ನವದೆಹಲಿ:ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ಮಾಸ್ಕ್ ಮತ್ತು ಫೇಸ್​ಶೀಲ್ಡ್ ಎರಡನ್ನೂ ತೊಟ್ಟರೂ ಸೋಂಕು ಹರಡುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ. ಎಕ್ಸಾಹಲೇಷನ್ ವಾಲ್ವ್ಸ್ (ನಿಶ್ವಾಸ ಕವಾಟು)ಗಳನ್ನೊಳಗೊಂಡ ಮಾಸ್ಕ್​ಗಳಿಂದ ಸೋಂಕು ಸುಲಭವಾಗಿ ಹೊರಬರಬಹುದು ಎಂದು ಭಾರತ-ಅಮೆರಿಕ ಮೂಲದ ಸಂಶೋಧಕರು ಹೇಳಿದ್ದಾರೆ. ವಾಲ್ವ್ಸ್ಗಳನ್ನೊಳಗೊಂಡ ಮಾಸ್ಕ್ ತೊಟ್ಟ ಸೋಂಕಿತ ಕೆಮ್ಮಿದರೆ ಆತನ ಬಾಯಿಯ ದ್ರವದ ಕಣಗಳು ವಾಲ್ವ್ಸ್ ಮೂಲಕ ಹೊರಬರುತ್ತದೆ. ಫೇಸ್​ಶೀಲ್ಡ್​ನಲ್ಲಿ ಸೋಂಕು ಶೇಖರಣೆಗೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಅದು ಹೊರ ಪ್ರದೇಶಗಳಿಗೂ ಪಸರಿಸುತ್ತದೆ ಎಂದು ಫ್ಲಾರಿಡಾ ಅಟ್ಲಾಂಟಿಕ್ ವಿಶ್ವವಿದ್ಯಾಲಯದ (ಎಫ್​ಎಯು) ಸೀಟೆಕ್ ವಿಭಾಗದ ನಿರ್ದೇಶಕರು ಮತ್ತು ಉಪನ್ಯಾಸಕರಾದ ಮನ್ಹಾರ್ ಧನಕ್ ತಿಳಿಸಿದ್ದಾರೆ. ಫೇಸ್​ಶೀಲ್ಡ್ ಸೋಂಕಿನ ಮೊದಲ ಹಂತದ ರಕ್ಷಣೆ ಮಾತ್ರ ಮಾಡಲು ಸಾಧ್ಯ ಎನ್ನುವುದನ್ನು ಅವರು ಅಧ್ಯಯನದ ಮೂಲಕ ತಿಳಿದುಕೊಂಡಿರುವುದಾಗಿ ತಿಳಿಸಿದ್ದಾರೆ.
ಪರೀಕ್ಷೆ ನಡೆಸಲು ಕೇಂದ್ರದ ಮಾರ್ಗಸೂಚಿ:ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ಬುಧವಾರ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಅನುಸಾರ ಆರು ಅಡಿ ದೈಹಿಕ ಅಂತರ ಮತ್ತು ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ನಿಯಮಿತವಾಗಿ ಕೈ ತೊಳೆಯುವುದನ್ನೂ ಮಾರ್ಗಸೂಚಿಯಲ್ಲಿ ಸೇರಿಸಲಾಗಿದೆ.
