ಚೆನ್ನೈ:ದೇಶಕ್ಕಾಗಿ ನಿಸ್ವಾರ್ಥ ಚಿಂತನೆ ಇರುವ ಯಾರೇ ಆದರೂ ಅವರ ಜೊತೆ ನಮ್ಮ ಮಕ್ಕಳ್ ನೀದಿ ಮೈಯಂ ಪಕ್ಷವು ಕೈ ಜೋಡಿಸಲು ಸದಾ ಸಿದ್ಧ ಇರುತ್ತದೆ ಎಂದು ನಟ, ರಾಜಕಾರಣಿ ಕಮಲ್​ ಹಾಸನ್​ ಘೋಷಿಸಿದ್ದಾರೆ.
ಪಕ್ಷದ ಏಳನೇ ವಾರ್ಷಿಕೋತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಕಮಲ್​ ಹಾಸನ್​, ಮೈತ್ರಿ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ದೇಶಕ್ಕಾಗಿ ನಿಸ್ವಾರ್ಥ ಚಿಂತನೆ ಇರುವವರ ಜೊತೆ ಕೈ ಜೋಡಿಸಲು ಸಿದ್ಧ ಎಂದು ಹೇಳಿದ್ದಾರೆ.
#WATCH| Chennai, Tamil Nadu | Actor and Makkal Needhi Maiam chief Kamal Hassan says, "I have already told that this is the time when you have to blur party politics and think about the nation. Anybody who thinks selflessly about the nation, my Makkal Needhi Maiam will be a part…pic.twitter.com/B9XfBmRvck
ಇದನ್ನೂ ಓದಿ:ಸಿನಿಮಾ ಗೆದ್ದಿದೆ ಆ ಖುಷಿಯಲ್ಲಿ ಏನೇನೋ ಮಾತನಾಡುತ್ತಿದ್ದಾರೆ; ದರ್ಶನ್​ ಹೇಳಿಕೆಗೆ ಉಮಾಪತಿ ಟಾಂಗ್​
ಎಂಎನ್ಎಂ ಪಕ್ಷದ ಇಂಡಿಯಾ ಮೈತ್ರಿಕೂಟಕ್ಕೆ ಸೇರ್ಪಡೆಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗಾಗಲೇ ಹೇಳಿದ್ದೇನೆ, ಪಕ್ಷ ರಾಜಕಾರಣವನ್ನು ಬದಿಗಿಟ್ಟು ರಾಷ್ಟ್ರದ ಬಗ್ಗೆ ಯೋಚಿಸಬೇಕಾದ ಸಮಯ ಇದು. ನಮ್ಮ ಪಕ್ಷ ರಾಷ್ಟ್ರದ ಬಗ್ಗೆ ನಿಸ್ವಾರ್ಥವಾಗಿ ಯೋಚಿಸುವ ಯಾವುದೇ ಮೈತ್ರಿಯ ಭಾಗವಾಗಿರಲು ಬಯಸುತ್ತದೆ. ದೇಶ ವಿಭಜನೆ ಮಾಡುವವರ ಜೊತೆ ನಾವು ಯಾವತ್ತಿಗೂ ಕೈ ಜೋಡಿಸುವುದಿಲ್ಲ ಎಂದು ಕಮಲ್​ ಹಾಸನ್​ ತಿಳಿಸಿದ್ದಾರೆ.
ತಮ್ಮ ಪಕ್ಷದ ಸಂಭವನೀಯ ರಾಜಕೀಯ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಚರ್ಚೆಗಳು ನಡೆಯುತ್ತಿವೆ ಮತ್ತು ಈ ನಿಟ್ಟಿನಲ್ಲಿ ಯಾವುದೇ ಒಳ್ಳೆಯ ಸುದ್ದಿ ಇದ್ದರೆ ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ನಟ ರಾಜಕಾರಣಿ ಕಮಲ್​ ಹಾಸನ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 20 =
Remember me
