ಹೈದರಾಬಾದ್​:ಕಾರಿನಲ್ಲಿ ಕುಳಿತು ಪ್ರಯಾಣಿಸುವಾಗ ಸೀಟ್​ ಬೆಲ್ಟ್​ ಹಾಕುವುದನ್ನು ಮರೆಯಬೇಡಿ ಎಂದು ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರ ನಿರ್ಲ್ಷಕ್ಷ್ಯದಿಂದ ಯಾವ ಪರಣಾಮ ಬೀರಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ಸೀಟ್​ ಬೆಲ್ಟ್​ ಧರಿಸದ ಪರಿಣಾಮ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾಳೆ.
ಈ ಘಟನೆ ಹೈದರಾಬಾದಿನ ಗಾಚಿಬೌಲಿಯಲ್ಲಿರುವ ಹಳೇ ಮುಂಬೈ ಹೆದ್ದಾರಿಯಲ್ಲಿ ನ. 9ರ ರಾತ್ರಿ ನಡೆದಿದ್ದು, ಮೃತಳನ್ನು ಪೊನ್ನಪಲ್ಲಿ ಪ್ರಿಯಾಂಕಾ ಎಂದು ಗುರುತಿಸಲಾಗಿದೆ. ಪ್ರಿಯಾಂಕಾ ರಷ್ಯಾದಲ್ಲಿ ಉನ್ನತ ವ್ಯಾಸಾಂಗ ಮಾಡುತ್ತಿದ್ದು, ಲಾಕ್​ಡೌನ್​ ಸಮಯದಲ್ಲಿ ರಷ್ಯಾದಿಂದ ತವರಿಗೆ ಮರಳಿದ್ದಳು. ಮತ್ತೆ ರಷ್ಯಾಗೆ ಹೋಗುವಷ್ಟರಲ್ಲಿ ಕಾರು ಅಪಘಾತದಿಂದ ದುರಂತ ಅಂತ್ಯ ಕಂಡಿದ್ದಾಳೆ.
ಇದನ್ನೂ ಓದಿ:Web Exclusive |ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಮೈಸೂರು ಮೃಗಾಲಯ : ಚೇತರಿಕೆ ಕಾಣದ ಪ್ರವಾಸೋದ್ಯಮ
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೈಬರಬಾದ್​ ಸಂಚಾರಿ ಪೊಲೀಸರು ತನಿಖೆ ನಡೆಸಿದ್ದು, ಅಪಘಾತಕ್ಕೆ ಡ್ರಂಕ್​ ಆ್ಯಂಡ್​ ಡ್ರೈವ್​ ಮತ್ತು ಸೀಟ್​ ಬೆಲ್ಟ್​ ಧರಿಸದಿರುವುದು ಕಾರಣ ಎಂದು ತನಿಖಾ ವರದಿ ನೀಡಿದ್ದಾರೆ.
ಪೊಲೀಸ್​ ಮೂಲಗಳ ಪ್ರಕಾರ ಮಿಥಿ ಮೋದಿ (20) ಮತ್ತು ಪೊನ್ನಪಲ್ಲಿ ಪ್ರಿಯಾಂಕಾ ಜುಬಿಲಿ ಹಿಲ್ಸ್​ನಲ್ಲಿರುವ ಏರ್​ ಲೈವ್​ ಪಬ್​ನಿಂದ ಮನೆಗೆ ಮರಳುತ್ತಿದ್ದರು. ಮಿಥಿ ಮೋದಿ ಕಾರು ಚಾಲನೆ ಮಾಡುತ್ತಿದ್ದ. ಮದ್ಯ ವ್ಯಸನ ಸ್ಥಿತಿಯಲ್ಲಿದ್ದ ಮಿಥಿ ವೇಗದ ಮಿತಿಯನ್ನು ಮೀರಿದ್ದ. ಕಾರು ನಿಯಂತ್ರಣ ಕಳೆದುಕೊಂಡು ಇಂಡಿಯನ್​ ಇಮ್ಯುನೊಲಾಜಿಕಲ್​ ಕಂಪನಿ ಎದುರಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಸಹ ಪ್ರಯಾಣಿಕ ಪ್ರಿಯಾಂಕಾ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಡ್ರೈವರ್​ ಸೀಟಿನಲ್ಲಿ ಕುಳಿತು ಸೀಟ್​ ಬೆಲ್ಟ್​ ಹಾಕಿದ್ದ. ಆದರೆ, ಪ್ರಿಯಾಂಕಾ ಧರಿಸಿರಲಿಲ್ಲ. ಅಪಘಾತದಿಂದಾಗಿ ಪ್ರಿಯಾಂಕಾ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ:ಅರಣ್ಯ ಸಚಿವರನ್ನು ಭೇಟಿ ಮಾಡಲು ಬಂದ ಮೊಸಳೆ ಸೆರೆ..!
ಇದೀಗ ಡ್ರಂಕ್​ ಆ್ಯಂಡ್​ ಡ್ರೈವ್​ ಹಿನ್ನೆಲೆಯಲ್ಲಿ ಮಿಥಿ ಮೋದಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಮಿಥಿ ಮೋದಿಯನ್ನು ಬಂಧಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಈ ಒಂದು ಘಟನೆ ಸೀಟ್​ ಬೆಲ್ಟ್​ ಧರಿಸದೇ ವಾಹನ ಚಲಾಯಿಸುವವರು ಹಾಗೂ ಪ್ರಯಾಣಿಸುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.(ಏಜೆನ್ಸೀಸ್​)
ಬಿಹಾರ ಚುನಾವಣಾ ಫಲಿತಾಂಶ: ಚುನಾವಣಾ ಆಯೋಗಕ್ಕೆ ದೂರು ನೀಡಿದ ಆರ್​ಜೆಡಿ-ಕಾಂಗ್ರೆಸ್​ ನಿಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + ten =
Remember me
