ಉತ್ತರ ಕೊರಿಯಾ:ತಾನು ಆಡಿದ್ದೇ ಮಾತು, ತಾನು ನುಡಿದದ್ದೇ ಕಾನೂನು… ತಾನೇ ದೇವರು… ತಾನೇ ಸರ್ವಸ್ವ… ಇದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ನ ಧೋರಣೆ.
ನಿಗೂಢವಾಗಿ ಕಣ್ಮರೆಯಾಗಿ, ಅಷ್ಟೇ ನಿಗೂಢವಾಗಿ ಕಾಣಿಸಿಕೊಂಡು ಚಿತ್ರ-ವಿಚಿತ್ರ ನಡವಳಿಕೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಕಿಮ್‌ನ ಸಿರಿವಂತಿಕೆಯ ಭಯಾನಕ ರಹಸ್ಯವನ್ನು ಇದೀಗ ಹೊರಗೆಡವಲಾಗಿದೆ.
ಹಭದು. ರಾಷ್ಟ್ರದ ರಾಜಧಾನಿಯಲ್ಲಿ ಸರ್ಕಾರಿ ಕಟ್ಟಡವನ್ನು ಬಳಸಿಕೊಂಡು ಈತ ನಡೆಸುತ್ತಿರುವ ಅಕ್ರಮ ಚಟುವಟಿಕೆಗಳು ಈಗ ಒಂದೊಂದಾಗಿಯೇ ಬಯಲಿಗೆ ಬರುತ್ತಿವೆ. ‘ಆಫೀಸ್ 39’ ಎಂದು ಕರೆಯಲ್ಪಡುವ ಈ ಕಟ್ಟಡದಲ್ಲಿ ಡ್ರಗ್ಸ್‌, ಉತ್ಪಾದನೆ, ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಚಿನ್ನದ ಚಿನ್ನದ ಕಳ್ಳಸಾಗಣೆ, ಶಸ್ತ್ರಾಸ್ತ್ರ ವ್ಯವಹಾರಗಳು ಕೂಡ ಇಲ್ಲಿ ಎಗ್ಗಿಲ್ಲದಂತೆ ನಡೆಯುತ್ತಿವೆ. ಇವೆಲ್ಲದ್ದಕ್ಕೂ ಕಾರ್ಮಿಕರನ್ನು ನಿಯೋಜನೆ ಮಾಡಿರುವ ಕಿಮ್‌ ಅವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿರುವ ಭಯಂಕರ ರಸಹ್ಯವೂ ಇದೀಗ ವರದಿಯಾಗುತ್ತಿದೆ.
ಇದನ್ನೂ ಓದಿ:ಚೀಫ್ ಜಸ್ಟಿಸ್ ಬಳಸಿದ ದುಬಾರಿ ಬೈಕ್ ಯಾರದು? ವಿವಾದ ಮೈಮೇಲೆ ಎಳೆದುಕೊಂಡ ಸಿಜೆಐ
ವಿಶ್ವಸಂಸ್ಥೆಯ ನಿವೃತ್ತ ಆರ್ಮಿ ಸ್ಪೆಶಲ್ ಫೋರ್ಸ್ ಕರ್ನಲ್ ಮತ್ತು ಉತ್ತರ ಕೊರಿಯಾದ ತಜ್ಞ ಡೇವಿಡ್ ಮ್ಯಾಕ್ಸ್ವೆಲ್ ಅವರ ಪ್ರಕಾರ, ಕಿಮ್ಸ್ ಆಲಂಕಾರಿಕ ವಸ್ತುಗಳನ್ನು ಖರೀದಿಸಲು ಖರ್ಚು ಮಾಡುವ ಎಲ್ಲಾ ಹಣ ಆಫೀಸ್ 39 ರಿಂದ ಬರುತ್ತದೆ. “ಕಿಮ್ ಬಳಸುವ ಅತ್ಯಂತ ದುಬಾರಿ ಬೆಲೆ ಬಾಳುವ ಕಾಗ್ನ್ಯಾಕ್, ಮರ್ಸಿಡಿಸ್ ಮತ್ತು ರೋಲೆಕ್ಸ್ ಕೈಗಡಿಯಾರಗಳ ಮೂಲವೂ ಇದೇ ಕಳ್ಳ ವ್ಯವಹಾರದ್ದೇ ಎಂದು ವಿವರಿಸಲಾಗಿದೆ.
ಆಫೀಸ್‌ 39, ಕಿಮ್‌ ಉನ್‌ಗೆ ಬ್ಯಾಂಕ್‌ನಂತಿದೆ. ಇದನ್ನು ಕಿಮ್‌ನ ತಂದೆ ಕಿಮ್ ಜೊಂಗ್-ಇಲ್ 1974ರಲ್ಲಿ ಪ್ರಾರಂಭಿಸಿದ್ದರು. ಕಾನೂನುಬಾಹಿರ ಚಟುವಟಿಕೆ ಇಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಈ ಬಗ್ಗೆ ಬೆಳಕಿಗೆ ಬರುತ್ತಿದ್ದಂತೆಯೇ ಕಿಮ್‌ ಹೆಚ್ಚು ಜಾಗರೂಕರಾಗಿದ್ದಾರೆ ಎನ್ನುತ್ತಾರೆ ಉತ್ತರ ಕೊರಿಯಾದ ಕುರಿತು ಚೆನ್ನಾಗಿ ಅಧ್ಯಯನ ನಡೆಸಿರುವ ಜೇಸನ್ ಲೀ.
“ಕಿಮ್ಸ್ ಕುಟುಂಬವೇ ಒಂದು ಸಂಘಟಿತ ಅಪರಾಧ ಕುಟುಂಬ. ಕಿಮ್‌ನ ಸಹೋದರಿ ಕಿಮ್ ಯೋ-ಜಾಂಗ್ ಮತ್ತು ಆಕೆಯ ಪತಿ ಚೋ ಸಾಂಗ್, ಆಫೀಸ್‌ 39ರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇಲ್ಲಿ ನಡೆಯುವ ಅಪರಾಧಿಕ, ಕಾನೂನು ಬಾಹಿರ ಕೃತ್ಯಗಳ ಉಸ್ತುವಾರಿಯೂ ಅವರದ್ದೇ ಎನ್ನಲಾಗಿದೆ. ಇದರಿಂದಲೇ ಇಡೀ ಕುಟುಂಬ ಸುಖದ ಸುಪ್ಪತ್ತಿಗೆಯಲ್ಲಿ ಮರೆಯುತ್ತಿದೆ. ತಲೆತಲಾಂತರಗಳಿಂದ ಐಷಾರಾಮಿ ಜೀವನದ ನಡೆಸುತ್ತಿರುವ ಹಿನ್ನೆಲೆಯೂ ಇದೇ ಆಫೀಸ್‌ 39 ಎನ್ನಲಾಗಿದೆ. ಆದರೆ ಈ ಬಗ್ಗೆ ಯಾರೂ ಚಕಾರ ಮಾತ್ರ ಎತ್ತುವಂತಿಲ್ಲ.(ಇದನ್ನೂ ಓದಿ)
ಈ ಸುಂದರಿಯ ತಾಳಕ್ಕೆ ಕುಣಿದ ನಾಯಕರ ಕತೆ ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
