ನವದೆಹಲಿ:ನಮ್ಮ ಮಗಳು ತೀರಿಕೊಂಡು 11 ವರ್ಷಗಳಾಗುತ್ತ ಬಂದರು ದೇಶದಲ್ಲಿ ಇದುವರೆಗೂ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಎಲ್ಲ ಸಹಕಾರದಿಂದ ನಮಗೆ ನ್ಯಾಯ ಸಿಕ್ಕಿದೆ. ಆದರೆ, ನ್ಯಾಯಾಲಯದಲ್ಲಿ ಹಲವು ಪ್ರಕರಣಗಳ ವಿಚಾರಣೆ ಬಾಕಿಯಿದ್ದು, ಇದಕ್ಕೆಲ್ಲಾ ಮುಕ್ತಿ ಸಿಗುವುದು ಯಾವಾಗ ಎಂದು ನಿರ್ಭಯಾ ತಾಯಿ ಆಶಾ ದೇವಿ ಪ್ರಶ್ನಿಸಿದ್ದಾರೆ.
ಡಿಸೆಂಬರ್​ 16, 2012ರಂದು ನಡೆದಿದ್ದ ವೈದ್ಯಕೀಯ ವಿದ್ಯಾರ್ಥಿನಿ ನಿರ್ಭಯಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಕೆರಳಿಸಿತ್ತು. ಪ್ರಕರಣದ ಕುರಿತು ಮಾತನಾಡಿರುವ ನಿರ್ಭಯಾ ತಾಯಿ ಆಶಾ ದೇವಿ ಕಾನೂನು ಸುವ್ಯವಸ್ಥೆ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳು ಇನ್ನೂ ಕಡಿಮೆಯಾಗಿಲ್ಲ. ಕಾನೂನುಗಳನ್ನು ರಚಿಸಲಾಗಿದೆ, ಆದರೆ ಏನನ್ನೂ ಮಾಡಲಾಗಿಲ್ಲ. ಕೆಲವೊಮ್ಮೆ ಏನೂ ಬದಲಾಗುವುದಿಲ್ಲ ಎಂಬ ಭಾವನೆಯಿಂದ ನಾವು ನಿರಾಶೆಗೊಳ್ಳುತ್ತೇವೆ. ಅನೇಕ ಪ್ರಕರಣಗಳು ನಮಗೂ ಬರುತ್ತವೆ ಮತ್ತು ನಾವು ಅವರಿಗೆ ನಮ್ಮ ನೈತಿಕ ಬೆಂಬಲವನ್ನು ಮಾತ್ರ ನೀಡಬಹುದಾಗಿದೆ.
ಇದನ್ನೂ ಓದಿ: KSRTC ಟ್ರೇಡ್‌ಮಾರ್ಕ್ ವಿವಾದ; ಕೇರಳದ ಅರ್ಜಿ ವಜಾ: ಕರ್ನಾಟಕಕ್ಕೆ ಜಯ
ನಮ್ಮ ಮಗಳ ವಿಷಯದಲ್ಲಿ ಇಡೀ ದೇಶವೇ ನಮ್ಮ ಬೆಂಬಲಕ್ಕೆ ನಿಂತಿತ್ತು ಮತ್ತು ಫಾಸ್ಟ್ ಟ್ರ್ಯಾಕ್ ಕೋರ್ಟ್ ನಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಸಹಕಾರಿಯಾಗಿದೆ. ಅತ್ಯಾಚಾರದ ಘಟನೆಗಳು ನಡೆದಾಗ, ಸಂತ್ರಸ್ತೆಯ ಜೊತೆ ಯಾರೂ ನಿಲ್ಲುವುದಿಲ್ಲ. ನಮ್ಮ ಮಗಳ ವಿಷಯದಲ್ಲಿ ಪ್ರತಿಭಟನೆಗಳು ನಡೆದಾಗ, ಹಲವಾರು ಮಹಿಳೆಯರು ತಮ್ಮ ಮಕ್ಕಳೊಂದಿಗೆ ಅದರಲ್ಲಿ ಭಾಗವಹಿಸಿದರು
ಜನರು ಸಾಕಷ್ಟು ಹೋರಾಟ ಮಾಡಿದರು ದೇಶದಲ್ಲಿ ಏನೂ ಬದಲಾಗಿಲ್ಲ. ಒಬ್ಬ ನಿರ್ಭಯಾಳಿಗೆ ನ್ಯಾಯ ಕೊಟ್ಟರೆ ಎಲ್ಲರಿಗೂ ನ್ಯಾಯ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದ್ದು, ಸಮಯಕ್ಕೆ ಸರಿಯಾಗಿ ನ್ಯಾಯ ಸಿಗಬೇಕಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಆಶಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 1 =
Remember me
