ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ತೃಣಮೂಲ ಕಾಂಗ್ರೆಸ್ ಎಂಪಿ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ. ಕಲ್ಯಾಣ್​ ಬ್ಯಾನರ್ಜಿ ಸ್ತ್ರೀ ದ್ವೇಷಿ ಎಂದು ಹೇಳಿದೆ.
ನಿರ್ಮಲಾ ಸೀತಾರಾಮನ್​ ಅವರು ಒಂದು ವಿಷಕಾರಿ ಹಾವು ಇದ್ದಂತೆ. ದೇಶದ ಜನರನ್ನು ಬಲಿ ಪಡೆಯುತ್ತಿದ್ದಾರೆ. ಇಡೀ ಅರ್ಥ ವ್ಯವಸ್ಥೆಯನ್ನು ಭಗ್ನಗೊಳಿಸಿದ್ದಾರೆ. ಇದರಿಂದಾಗಿ ಅದೆಷ್ಟೋ ಜನರು ಮೃತಪಟ್ಟಿದ್ದಾರೆ ಎಂದು ಕಮಲ್​ ಬ್ಯಾನರ್ಜಿ, ಇಂಧನ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಹೇಳಿದ್ದರು. ಅಷ್ಟೇ ಅಲ್ಲ, ನಿರ್ಮಲಾ ಸೀತಾರಾಮನ್​ ಓರ್ವ ಅತ್ಯಂತ ಕಳಪೆ ಹಣಕಾಸು ಸಚಿವೆ ಎಂದೂ ಹೇಳಿದ್ದರು.ಇದನ್ನೂ ಓದಿ:ನನ್ನ ಮಗ ಶರಣಾಗದಿದ್ದರೆ ಕೊಂದು ಬಿಡಿ ಎಂದಿದ್ದ ದುಬೆ ತಾಯಿ ಈಗ ಪೊಲೀಸರ ವಿರುದ್ಧ ತಿರುಗಿಬಿದ್ದಿದ್ದೇಕೆ?
ಕಲ್ಯಾಣ್​ ಬ್ಯಾನರ್ಜಿ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ವಕ್ತಾರ ಸಂಬಿತ್​ ಪಾತ್ರಾ, ಕಾಳಿಯನ್ನು ಪೂಜಿಸುವ ನಾಡಿನಲ್ಲಿ ಓರ್ವ ಸ್ತ್ರೀಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿದ್ದಾರೆ. ಇದು ಬರೀ ಜನಾಂಗೀಯ ನಿಂದನೆ ಮಾತ್ರವಲ್ಲ, ಸ್ತ್ರೀ ದ್ವೇಷದ ಮಾತುಗಳು ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಕೂಡ ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದಾರೆ. ಟಿಎಂಸಿಯಲ್ಲಿ ಭ್ರಷ್ಟಾಚಾರ ಎಂಬುದು ವ್ಯಾಪಕವಾಗಿ ಹಬ್ಬಿದೆ. ಆ ಪಕ್ಷದಲ್ಲಿ ಅನೇಕರು ಮನಸಿಗೆ ಬಂದಂತೆ, ತಲೆ ಬುಡ ಇಲ್ಲದೆ ಮಾತನಾಡುತ್ತಾರೆ. ತಮ್ಮ ಹತಾಶೆಯಿಂದ ಮಾತನಾಡುತ್ತಾರೆ. ನಾವು ಅಂಥ ಹೇಳಿಕೆಗಳಿಗೆ ಸೊಪ್ಪು ಹಾಕದೆ ಇರುವುದೇ ಒಳ್ಳೆಯದು ಎಂದಿದ್ದಾರೆ. (ಏಜೆನ್ಸೀಸ್​)
ಸ್ವಂತ ಖರ್ಚಿನಲ್ಲಿ ಕೋವಿಡ್​ ಪರೀಕ್ಷೆ ಮಾಡಿಸಿ, ಕರೊನಾ ವಾರಿಯರ್ಸ್​ಗೆ ಸರ್ಕಾರದ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fifteen =
Remember me
