ಗ್ವಾಲಿಯರ್​:ಲಾಕ್​ಡೌನ್ ನಿಯಮಗಳನ್ನು ಪಾಲಿಸಿ, ಮಾಸ್ಕ್​ ಧರಿಸದೆ ಹೊರಬೀಳಬೇಡಿ ಎಂದು ಎಷ್ಟು ಹೇಳಿದರೂ ಕೇಳದವರಿಗೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ಒಂದು ವಿಭಿನ್ನ ಶಿಕ್ಷೆ ವಿಧಿಸಲಾಗಿದೆ.
ಸ್ಥಳೀಯ ಆಡಳಿತದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಲಾಕ್​ಡೌನ್​ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸದೆ ಓಡಾಡುವವರು ಆಸ್ಪತ್ರೆಗಳಲ್ಲಿ ಹಾಗೂ ಪೊಲೀಸ್ ಚೆಕ್​ಪೋಸ್ಟ್​ ಬಳಿ ಸ್ವಯಂ ಸೇವಕರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.ಇದನ್ನೂ ಓದಿ:ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ; ತನಿಖೆ ನಡೆದಷ್ಟೂ ಪೊಲೀಸರೇ ಸಿಕ್ಕಿಬೀಳುತ್ತಿದ್ದಾರೆ…!
ಮಾಸ್ಕ್​ ಧರಿಸದೆ ಇರುವುದು ಸೇರಿ ಲಾಕ್​ಡೌನ್​ನ ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೂ ಅವರಿಗೆ ದಂಡ ವಿಧಿಸಲಾಗುವುದು. ಹಾಗೇ ಮೂರು ದಿನ ಆಸ್ಪತ್ರೆಯಲ್ಲೋ, ಪೊಲೀಸ್​ ಚೆಕ್​ಪೋಸ್ಟ್​ನಲ್ಲೋ ಕೆಲಸ ಮಾಡಲೇಬೇಕು ಗ್ವಾಲಿಯರ್​ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್​ ತಿಳಿಸಿದ್ದಾರೆ.
ಹಾಗೇ ಬೇರೆ ರಾಜ್ಯಗಳಿಂದ ಬರುವವರನ್ನು ಗಡಿಯಲ್ಲಿ ಕಡ್ಡಾಯವಾಗಿ ಸ್ಕ್ರೀನ್​ ಟೆಸ್ಟ್​​ಗೆ ಒಳಪಡಿಸಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. (ಏಜೆನ್ಸೀಸ್​)
ಈ ಹೆಣ್ಣಾನೆಗೆ ಸಿಕ್ಕಾಪಟೆ ಫ್ಯಾನ್ಸ್​ ಇದ್ದಾರೆ…ಅದಕ್ಕೆ ಕಾರಣ ಏನೆಂದು ಗೊತ್ತಾದರೆ ನೀವೂ ಅಚ್ಚರಿ ಪಡ್ತೀರಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
