ನವದೆಹಲಿ:ಕೋವಿಡ್ 19 ಇರುವ ಕಾರಣ ಕೆಲವು ಪರೀಕ್ಷಾರ್ಥಿಗಳು ಸಿಎ ಪರೀಕ್ಷೆಯನ್ನು ಆನ್​ಲೈನ್ ಮೂಲಕ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ದಾವೆ ಹೂಡಿದ್ದರು. ನ್ಯಾಯಪೀಠದ ಅಪೇಕ್ಷೆಯಂತೆ ಇನ್​ಸ್ಟಿಟ್ಯೂಟ್ ಆಫ್​ ಚಾರ್ಟರ್ಡ್​ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬುಧವಾರ ಪ್ರತಿಕ್ರಿಯಿಸಿದ್ದು, ಆನ್​ಲೈನ್ ಮೂಲಕ ಸಿಎ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೂರು ಗಂಟೆ ಅವಧಿಯ ಪರೀಕ್ಷೆಯಲ್ಲಿ ವಿವಿಧ ನಮೂನೆಯ ಪ್ರಶ್ನೆಗಳಿದ್ದು, ಅದಕ್ಕೆ ವಿವರಣಾತ್ಮಕ ಉತ್ತರವೂ ಬೇಕಾಗುತ್ತದೆ. ಟಿಕ್ ಮಾರ್ಕ್ ಹಾಕುವ ಅಥವಾ ಒಂದು ಶಬ್ದದಲ್ಲಿ ಉತ್ತರಿಸುವ ಪ್ರಶ್ನೆಗಳಲ್ಲ. ಹೀಗಾಗಿ ಆನ್​ಲೈನ್ ಪರೀಕ್ಷೆ ನಡೆಸಲಾಗದು ಎಂದು ಐಸಿಎಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಖಾಸಗಿ ಗೂಢಚಾರಿಕೆ ಕ್ಷೇತ್ರಕ್ಕೆ ನಿಯಮದ ಚೌಕಟ್ಟು: ಕೇಂದ್ರಕ್ಕೆ ನಿರ್ದೇಶಿಸಲು ಸುಪ್ರೀಂ ನಕಾರ
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್​, ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಪರೀಕ್ಷಾ ಸಂದರ್ಭದಲ್ಲಿ ಕೋವಿಡ್ 19 ತಡೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನೇನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ವಿವರವನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ.ಸಿಎ ಪರೀಕ್ಷೆ ನವೆಂಬರ್ 21ರಿಂದ ಡಿಸೆಂಬರ್ 14ರ ತನಕ ನಿಗದಿಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರಲ್ಲ ಎಂಬುದನ್ನೂ ಐಸಿಎಐ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)
1.11 ಕಿಲೋ ಚಿನ್ನದ ಪೇಸ್ಟ್​ ವಶಪಡಿಸಿದ್ರು ಕಸ್ಟಮ್ಸ್ ಅಧಿಕಾರಿಗಳು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:two × 1 =
Remember me
