೆರಿಕದ ನ್ಯೂಯಾರ್ಕ್​ ಟೈಮ್ಸ್​ನಲ್ಲಿ ಪ್ರಕಟವಾದ In China-India Clash, Two Nationalist Leaders with Little Room to Give ಎಂಬ ಲೇಖನದ ಹಿನ್ನೆಲೆಯಲ್ಲಿ ಸೇನಾಪಡೆ ಈ ಸ್ಪಷ್ಟನೆ ನೀಡಿದೆ.ನ್ಯೂಯಾರ್ಕ್​ ಟೈಮ್ಸ್​ನ ವರದಿಯನ್ನು ಆಧರಿಸಿ ಭಾರತದ ಮಾಧ್ಯಮಗಳಲ್ಲಿ ಹಲವಾರು ಯೋಧರು ಕಾಣೆಯಾಗಿದ್ದಾರೆ, ಇಲ್ಲವೇ ಲೆಕ್ಕಕ್ಕೆ ಸಿಕ್ಕಿಲ್ಲ ಎಂದು ವರದಿ ಮಾಡಿದ್ದವು.
ಇದನ್ನೂ ಓದಿ:ಸೋಮವಾರದ ಘರ್ಷಣೆ ವೇಳೆ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು
ಭಾರತ ಮತ್ತು ಚೀನಾದ ಮಿಲಿಟರಿಯ ಮೇಜರ್​ ಜನರಲ್​ ದರ್ಜೆಯ ಅಧಿಕಾರಿಗಳು ಪೂರ್ವ ಲಡಾಖ್​ನಲ್ಲಿ ಬಿಕ್ಕಟ್ಟು ಪರಿಹಾರದ 7ನೇ ಸುತ್ತಿನ ಮಾತುಕತೆ ಮುಂದುವರಿಸಿರುವಂತೆ ಈ ಸ್ಪಷ್ಟನೆ ಬಂದಿದೆ.
ಕಾರುನಲ್ಲಿರುವ 3ನೇ ಪದಾತಿ ದಳದ ಕಮಾಂಡರ್​ ಮೇಜರ್​ ಜನರಲ್​ ಅಭಿಜಿತ್​ ಬಾಪಟ್​ ಮತ್ತು ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಮೇಜರ್​ ಜನರಲ್​ ದರ್ಜೆಯ ಅಧಿಕಾರಿ ಮಾತುಕತೆ ನಡೆಸಿದರು. ಆದರೆ, ಈ ಮಾತುಕತೆಯ ವಿವರಗಳು ಇನ್ನೂ ಲಭ್ಯವಾಗಿಲ್ಲ.
ಭಾರತದ ಆರ್ಥಿಕತೆಯಲ್ಲಿದೆ ಚೀನಾದ 3,95,811 ಕೋಟಿ ರೂ.!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
