ನವದೆಹಲಿ:ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೃತ್ಯದಿಂದ ಪ್ರೇರಣೆ ಪಡೆದುಕೊಂಡಿರುವ ವಿವಿಧ ಪಾತಕಿಗಳು ವಿದೇಶದಲ್ಲಿದ್ದುಕೊಂಡೇ ದೆಹಲಿ, ಹರಿಯಾಣ, ಪಂಜಾಬ್​ಗಳಲ್ಲಿ ಭೂಗತ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ದೆಹಲಿಯ ವಿಶೇಷ ಪೊಲೀಸ್ ಪಡೆಯ ಡಿಸಿಪಿ ಮನಿಷಿ ಚಂದ್ರ ಹೇಳಿದ್ದಾರೆ.
ಕುಖ್ಯಾತ ಗ್ಯಾಂಗಸ್ಟರ್ ವೀರೇಂದರ್ ಪ್ರತಾಪ್ ಅಲಿಯಾಸ್ ಕಾಳಾ ರಾಣಾ ಥಾಯ್ಲೆಂಡ್​ನಿಂದ, ಸತೇಂದರ್​ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಕೆನಡಾದಿಂದ, ಸಂದೀಪ್ ಅಲಿಯಾಸ್ ಕಾಳಾ ಜಥೇಡಿ ವಿದೇಶದ ಅಜ್ಞಾತ ಪ್ರದೇಶದಿಂದ ತಮ್ಮ ಗ್ಯಾಂಗ್​ಗಳ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಕಾಳಾ ಜಥೇಡಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನ ಆರು ಸಹಚರರ ಬಂಧನ ಮತ್ತು ಅವರ ವಿಚಾರಣೆ ನಡೆಸಿದ ವೇಳೆ ಪಾತಕಿಗಳು ವಿದೇಶದಲ್ಲಿದ್ದುಕೊಂಡು ಗ್ಯಾಂಗ್ ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಆರು ಗ್ಯಾಂಗ್​ಸ್ಟರ್ ಸಹಚರರನ್ನು 15 ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಕಾಳಾ ಜಥೇಡಿಯಲ್ಲಿ ಬಂಧಿಸಲಾಗಿತ್ತು.
ವಿಒಐಪಿ ಮೂಲಕ ಕಾಲ್: ವಿದೇಶದಿಂದ ವಾಯ್್ಸ ಓವರ್ ಇಂಟರ್​ನೆಟ್ ಪ್ರೊಟೊಕಾಲ್ (ವಿಒಐಪಿ) ಮೂಲಕ ಮಾತ್ರವೇ ಕರೆ ಮಾಡುತ್ತಾರೆ. ವಿಭಿನ್ನ ಐಡಿಗಳಿಂದ ಬೇರೆ ಬೇರೆ ನಂಬರ್ ಬಳಸಿ ಕರೆ ಮಾಡುತ್ತಾರೆ ಎಂಬ ಮಾಹಿತಿಯನ್ನು ಬಂಧಿತರಲ್ಲಿ ಮೂವರು ಬಹಿರಂಗಪಡಿಸಿದ್ದಾರೆ. ಆರೋಪಿ ಸಹಚರರು ಅವರ ಬಾಸ್​ಗಳ ಜತೆಗೆ ಮಾತನಾಡುವಾಗ ಸಂಕೇತ ಭಾಷೆಗಳನ್ನು ಬಳಸುತ್ತಿದ್ದರು. ದೆಹಲಿಯ ಜಿಟಿಬಿ ಆಸ್ಪತ್ರೆಯಿಂದ ಮಾರ್ಚ್ 25ರಂದು ಗ್ಯಾಂಗ್​ಸ್ಟರ್ ಕುಲದೀಪ್ ಅಲಿಯಾಸ್ ಫಜ್ಜಾ ತಪ್ಪಿಸಿಕೊಳ್ಳಲು ಬಂಧಿತರಲ್ಲಿ ಒಬ್ಬಾತ ನೆರವಾಗಿದ್ದ. ಆತ, ಫಜ್ಜಾಗೆ ಕಾರು ಮತ್ತು ಶಸ್ತ್ರಾಸ್ತ್ರಗಳನ್ನು ತಲುಪಿಸಿದ್ದ ಮತ್ತು ಶೂಟರ್​ಗಳನ್ನು ಅಲ್ಲಿಗೆ ತಲುಪಿಸಿದ್ದ ಎಂದು ಚಂದ್ರ ವಿವರಿಸಿದ್ದಾರೆ.
ಬಡ ಕುಟುಂಬಗಳಿಗೆ ಪ್ರತಿ ತಿಂಗಳು ತಲಾ 6000 ರೂ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸೋನಿಯಾ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 18 =
Remember me
