ನವದೆಹಲಿ:ಕೊವ್ಯಾಕ್ಸಿನ್​ ಲಸಿಕೆ ತೆಗೆದುಕೊಂಡು ಪ್ರಯೋಗಕ್ಕೆ ಒಡ್ಡಿಕೊಂಡಿರುವ ಹರಿಯಾಣದ ಆರೋಗ್ಯ ಮಂತ್ರಿ ಅನಿಲ್ ವಿಜ್​ ಆ ಬಳಿಕವೂ ಕೋವಿಡ್​-19 ಸೋಂಕಿಗೆ ಒಳಗಾಗಿದ್ದಾರೆ. ಖುದ್ದು ಅವರೇ ಇಂದು ಬೆಳಗ್ಗೆ ಇದನ್ನು ಹೇಳಿಕೊಂಡಿದ್ದು, ಮುಂದೆ ಬರಲಿರುವ ಲಸಿಕೆ ಎಷ್ಟರಮಟ್ಟಿಗೆ ಪರಿಣಾಮಕಾರಿ ಎಂಬುದು ಈಗ ಜನರಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಈ ಮಧ್ಯೆ ಔಷಧ ಕಂಪನಿಯೊಂದರ ಮುಖ್ಯಸ್ಥರ ಹೇಳಿಕೆ ಲಸಿಕೆಯ ವಿಶ್ವಾಸಾರ್ಹತೆಯ ಬುಡವನ್ನೇ ಅಲುಗಿಸಿದೆ. ಲಸಿಕೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಪ್ರಮುಖ ಕಂಪನಿ ಫೈಜರ್​ ಅಧ್ಯಕ್ಷರೇ ಇಂಥದ್ದೊಂದು ಹೇಳಿಕೆ ನೀಡಿರುವುದು ಈಗ ಅಚ್ಚರಿ ಮೂಡಿಸಿದೆ.
ನಿಮ್ಮ ಕಂಪನಿಯ ಲಸಿಕೆಯನ್ನು ತೆಗೆದುಕೊಂಡರೆ ಕರೊನಾ ಸೋಂಕು ತಗುಲುವುದಿಲ್ಲವೇ ಎಂಬ ಪ್ರಶ್ನೆಗೆ, ಅದರ ಬಗ್ಗೆ ನಾವು ಈಗಲೇ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಫೈಜರ್ ಕಂಪನಿಯ ಚೇರ್ಮನ್​ ಅಲ್ಬರ್ಟ್​ ಬೌರ್ಲ ಪ್ರತಿಕ್ರಿಯಿಸಿದ್ದಾರೆ. ಲಸಿಕೆ ತೆಗೆದುಕೊಂಡ ಮೇಲೂ ಕರೊನಾ ಸೋಂಕು ತಗುಲುತ್ತದೆಯೇ ಎಂಬ ಬಗ್ಗೆ ನಾವಿನ್ನೂ ಹೆಚ್ಚಿನ ಅಧ್ಯಯನ ನಡೆಸಬೇಕಿದೆ. ಸದ್ಯ ನಮಗಿರುವ ಮಾಹಿತಿ ಪ್ರಕಾರ ನಾವು ಆ ಬಗ್ಗೆ ನಿಖರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಪ್ರಾಯೋಗಿಕ ಕರೊನಾ ಲಸಿಕೆ ಪಡೆದಿದ್ದ ಹರಿಯಾಣ ಆರೋಗ್ಯ ಸಚಿವರಿಗೆ ಕರೊನಾ ಪಾಸಿಟಿವ್​

ನೀವು ವಾಟ್ಸ್​ಆ್ಯಪ್​ ಬಳಸುತ್ತಿದ್ದೀರಾ?; ಹಾಗಿದ್ದರೆ ಇದನ್ನು ಓದಿ.. ಗಮನದಲ್ಲಿರಲಿ…

ಐದು ಮಕ್ಕಳಲ್ಲಿ ಒಬ್ಬಳನ್ನು ರೈಲಲ್ಲೇ ಬಿಟ್ಟುಹೋದ ದಂಪತಿ; ಆಮೇಲೇನಾಯಿತು?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