ಒಂದೇ ದಿನ 78 ಸಾವಿರ ಪ್ರಕರಣ
ಭಾರತದಲ್ಲಿ ಸೋಮವಾರ ಕೊಂಚ ಇಳಿಕೆ ಕಂಡಿದ್ದ ಕರೊನಾ ಪ್ರಮಾಣ ಮಂಗಳವಾರ ಮತ್ತೆ ಏರಿಕೆ ಕಂಡಿದೆ. ಒಂದೇ ದಿನದಲ್ಲಿ 78 ಸಾವಿರಕ್ಕೂ ಅಧಿಕ ಕರೊನಾ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟಾರೆ ಪ್ರಕರಣಗಳ ಸಂಖ್ಯೆ 37 ಲಕ್ಷದ ಗಡಿ ದಾಟಿದೆ. 24 ಗಂಟೆಗಳಲ್ಲಿ 1,045 ಜನರು ಮೃತರಾಗಿದ್ದು, ಮೃತರ ಸಂಖ್ಯೆ 66 ಸಾವಿರಕ್ಕೂ ಹೆಚ್ಚಾಗಿದೆ. 29 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ. 76.98ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ 8 ಲಕ್ಷದಷ್ಟು ಸಕ್ರಿಯ ಪ್ರಕರಣಗಳು ಬಾಕಿ ಇವೆ. ಶೇ. 21.26 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 4.43 ಕೋಟಿಗೂ ಅಧಿಕ ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದೆ. ಸೆ.1ರಂದು 10.12 ಲಕ್ಷ ಜನರು ಪರೀಕ್ಷೆಗೆ ಒಳಗಾಗಿದ್ದಾರೆ ಎಂದು ತಿಳಿಸಲಾಗಿದೆ.
ಚೀನಾದಲ್ಲಿ ಅತಿ ಹೆಚ್ಚು ಸಾವು
ಕರೊನಾ ಸೋಂಕಿನ ಮೂಲವಾದ ಚೀನಾದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ಆದರೆ ಚೀನಾ ಸರ್ಕಾರ ಈ ವಿಚಾರವನ್ನು ಮುಚ್ಚಿಡುವ ಯತ್ನಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಚೀನಾ ನೀಡಿರುವ ವರದಿ ಪ್ರಕಾರ ಕೇವಲ 4,724 ಜನರು ಸಾವನ್ನಪ್ಪಿದ್ದಾರೆ. ಕೇವಲ 1.84 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದಾರೆ. ಆದರೆ ನಿಜಾಂಶ ಬೇರೆಯಿದೆ. ಎಲ್ಲ ದೇಶಗಳಿಗಿಂತ ಹೆಚ್ಚು ಸಾವು ಚೀನಾದಲ್ಲಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಮೆಟ್ರೋಗೆ ಮಾರ್ಗಸೂಚಿ ಬಿಡುಗಡೆ
ದೇಶಾದ್ಯಂತ ಮೆಟ್ರೋ ರೈಲು ಪುನರಾರಂಭ ಮಾಡುವುದಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 7ರಿಂದ ಹಂತ ಹಂತವಾಗಿ ಮೆಟ್ರೋ ಸೇವೆ ಆರಂಭಿಸಲಾಗುವುದು. ಪ್ರಯಾಣಿಕರಿಗೆ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕೆ ಅವಕಾಶ ಮಾಡಿಕೊಡಲಾಗುವುದು. ಒಂದು ವೇಳೆ ರೈಲು ಭರ್ತಿಯಾಗಿದ್ದರೆ ಅಂತಹ ಸಮಯದಲ್ಲಿ ಮೆಟ್ರೋ ಚಾಲಕರಿಗೆ ನಿಲ್ದಾಣದಲ್ಲಿ ರೈಲು ನಿಲ್ಲಿಸದೇ ಮುಂದುವರಿಯುವುಕ್ಕೂ ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸಚಿವ ಹರ್​ದೀಪ್ ಸಿಂಗ್ ತಿಳಿಸಿದ್ದಾರೆ. ಉಳಿದಂತೆ ಆಯಾ ರಾಜ್ಯಗಳು ಹೆಚ್ಚಿನ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಬಹುದು ಎಂದು ತಿಳಿಸಲಾಗಿದೆ. ಈಗಾಗಲೇ ದೆಹಲಿಯಲ್ಲಿ ಮೆಟ್ರೋ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಗದು ರಹಿತ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಮೆಟ್ರೋ ಪುನರಾರಂಭ ಮಾಡಲಾಗುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಮುಂಬೈನಲ್ಲಿ ಅಕ್ಟೋಬರ್​ನಲ್ಲಿ ಮೆಟ್ರೋ ಸಂಚಾರ ಪುನರಾರಂಭ ಮಾಡಲಾಗುವುದು ಎನ್ನಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × two =
Remember me
