ಮುಂಬೈ:ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸದಾಗಿ ನಟಿಸುತ್ತಿರುವ ಚಿತ್ರದ ಹೆಸರು ‘ತೇಜಸ್’. ಇದರಲ್ಲಿ ಆಕೆ ಭಾರತೀಯ ವಾಯುಪಡೆಯ ಪೈಲಟ್​ ಪಾತ್ರ ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಭರಪೂರ ಸಿದ್ಧತೆ ನಡೆಸಿದ್ದಾರಂತೆ. ಅದರ ಭಾಗವಾಗಿ ಸೇನಾ ತರಬೇತಿಯ ಕೆಲವು ಕಷ್ಟಕರ ವ್ಯಾಯಾಮಗಳನ್ನು ಮಾಡುತ್ತಿದ್ದಾರಂತೆ!
ಮುಂಬೈನ ಸ್ಟುಡಿಯೋ ಒಂದರಲ್ಲಿ ‘ತೇಜಸ್​’ ಚಿತ್ರದ ಶೂಟಿಂಗ್ ಮತ್ತು ಟ್ರೈನಿಂಗ್​ ಹೇಗೆ ನಡೆಯುತ್ತಿದೆ ಎಂಬುದನ್ನು ತಮ್ಮ ಅಭಿಮಾನಿಗಳೊಂದಿಗೆ ಕಂಗನಾ ಹಂಚಿಕೊಂಡಿದ್ದಾರೆ. ಸೇನಾ ತರಬೇತಿಯಲ್ಲಿ ಮತ್ತು ಸಾಹಸ ಕ್ರೀಡೆಗಳಲ್ಲಿ ಬಳಸುವ ನೆಟ್​ ಕ್ಲೈಂಬಿಂಗ್​ಅನ್ನು ಮಾಡುತ್ತಿರುವ ತಮ್ಮ ವೀಡಿಯೋ ತುಣಕನ್ನು ನಿನ್ನೆ ಟ್ವಿಟರ್​ನಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ:42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ‘ಜಗದೇಕವೀರುಡು’
“ಬರೀ ಸೈನಿಕರ ಯೂನಿಫಾರಂ ಧರಿಸಿದರೆ ಸಾಕಾಗೋದಿಲ್ಲ… ‘​ಮಸಲ್ಸ್​​ ಆಫ್​ ಐರನ್​’ ಮತ್ತು ‘ನರ್ವ್ಸ್ ಆಫ್ ಸ್ಟೀಲ್’ ಹೊಂದಲು ಹೇಗೆ ಸಾಧ್ಯವಾಗುತ್ತೆ ಅನ್ನುವುದನ್ನು ಅರ್ಥಮಾಡಿಕೊಳ್ಳೋಕೆ, ಅವರು(ಸೈನಿಕರು) ಎದುರಿಸುವ ಕಷ್ಟಗಳನ್ನು, ಹೋರಾಟಗಳನ್ನು ಅನುಭವಿಸುವುದು ಮುಖ್ಯ” ಎಂದು ಬರೆದಿದ್ದಾರೆ ಕಂಗನಾ. ಅದಕ್ಕೇ “ಯೂನಿಫಾರಂ ಧರಿಸಲು ಯೋಗ್ಯತೆಯನ್ನು ಸಂಪಾದಿಸಲು ತರಬೇತಿ ಪಡೆಯುತ್ತಿರುವುದಾಗಿ” ಹೇಳಿದ್ದಾರೆ.
https://twitter.com/KanganaTeam/status/1367464201879506948?s=20

ಮಹಿಳೆಯರ ಮೇಲೆ ಆಧರಿಸಿದ ಚಲನಚಿತ್ರಗಳಲ್ಲಿ ಪ್ರಬಲ ವ್ಯಕ್ತಿತ್ವದ ಛಾಪು ಮೂಡಿಸುವುದು ಕಂಗನಾ ವಿಶೇಷತೆ. ಆದ್ದರಿಂದ ಸೈನ್ಯದ ಸಮವಸ್ತ್ರದಲ್ಲಿ ಮಹಿಳಾ ಹೀರೋ ಪಾತ್ರ ಹೊಂದಿರುವ ತೇಜಸ್​​ ಬಗ್ಗೆ ಅವರು ಉತ್ಸುಕರಾಗಿದ್ದಾರೆ. “ತೇಜಸ್​ ಒಂದು ಆಹ್ಲಾದಕರ ಕಥೆಯಾಗಿದೆ. ಕರ್ತವ್ಯಕ್ಕಾಗಿ ಪ್ರತಿದಿನ ಹಲವಾರು ತ್ಯಾಗಗಳನ್ನು ಮಾಡುವ ಸಾಹಸಿ ಪುರುಷರು ಮತ್ತು ಮಹಿಳೆಯರ ಬಗ್ಗೆ ತೆಗೆಯುತ್ತಿರುವ ಈ ಚಿತ್ರದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ಸೇನಾ ಪಡೆಗಳ ಮತ್ತು ಅದರಲ್ಲಿರುವ ಹೀರೋಗಳನ್ನು ಸೆಲಿಬ್ರೇಟ್​ ಮಾಡುತ್ತದೆ, ನಮ್ಮ ಚಿತ್ರ” ಎಂದು ಕಂಗನಾ ಚಿತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್
ಮದ್ವೆ ಖುಷಿಯಲ್ಲಿದ್ದ ಆಂಧ್ರದ ಯುವತಿ ವಿವಾಹ ದಿನದಂದೇ ಅಮೆರಿಕದಲ್ಲಿ ಆತ್ಮಹತ್ಯೆಗೆ ಶರಣು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − one =
Remember me
