ನವದೆಹಲಿ:ಖ್ಯಾತ ಜ್ಯೋತಿಷಿ ಬೇಜಾನ್​ ದಾರೂವಾಲಾ ಅವರು ಇಂದು ಗುಜರಾತ್​ನ ಅಹ್ಮದಾಬಾದ್​ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಬೇಜಾನ್​ ದಾರೂವಾಲಾ ಅವರಲ್ಲಿ ಕೊವಿಡ್​-19 ದೃಢಪಟ್ಟಿತ್ತು. ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅಹ್ಮದಾಬಾದ್​ ಮುನ್ಸಿಪಲ್​ ಕಾರ್ಪೋರೇಶನ್​ ದಾಖಲಿಸಿದೆ. ಹಾಗೇ ಸಾಮಾಜಿಕ ಜಾಲತಾಣಗಳಲ್ಲೂ ಇದೇ ಸುದ್ದಿ ಹರಿದಾಡುತ್ತಿದೆ. ಆದರೆ ಅವರ ಕುಟುಂಬದವರು, ಬೇಜಾನ್​ ಅವರಿಗೆ ಕರೊನಾ ಇರಲಿಲ್ಲ. ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ. ಆದರೆ ಅವರು ಮೃತಪಟ್ಟಿದ್ದಕ್ಕೆ ನಿಜವಾದ ಕಾರಣ ಏನು ಎಂಬುದು ಇನ್ನೂ ಗೊಂದಲಮಯವಾಗಿಯೇ ಉಳಿದಿದೆ.
ಇದನ್ನೂ ಓದಿ:ಹೊರಬರಲು ಹೆದರಿ ಪುಟ್ಟ ಮನೆಯಲ್ಲಿ ಮುದುರಿ ಕುಳಿತಿದ್ದಾರೆ ಇವರು; ಭಯಕ್ಕೆ ಕಾರಣ ಅಳುತ್ತ ಹೇಳಿದ್ದಾರೆ…
ದಾರೂವಾಲಾ ಅವರ ಶ್ವಾಸಕೋಶದಲ್ಲಿ ದ್ರವ ತುಂಬಿಕೊಂಡಿತ್ತು. ಇದರಿಂದಾಗಿ ಅವರಿಗೆ ಉಸಿರಾಟದಲ್ಲಿ ತೀವ್ರ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸಲಿಲ್ಲ ಎನ್ನಲಾಗಿದೆ.
ಕಳೆದ ಸಾವಿರ ವರ್ಷಗಳಲ್ಲಿ ಅತ್ಯಂತ ಮನ್ನಣೆ ಗಳಿಸಿದ್ದ 100 ಮಹಾನ್ ಜ್ಯೋತಿಷಿಗಳಲ್ಲಿ ಬೇಜಾನ್​ ದಾರೂವಾಲಾ ಕೂಡ ಓರ್ವರು ಎಂದು ಮಿಲೆನಿಯಂ ಬುಕ್ ಆಫ್ ಪ್ರೊಫೆಸಿಯಲ್ಲಿ ಉಲ್ಲೇಖವಾಗಿದೆ ಎಂದು ಬೇಜಾನ್​ ಅವರ ಅಧಿಕೃತ ವೆಬ್​ಸೈಟ್​ನಲ್ಲಿ ದಾಖಲಾಗಿದೆ.
ಇದನ್ನೂ ಓದಿ:‘ಕರೊನಾ ಬಗ್ಗೆ ತಿಳಿವಳಿಕೆ ಹೇಳಿದ್ದಕ್ಕೆ ಹೊಡೆದರು, ನಿಂದಿಸಿದರು’: ಆಶಾ ಕಾರ್ಯಕರ್ತೆಯ ಅಳಲು
ಇವರು ಮೊದಲು ಅಹ್ಮದಾಬಾದ್​ನಲ್ಲಿ ಇಂಗ್ಲಿಷ್ ಪ್ರೊಫೆಸರ್​ ಆಗಿದ್ದರು. ನಂತರ ಜ್ಯೋತಿಷ್ಯವನ್ನೇ ವೃತ್ತಿಯನ್ನಾಗಿ ತೆಗೆದುಕೊಂಡರು. ಅಲ್ಲದೆ ಕೆಲವು ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರೂ ಆಗಿದ್ದರು.
ಭಗವಾನ್​ ಗಣೇಶನ ಅನುಯಾಯಿ ಆಗಿದ್ದ ಬೇಜಾನ್​ ದಾರೂವಾಲಾ, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಭವಿಷ್ಯ ನುಡಿದಿದ್ದರು. 2014ರ ಲೋಕಸಭಾ ಚುನಾವಣೆ ವೇಳೆ ಮೋದಿ ಗೆಲುವಿನ ಬಗ್ಗೆ ತಮ್ಮ ಅಧಿಕೃತ ವೆಬ್​ಸೈಟ್​ನಲ್ಲಿ ಬರೆದಿದ್ದ ಅವರು, ನರೇಂದ್ರ ಮೋದಿಯವರ ಗ್ರಹಗತಿಯ ಪ್ರಕಾರ ಚಂದ್ರ ಮತ್ತು ಮಂಗಳ ಒಟ್ಟಿಗಿದ್ದಾರೆ. ಚಂದ್ರನೆಂದರೆ ಜನಪ್ರಿಯತೆ, ಮಂಗಳ ಶಕ್ತಿ. ಇವೆರಡೂ ಒಟ್ಟಿಗಿರುವ ಕಾರಣ ಚುನಾವಣೆಯಲ್ಲಿ ಮೋದಿ ಗೆಲ್ಲುತ್ತಾರೆ. ಆಟದಲ್ಲಿ ಜಯ ಅವರದ್ದೇ ಎಂದು ಹೇಳಿದ್ದರು. ಅದು ನಿಜವಾಗಿತ್ತು.
ಬೇಜಾನ್​ ಅವರು ನುಡಿದಿದ್ದ ಭವಿಷ್ಯ ಬಹುತೇಕ ಎಲ್ಲವೂ ನಿಜವಾಗಿದ್ದವು. ಅವರ ಖ್ಯಾತಿಯೂ ಹೆಚ್ಚಾಗುತ್ತ ಹೋಗಿತ್ತು. ಗುಜರಾತ್​ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬೇಜಾನ್​ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)
ಇದನ್ನೂ ಓದಿ:ಹಸುವಿನ ಮೈ ತೊಳೆಸಲು ಕೆರೆಗೆ ಇಳಿದ ಬಾಲಕರು ನೀರುಪಾಲು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
