ನವದೆಹಲಿ:ಕರ್ನಾಟಕ ಸರ್ಕಾರ ಕಾವೇರಿ ಕಣಿವೆಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಮೇಕೆದಾಟು ಯೋಜನೆ ಬಗ್ಗೆ ರ್ಚಚಿಸಲು ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಮತ್ತೆ ಅಸಮ್ಮತಿ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮೇಕೆದಾಟು ಕುರಿತ ಸಮಾಲೋಚನೆಯನ್ನು ಮತ್ತೊಮ್ಮೆ ಮುಂದಕ್ಕೆ ಹಾಕಿದೆ.
ಸಭೆ ಬಳಿಕ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್, ಮೇಕೆದಾಟು ಅಂತರ ಕಣಿವೆ ಯೋಜನೆ ಆಗಿರುವುದರಿಂದ ನೀರು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ. ಆದರೆ, ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳು ಚರ್ಚೆಗೆ ಹಿಂದೇಟು ಹಾಕುತ್ತಿರುವುದರಿಂದ ಮಾತುಕತೆ ಸಾಧ್ಯವಾಗಿಲ್ಲ. ಆದರೆ, ಇದೇ ಅಂತಿಮವಲ್ಲ. ಮುಂದಿನ ಬಾರಿಯೂ ಚರ್ಚೆಗೆ ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.
ಯೋಜನೆ ಬಗ್ಗೆ ತೀರ್ವನಿಸುವಾಗ ನಾಲ್ಕು ರಾಜ್ಯಗಳ ಅಭಿಪ್ರಾಯಗಳನ್ನು ಪರಿಗಣಿಸಬೇಕಾಗುತ್ತದೆ. ಮೂರು ರಾಜ್ಯಗಳು ವಿರೋಧಿಸುತ್ತವೆ ಎಂಬುದನ್ನು ನಿರ್ಲಕ್ಷಿಸಲೂ ಸಾಧ್ಯವಾಗದು. ಎಲ್ಲರ ಅಭಿಪ್ರಾಯಗಳೂ ಮುಖ್ಯ ಎಂದರು. ಮೂರೂ ರಾಜ್ಯಗಳ ವಿರೋಧವಿದ್ದ ಸಂದರ್ಭದಲ್ಲಿ ನೀವು ಕರ್ನಾಟಕವನ್ನು ಯೋಜನೆಯಿಂದ ಹಿಂದೆ ಸರಿಯಲು ಅದೇಶಿಸುತ್ತೀರಾ ಎಂಬ ಪ್ರಶ್ನೆಗೆ, ಎಲ್ಲರ ಅಭಿಪ್ರಾಯ ಆಧರಿಸಿ ಒಂದು ತೀರ್ವನಕ್ಕೆ ಬರಲಾಗುತ್ತದೆ. ಅದಕ್ಕೆ ವಿಸõತ ಚರ್ಚೆ ಅಗತ್ಯ ಎಂದುತ್ತರಿಸಿದರು.
ಮೇಕೆದಾಟು ಯೋಜನೆಯೊಂದಿಗೆ ಮುಂದುವರಿಯುತ್ತೇವೆ ಎಂದು ಕರ್ನಾಟಕ ಹೇಳಿದೆ. ಯೋಜನೆಗೆ ಕೇಂದ್ರ ಸರ್ಕಾರದಿಂದ ಇನ್ನೂ ವಿವಿಧ ಹಂತಗಳ ಸಮ್ಮತಿ (ಕ್ಲಿಯರೆನ್ಸ್) ಸಿಕ್ಕಿಲ್ಲ. ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ನಾಲ್ಕು ರಾಜ್ಯಗಳು ಕುಳಿತು ಚರ್ಚೆ ಮಾಡಿದಾಗ ಮಾತ್ರ ಯೋಜನೆ ಬಗ್ಗೆ ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಸಾಧ್ಯ ಎಂದು ಎಸ್.ಕೆ.ಹಲ್ದಾರ್ ತಿಳಿಸಿದರು.
ಇದು ಪ್ರಾಧಿಕಾರದ 14ನೇ ಸಭೆಯಾಗಿದ್ದು, ತಮಿಳುನಾಡು ಮತ್ತು ಪುದುಚೇರಿಗೆ ಕರ್ನಾಟಕದಿಂದ ಹರಿಸಬೇಕಿರುವ ಬಾಕಿ ನೀರಿನ ಪ್ರಮಾಣದ ಬಗ್ಗೆಯೂ ಚರ್ಚೆಯಾಗಿದೆ. ಬಾಕಿ ನೀರನ್ನು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿದ್ದೇವೆ. ಮುಂದಿನ ಸಭೆ ಬಳಿಕ ಬಾಕಿ ನೀರಿನ ಒಟ್ಟಾರೆ ಪ್ರಮಾಣದ ಮಾಹಿತಿ ನೀಡಲಾಗುವುದು ಎಂದರು.
ನೀರು ಬಿಡುಗಡೆಗೆ ಮನವಿ:ತಮಿಳುನಾಡು ಹಾಗೂ ಪುದುಚೇರಿಗಳು ಜೂನ್​ನಿಂದ ಸೆಪ್ಟಂಬರ್ ತನಕ ಬಾಕಿ ನೀರು ಬಿಡುಗಡೆಗೆ ಮನವಿ ಮಾಡಲಿವೆ. ಅಕ್ಟೋಬರ್ 7ಕ್ಕೆ ಮತ್ತೊಂದು ಸಭೆ ನಡೆಯಲಿದೆ. ಅಂದು ನೀರು ಬಿಡುಗಡೆ ಬಗ್ಗೆ ಚರ್ಚೆಯಾಗಲಿವೆ. ಕಳೆದ ಸಭೆಯಲ್ಲಿ ತಮಿಳುನಾಡಿಗೆ 6-7 ಟಿಎಂಸಿ ನೀರು ಬಿಡುವಂತೆ ಸೂಚನೆ ನೀಡಲಾಗಿತ್ತು.
ವಿರೋಧ-ಮುಂದೇನು?:ಮುಂದಿನ ಸಭೆಗಳಲ್ಲೂ ಮೇಕೆದಾಟು ವಿಚಾರಕ್ಕೆ ಕಣಿವೆ ರಾಜ್ಯಗಳು ವಿರೋಧ ವ್ಯಕ್ತಪಡಿಸುವುದು ಖಚಿತವಾಗಿದ್ದು, ಕರ್ನಾಟಕದ ಮುಂದಿನ ಹೋರಾಟದ ರೂಪ ಹೇಗಿರಲಿದೆ ಎಂಬುದು ಸದ್ಯದ ಪ್ರಶ್ನೆ. ರಾಜ್ಯಗಳ ನಡುವೆ ಚರ್ಚೆಯಾಗದಿದ್ದಲ್ಲಿ ಪ್ರಾಧಿಕಾರ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಕರ್ನಾಟಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತದೋ ಅಥವಾ ಸುಪ್ರೀಂಕೋರ್ಟ್​ನಿಂದ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತದೋ ಎಂಬುದನ್ನು ಕಾಡುನೋಡಬೇಕಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + sixteen =
Remember me
